Article Bollywood Gossips %e0%b2%ae%e0%b2%a4%e0%b2%a6%e0%b2%be%e0%b2%a8 %e0%b2%ae%e0%b2%be%e0%b2%a1%e0%b2%a6 %e0%b2%ac%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d %e0%b2%98%e0%b2%9f%e0%b2%be%e0%b2%a8%e0%b3%81%e0%b2%98%e0%b2%9f%e0%b2%bf%e0%b2%97%e0%b2%b3%e0%b3%81 109050400093_1.htm

Daily Horoscope

Select Your Language

Notifications

webdunia
webdunia
webdunia
webdunia

ಮತದಾನ ಮಾಡದ ಬಾಲಿವುಡ್ ಘಟಾನುಘಟಿಗಳು!

ಬಾಲಿವುಡ್ ನಟನಟಿಯರು
IFM
ಜಾಹಿರಾತಿನಲ್ಲಿ ನನ್ನ ಸೌಂದರ್ಯದ ರಹಸ್ಯ ... ಸೋಪು ಎನ್ನುವ ಮಾದಕ ನಟಿ ತನ್ನ ಸೌಂದರ್ಯದಲ್ಲೇ ಮರುಳುಮಾಡುತ್ತಾಳೆ. ಅಸಲಿಗೆ ಆಕೆ ಆ ಸೋಪು ಬಳಸುತ್ತಾಳೋ ಇಲ್ಲವೋ ದೇವನೇ ಬಲ್ಲ. ಪಾಪ, ಗ್ರಾಹಕ ಮಾತ್ರ ಆಕೆಯ ನುಣುಪು ತ್ವಚೆಯನ್ನು ನೋಡಿ ಮೋಡಿಗೆ ಬಿದ್ದು, ಆ ಸೋಪನ್ನು ಕೊಂಡು ತಂದು ಮೈಗೆ ಇಡಿಯಾಗಿ ತಿಕ್ಕಿಕೊಂಡಿದ್ದೇ ಬಂತು. ಪರಿಣಾಮ... ಟುಸ್ಸ್. ಹಾಗೆಯೇ, ಇಲ್ಲಿ ಬಾಲಿವುಡ್ ನಟನಾ ಮಣಿಯರು ಒಬ್ಬರಾದ ಮೇಲೆ ಒಬ್ಬರು ಓಟು ಮಾಡಿ ಎಂದೆಲ್ಲಾ ಭಾಷಣ ಬಿಗಿದರೂ ತಾವಂತೂ ಚಾಪೆ ಹೊದ್ದು ಮಲಗಿದ್ದಾರೆ. ಓಟು ಮಾಡಲು ಹೋಗದೆ ಇದ್ದ ಬಾಲಿವುಡ್ ನಟನಟಿಯರ ಪಟ್ಟಿ ಇಷ್ಟುದ್ದದ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ.

ಕರಣ್ ಜೋಹರ್ ಹಾಗೂ ತರಣ್ ಮನ್ಸುಖಾನಿ ಅವರ ಜಾಹಿರಾತಿನಲ್ಲಿ ಓಟು ಮಾಡಿ ಎಂದಿದ್ದ ಬಾಲಿವುಡ್‌ನ ಝೀರೋ ಫಿಗರ್ ಕರೀನಾ ಕಪೂರ್ ತಾನೇ ಸ್ವತಃ ಓಟು ಮಾಡಿಲ್ಲ. ಆಕೆ ತನ್ನ ಇನಿಯ ಸೈಫ್ ಆಲಿ ಖಾನ್, ವಿವೇಕ್ ಒಬೆರಾಯ್ ಜತೆಗೆ ಅಮೆರಿಕದಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾಳೆ. ಹಾಗಾಗಿ ಆಕೆಗೆ ಕಾರಣ ಕೊಡಲು ಶೂಟಿಂಗ್ ಅನಾಯಾಸವಾಗಿ ಸಿಕ್ಕುತ್ತದೆ. ಆದರೆ, ಕಿಂಗ್ ಖಾನ್ ಶಾರುಖ್ ದಕ್ಷಿಣ ಆಫ್ರಿಕಾದಿಂದ ಓಟಿಗೆಂದೇ ಓಡೋಡಿ ಬಂದಿಲ್ಲವೇ... ಅಮೀರ್ ಖಾನ್ ಯುಎಸ್‌ನಿಂದ ಓಟು ಹಾಕಲಿಕ್ಕಾಗಿಯೇ ಮುಂಬೈಗೆ ಹಾರಿ ಬಂದಿದ್ದಾರೆ. ಹಾಗಾಗಿ ಓಟು ಹಾಕದಿರುವುದಕ್ಕೆ ಶೂಟಿಂಗ್ ನೆಪ ಅಲ್ಲವಷ್ಟೆ ಅಂತ ಕೇಳುತ್ತಿದ್ದಾರೆ ಆಕೆಯ ಜಾಹಿರಾತು ವೀಕ್ಷಿಸಿ ಓಟು ಮಾಡಿ ಬಂದ ಪುಣ್ಯಾತ್ಮರು.

webdunia
IFM
ಹೋಗಲಿ ಬಿಡಿ. ಕರೀನಾಳ ಮಾಜಿ ಪ್ರೇಮಿ, ಶಾಹಿದ್ ಕಪೂರ್ ಎಂಬ ಚಾಕೋಲೇಟ್ ಸುಂದರಾಂಗನಿಗೇನಾಗಿತ್ತು ದಾಡಿ? ಶೂಟಿಂಗೂ ಇರಲಿಲ್ಲ, ಏನೂ ಇರಲಿಲ್ಲ. ಮುಂಬೈ ನಗರದಲ್ಲಿ ಮನೆಯಲ್ಲಿ ಬಿದ್ದುಕೊಂಡು ಕಾಲು ಚಾಚಿ ಮಲಗಿದ್ದರೂ ಎದ್ದು ಬಂದು ಓಟು ಮಾಡಿಲ್ಲ ಈ ಶಾಹಿದ್. ಅತ್ತ ಆತನ ಆತ್ಮಸಂಗಾತಿ ಪ್ರಿಯಾಂಕಾ ಛೋಪ್ರಾ ಕೂಡಾ ಮತದಾನ ಕೇಂದ್ರದಲ್ಲಿ ಪತ್ತೆಯೇ ಇಲ್ಲ. ಕರಣ್ ಜೋಹರ್‌ ಅವರ ಜಾಹಿರಾತಿನಲ್ಲಿ ಫುಲ್ ಎಮೋಶನಲ್ ಆಗಿ ಜನತೆಗೆ ಮರೆಯದೆ ಮತನೀಡಿ. ಪ್ರಜೆಯ ಹಕ್ಕು ಎಂದೆಲ್ಲ ಬೊಗಳೆ ಬಿಟ್ಟಾಕೆ ಯಾಕೆ ಹಕ್ಕು ಚಲಾಯಿಸಿಲ್ಲ ಎಂದು ಈಗ ಪ್ರಜೆಗಳೇ ಕೇಳುತ್ತಿದ್ದಾರೆ. ಪ್ರಿಯಾಂಕಾ- ಶಾಹಿದ್ ಜತೆಗೇ ಎಲ್ಲಾದರೂ...!? ಶಾಂತಂ ಪಾಂಪಂ.. ದೊಡ್ಡವರ ವಿಷ್ಯ ಯಾಕೆ ಬಿಡಿ.

ಏನೋ ಪಾಪ, ಇತ್ತೀಚೆಗಷ್ಟೆ ಶಾಹಿದ್- ಪ್ರಿಯಾಂಕ ಮನಬಿಚ್ಚಿ ಪ್ರೇಮ ಹಂಚಿಕೊಳ್ಳುತ್ತಿದ್ದಾರೆ. ಚುನಾವಣೆ ದಿನವೇ ಅವರಿಗೆ ಖಾಸಗಿಯಾಗಿ ಒಂದಿಷ್ಟು ಸಮಯ ಸಿಕ್ಕಿರಬಹುದಪ್ಪ. ಎಂಜಾಯ್ ಮಾಡಲಿ ಬಿಡಿ ಅಂದುಕೊಂಡು ಪ್ರೇಮಿಗಳು ಎಂಬ ಕಾರಣಕ್ಕೆ ಎಕ್ಸ್ಯೂಸ್ ಕೊಡೋಣ ಅಂತೀರಾ, ಸರಿ. ಆದರೆ ದಾರಿಯುದ್ದಕ್ಕೂ ಚುನಾವಣಾ ಪ್ರಚಾರದಲ್ಲಿ ಜನರ ಕಣ್ಮನ ಸೆಳೆದಿದ್ದ ಮಿಸ್ಟರ್ ಟಾಪ್‌ಲೆಸ್, ಬ್ಯಾಡ್ ಬಾಯ್ ಸಲ್ಮಾನ್‌ ಖಾನ್‌ ಮಾತ್ರ ಓಟು ಮಾಡದಿದ್ದುದು ತಪ್ಪಿನ ಪರಮಾವಧಿ ಅನ್ನುತ್ತಾರೆ ಹಲವರು. ಮೊನ್ನೆ ಮೊನ್ನೆ ಕರ್ನಾಟಕಕ್ಕೂ ಬಂದು ಪ್ರಚಾರ ಮಾಡಿ ಜನರತ್ತ ಕೈಬೀಸಿದ್ದ ಸಲ್ಮಾನ್ ಅದೆಲ್ಲಿ ಅಡ್ಡಾದಿಡ್ಡಿ ಕಾರು ಓಡಿಸಿಕೊಂಡು ಮೈಮರೆತನೋ ಅಂತ ಹಲವರು ಹೇಳಿಕೊಳ್ಳುತ್ತಿದ್ದರೆ, ಅತ್ತ ಸಲ್ಮಾನ್ ಖಾನ್ ಲಂಡನ್‌ನಲ್ಲಿ ವೀರ್ ಚಿತ್ರದಲ್ಲಿ ಬ್ಯುಸಿಯಂತೆ.

ನಟರನ್ನಿಟ್ಟುಕೊಂಡು ಪ್ರಜೆಗಳಿಗೆ ಓಟು ಮಾಡುವ ಸಂದೇಶ ಹೊತ್ತ ಜಾಹಿರಾತು ವಿಡಿಯೋದ ಐಡಿಯಾ ಕೊಟ್ಟವರೇ ಸಾಕ್ಷಾತ್ ಇಮ್ರಾನ್ ಖಾನ್. ಅದಕ್ಕಾಗಿ ಬಾಲಿವುಡ್ ನಟನಟಿಯರನ್ನೆಲ್ಲ ಒಗ್ಗೂಡಿಸಿ ಕರಣ್ ಜೋಹರ್ ಹಾಗೂ ತರುಣ್ ಮನ್ಸುಖಾನಿ ಜತೆ ಸೇರಿ ಈ ಜಾಹಿರಾತು ಹೊರಬರಲು ಹಗಲಿರುಳು ಶ್ರಮಿಸಿದವರೂ ಇಮ್ರಾನ್ ಖಾನ್. ಇಂತಿಪ್ಪ ಇಮ್ರಾನ್ ಮಾತ್ರ ಓಟು ಹಾಕಲು ಹೋಗಲಿಲ್ಲ. ಕಾರಣ ಅವರು ಅಮೆರಿಕನ್ ಪ್ರಜೆ!

webdunia
PTI
ಇನ್ನು ಹೇಳಿ ಕೇಳಿ ಪ್ರೀತಿ ಝಿಂಟಾ, ಶಿಲ್ಪಾ ಶೆಟ್ಟಿ ಓಟು ಹಾಕುತ್ತಾರಾ? ಖಂಡಿತ ಸಾಧ್ಯವಿಲ್ಲ. ಅತ್ತ ಐಪಿಎಲ್‌ನಲ್ಲಿ ರನ್ನು, ವಿಕೆಟ್ಟುಗಳ ಲೆಕ್ಕಾಚಾರದಲ್ಲಿ ಭಾರತದಲ್ಲಿ ಮತದಾನ ಇದೆ ಎಂಬುದೇ ಈ ಇಬ್ಬರು ಬೆಡಗಿಯರಿಗೆ ಮರೆತು ಹೋಗಿದೆ. ದಕ್ಷಿಣದ ಬಾಲಿವುಡ್ ಬೆಡಗಿಯರಾದ ದೀಪಿಕಾ ಪಡುಕೋಣೆ, ಆಸಿನ್ ಅವರ್ಯಾರೂ ಕೂಡಾ ತಮ್ಮ ಊರಿಗೆ ಬಂದು ಮತ ಹಾಕುವ ತಾಳ್ಮೆಯನ್ನು ತೋರಿಲ್ಲ. ಮುಂಬೈಯಲ್ಲೇ ಹಾಯಾಗಿದ್ದಾರೆ.

ಅಕ್ಷಯ್ ಕುಮಾರ್ ಕೂಡ ಮತದಾನ ಮಾಡಿಲ್ಲ. ಅವರು ಪ್ರಿಯದರ್ಶನ್ ಅವರ ದೇ ಧನಾ ಧನ್ ಚಿತ್ರದ ಶೂಟಿಂಗ್‌ನಲ್ಲಿ ಸಿಂಗಾಪುರದಲ್ಲಿ ಬ್ಯುಸಿ. ಮೂರು ಗಂಟೆಯಲ್ಲಿ ಚಾಂದಿನಿ ಚೌಕ್‌ನಿಂದ ಚೀನಾಕ್ಕೆ ಹೋದ ಅಕ್ಷಯ್‌ಗೆ ಸಿಂಗಾಪುರದಿಂದ ಮುಂಬೈಗೆ ಬರಲಾಗಲಿಲ್ಲವೇ ಅಂತ ಅಕ್ಷಯ್ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರಂತೆ. ಅತ್ತ ಬಾಲಿವುಡ್‌ನ ಜೋಡಿಗಳಾದ ಅಜಯ್ ದೇವಗನ್ ಹಾಗೂ ಕಾಜೋಲ್ ದಂಪತಿಗಳು ಮತದಾನದ ಕಡೆ ತಲೆಯೆತ್ತಿಯೂ ನೋಡಿಲ್ಲವಂತೆ. ಅವರಿಬ್ಬರೂ ಬೇಸಗೆಯನ್ನು ಕೆಲವು ದಿನ ಮಜಾವಾಗಿ ಕಳೆಯಲು ಗೋವಾಕ್ಕೆ ಪ್ರವಾಸ ಬಂದಿದ್ದಾರೆ. ಇನ್ನೆಲ್ಲಿಯ ಮತದಾನ?

ಬಾಂದ್ರಾ, ಜುಹು, ಅಂಧೇರಿ ಮತ್ತಿತರ ಮತದಾನ ಕೇಂದ್ರಗಳಲ್ಲಿ ಸ್ಟಾರ್ ಮತದಾರರ ದೊಡ್ಡ ಪಟ್ಟಿಯೇ ಇದೆ. ಶಾರುಖ್ ಖಾನ್, ಅಮೀರ್ ಖಾನ್, ಬಚ್ಚನ್ ಕುಟುಂಬದ ಅಮಿತಾಬ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ಹೃತಿಕ್ ರೋಷನ್, ರಣಬೀರ್ ಕಪೂರ್, ರಿಷಿ ಕಪೂರ್, ಸೋನಮ್ ಕಪೂರ್, ಜಾನ್ ಅಬ್ರಹಾಂ, ವಿದ್ಯಾ ಬಾಲನ್, ಫರ್ಹಾ ಅಕ್ತರ್... ಹೀಗೆ ಹಲವರು ಮತದಾನ ಮಾಡುವ ಮೂಲಕ ಹ್ಕಕು ಚಲಾಯಿಸಿದ್ದಾರೆ.
webdunia
IFM

Share this Story:

Follow Webdunia kannada