Publish Date: Sat, 21 Jul 2007 (10:53 IST)
Updated Date: Sat, 21 Jul 2007 (10:53 IST)
ಬಾಲಿವುಡ್ ನಿರ್ದೇಶಕಿ ಭಾವನಾ ತಲ್ವಾರ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅವರಿಗೆ ಗುಸ್ಸಿ ಗ್ರೂಪ್ ಅವಾರ್ಡ್-07 ಪ್ರಶಸ್ತಿ ಲಭಿಸಿದೆ.
ಕೆನ್ಸ್ 60ನೇ ಅಂತಾರಾಷ್ಟ್ರೀಯ ಫಿಲ್ಮೋತ್ಸವದಲ್ಲಿ ತಮ್ಮ ಚೊಚ್ಚಲ ನಿರ್ದೇಶನ ಚಿತರದ ಮೂಲಕ ಪ್ರವೇಶಿಸಿದ ಭಾವನ ತಲ್ವಾರ್ ಮೊದಲ ಹಂತದಲ್ಲೇ ನಿರೀಕ್ಷೆಗೂ ಮೀರಿದ ಖ್ಯಾತಿ ಗಳಿಸಿದ್ದರು.
'ಧರ್ಮ್' ಭಾವನಾ ಅವರ ಚೊಚ್ಚಲ ನಿರ್ದೇಶನದ ಚಿತ್ರ. ಇದು ಬಹಳಷ್ಟು ಹೆಗ್ಗಳಿಕೆ ಪಾತ್ರವಾಗಿತ್ತಲ್ಲದೆ. ಮೊದಲ ಸಿನಿಮಾವಾಗಿದ್ದರೂ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಭಾವನಾ ಅವರ ಪ್ರತಿಭೆಗೆ ಸಾಕ್ಷಿ.
ಇದೀಗ ಜಿಜಿ ಪ್ರಶಸ್ತಿ ಇವರಿಗೆ ಬಂದಿದೆ. ಇದಕ್ಕೆ ಅರ್ಹರಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯೂ ಈಕೆಗಿದೆ. ಸೆಪ್ಟೆಂಬರ್ 3ರಂದು ವೆನಿಸ್‌ನ ಪ್ಲಾಝೋ ಗ್ರಾಸಿಯಲ್ಲಿ ಜರುಗಲಿರುವ 64ನೇ ವೆನಿಸ್ ಫಿಲ್ಮೋತ್ಸವದಲ್ಲಿ ಭಾವನಾಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.