ಭಿಕ್ಷೆ ಬೇಡಿದ ಸೆಕ್ಸೀ ನಟಿ ನೇಹಾ ಧೂಪಿಯಾ!!!
ನೇಹಾ ಧೂಪಿಯಾ ದೆಹಲಿಯ ಬೀದಿಗಳಲ್ಲಿ ಭಿಕ್ಷೆ ಬೇಡಿದ ಕಥೆ ನಿಮಗೆ ಗೊತ್ತೇ? ಹೌದು. ನೇಹಾ ಧೂಪಿಯಾ ಎಂಬ ಮಾಜಿ 'ಮಿಸ್ ಇಂಡಿಯಾ ಯುನಿವರ್ಸ್' ದೆಹಲಿಯ ಬೀದಿಗಳಲ್ಲಿ ಭಿಕ್ಷೆ ಬೇಡಿದ್ದಾಳಂತೆ! ಕೆಲವರು ಆಕೆಗೆ ದುಡ್ಡು ಕೊಟ್ಟು ಮುನ್ನಡೆದಿದ್ದಾರಂತೆ! ಇದನ್ನು ಹೇಳಿದ್ದು ಸ್ವತಃ ನೇಹಾಳೇ. ಹಾಗಂತ ಆಕೆ ಯಾವುದೋ ಹಿಂದಿ ಚಿತ್ರದ ಶೂಟಿಂಗ್ ಸಂದರ್ಭ ಅಭಿನಯಕ್ಕಾಗಿ ಭಿಕ್ಷೆ ಎತ್ತಿದ್ದಲ್ಲ. ನಿಜ ಜೀವನದಲ್ಲೇ ಭಿಕ್ಷೆ ಎತ್ತಿದ್ದು!!!ನೇಹಾಳಂತ ಹಾಟ್ ಸೆಕ್ಸೀ ಕನ್ಯೆಗೆ ಭಿಕ್ಷೆ ಬೇಡೋ ಗತಿ ಯಾಕೆ ಬಂತಪ್ಪಾ... ಎಂದು ತಲೆ ಕೆರೆದುಕೊಳ್ಳುವ ಮೊದಲೇ ಇಲ್ಲಿ ಕೇಳಿ. ನೇಹಾ ದೆಹಲಿಯ ಕಾಲೇಜೊಂದಕ್ಕೆ ಪದವಿಗೆ ಸೇರಿದ ಮೊದಲ ದಿನವೇ ಆಕೆಯ ಸೀನಿಯರ್ ವಿದ್ಯಾರ್ಥಿಗಳು ಆಕೆಯ ಮೇಲೆ ರ‌್ಯಾಗಿಂಗ್ ಮಾಡಿದ್ದರಂತೆ. ವಿಗ್ ಧರಿಸಿ ವಿಚಿತ್ರ ವೇಷದಲ್ಲಿ ಬೀದಿಯಲ್ಲಿ ಭಿಕ್ಷೆ ಬೇಡಿ ಬಾ ಎಂದು ಹಿರಿಯ ವಿದ್ಯಾರ್ಥಿಗಳು ಹೇಳಿದಾಗ ನೇಹಾ ಪಾತ್ರೆ ಕೈಯಲ್ಲಿ ಹಿಡಿದು ಬೀದಿಯುದ್ದಕ್ಕೂ 'ಅಮ್ಮಾ... ತಾಯೇ...' ಎಂದಳಂತೆ. ಅದೊಂದು ಭಯಂಕರ ಅನುಭವ. ನನ್ನ ಜೀವಮಾನದಲ್ಲಿ ನಾನು ಅನುಭವಿಸಿದ ತಮಷೆಯ ಸನ್ನಿವೇಶವದು. ಅದ್ನನು ನೆನೆಸಿಕೊಂಡರೆ ಈಗಲೂ ನಗು ಬರುತ್ತೆ ಎನ್ನುತ್ತಾಳೆ ಈ ನೇಹಾ.ಇನ್ನೊಬ್ಬರಿಗೆ ಯಾವುದೇ ತೊಂದರೆಯಾಗದಂತೆ ತಮಾಷೆಯಾಗಿ ರ‌್ಯಾಗಿಂಗ್ ಮಾಡಿದರೆ ಯಾವುದೇ ಅಡ್ಡಿಯಿಲ್ಲ. ಇಂಥ ತಮಾಷೆ ರ‌್ಯಾಗಿಂಗ್‌ನಿಂದ ಹಿರಿಯ ಸೀನಿಯರ್ ಹಾಗೂ ಜ್ಯೂನಿಯರ್ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ಬೆಸೆಯುತ್ತದೆ ಎಂದು ಥಿಯರಿಯನ್ನೇ ಹೇಳುತ್ತಾಳೆ ನೇಹಾ.
ಹಾಗಾದರೆ ಇದನ್ನೇ ನೇಹಾ ತನ್ನ ಜ್ಯೂನಿಯರ್ ವಿದ್ಯಾರ್ಥಿಗಳ ಮೇಲೆ ಪ್ರಯೋಗಿಸಿದ್ದಾಳಾ? ಅರ್ಥಾತ್ ಜ್ಯೂನಿಯರ್‌ಗಳಿಗೆ ನೇಹಾ ರ‌್ಯಾಗ್ ಮಾಡಿದ್ದಾಳಾ? ಎಂದರೆ ನೇಹಾ 'ಇಲ್ಲಪ್ಪ' ಎನ್ನುತ್ತಾಳೆ. ನಾವು ಸೀನಿಯರ್‌ಗಳಾದ ಮೇಲೆ ಬಂದ ಜ್ಯೂನಿಯರ್‌ಗಳಿಗೆ ಹೇಗೆಲ್ಲಾ ತಮಾಷೆಯಾಗಿ ರ‌್ಯಾಗ್ ಮಾಡಬೇಕೆಂದು ದೊಡ್ಡ ಪಟ್ಟಿಯನ್ನೇ ತಯಾರಿಸಿದ್ದೆವು. ಆದರೆ, ಮೊದಲ ದಿನ ಬಂದಾಗ ನನಗೆ ಕಾಲೇಜಿಗೆ ಹೋಗೋದಕ್ಕೇ ಬೋರ್ ಆಯಿತು. ನಾನು ನನ್ನ ಗೆಳತಿಯರಲ್ಲಿ, ಯಾರಪ್ಪಾ ಆ ಜ್ಯೂನಿಯರ್‌ಗಳನ್ನು ರ‌್ಯಾಗ್ ಮಾಡೋದು. ನಾನಂತೂ ನಿದ್ದೆ ಮಾಡುತ್ತೇನಪ್ಪಾ ಅಂತ ಹೇಳಿ ಗಡದ್ದಾಗಿ ನಿದ್ದೆ ಮಾಡಿದೆ ಅಂತಾಳೆ.ನೇಹಾ ಕಾಲೇಜಿಗೆ ಕರೆಕ್ಟಾಗಿ ಹೋಗುತ್ತಿದ್ದಳಾ? ಎಂದರೆ ಆಕೆ 'ಊಹೂಂ' ಎನ್ನುತ್ತಾಳೆ. ಕ್ಯಾಂಟೀನಿನಲ್ಲಿ ಮಸ್ತಾಗಿ ತಿಂದು ಕಾಲೇಜಿನಲ್ಲಿ ಸುಮ್ಮನೆ ನಾವು ಮೂರು ಮಂದಿ ಗೆಳತಿಯರು ಪಟ್ಟಾಂಗ ಹೊಡೆಯುತ್ತಿದ್ದೆವು. ನಮ್ಮ ಉಪನ್ಯಾಸಕರಿಗೂ ನಾವು ಉದ್ಧಾರವಾಗುವ ಗಿರಾಕಿಗಳಲ್ಲ ಅಂತ ಗೊತ್ತಾಗಿತ್ತು. ನಮ್ಮದು ತುಂಬ ಸ್ಟ್ರಿಕ್ಟಾದ ಕಾಲೇಜಾದರೂ, ನಾವು ಮಾತ್ರ ಯಾವಾಗಲೂ ಕ್ಲಾಸಿಗೆ ಬಂಕ್ ಹೊಡೆಯುತ್ತಿದ್ದೆವು ಎನ್ನುತ್ತಾಳೆ.ಅಲ್ಲದೆ, ಆಗೆಲ್ಲಾ ಡ್ರೆಸ್, ಫ್ಯಾಷನ್ ಬಗ್ಗೆ ಎಲ್ಲಾ ವಿಪರೀತ ಗಮನವಿರಲಿಲ್ಲ. ಕಾಲೇಜ್ ಲೈಫನ್ನು ಮಜಾ ಮಾಡೋದಷ್ಟೇ ಉದ್ದೇಶವಾಗಿತ್ತು. ದೆಹಲಿ ವಿಶ್ವವಿದ್ಯಾನಿಲಯದ ಆ ದಿನಗಳು ಮಾತ್ರ ಅದ್ಭುತ ಅನುಭವ ಅಂತಾಳೆ ಈ ಬೆಡಗಿ ನೇಹಾ.