Article Bollywood Gossips %e0%b2%ad%e0%b2%b0%e0%b2%b5%e0%b2%b8%e0%b3%86%e0%b2%af %e0%b2%ac%e0%b3%8c%e0%b2%b2%e0%b2%b0%e0%b3%8d %e0%b2%87%e0%b2%b6%e0%b2%be%e0%b2%82%e0%b2%a4%e0%b3%8d %e0%b2%b6%e0%b2%b0%e0%b3%8d%e0%b2%ae%e0%b2%be %e0%b2%87%e0%b2%a8%e0%b3%8d %e0%b2%b2%e0%b2%b5%e0%b3%8d 113072000030_1.htm

Daily Horoscope

Select Your Language

Notifications

webdunia
webdunia
webdunia
webdunia

ಭರವಸೆಯ ಬೌಲರ್ ಇಶಾಂತ್ ಶರ್ಮಾ ಇನ್ ಲವ್

ಇಶಾಂತ್ ಶರ್ಮಾ
PTI
ಭಾರತ ಕ್ರಿಕೆಟ್ ತಂಡ ಭರವಸೆಯ ಬೌಲರ್ ಇಶಾಂತ್ ಶರ್ಮಾ ಲವ್ವಲ್ಲಿ ಬಿದ್ದಿದ್ದಾರೆ ಎಂಬುದು ಸದ್ಯದ ಹಾಟ್ ಸುದ್ದಿ. ಹಾಗೆಂದು ಇವರು ಯಾವುದೇ ಸಿನೆಮಾ ತಾರೆಯರ ಹಿಂದೆ ಬಿದ್ದಿಲ್ಲ, ಅವರು ಕ್ಲೀನ್ ಬೌಲ್ಡ್ ಆಗಿರುವುದು ಭಾರತದ ಮಹಿಳಾ ಬಾಸ್ಕೆಟ್ಬಾಲ್ ತಂಡದ ಸ್ಟಾರ್ ಆಟಗಾರ್ತಿ ಪ್ರತಿಮಾ ಸಿಂಗ್ ಅವರಿಗೆ.

ದಿಲ್ಲಿ ಎಕ್ಸ್ಪ್ರೆಸ್ನ ಈ ಲವ್ಕಹಾನಿ ಬಹಿರಂಗಗೊಂಡಿದ್ದು ಪ್ರತಿಮಾ ಮೂಲಕವೇ. ಕಳೆದ ವಾರ ಬಿಡುಗಡೆಗೊಂಡ ಶ್ರೇಷ್ಠ ಅಥ್ಲೀಟ್ ಮಿಲ್ಕಾ ಸಿಂಗ್ ಜೀವನ ಚರಿತ್ರೆ ಆಧರಿಸಿದ ಭಾಗ್ ಮಿಲ್ಕಾ ಭಾಗ್ ಚಿತ್ರವನ್ನು ದೆಹಲಿಯ ಥಿಯೇಟರ್ ಒಂದರಲ್ಲಿ ಜೊತೆಯಾಗಿ ಕುಳಿತು ನೋಡಿದ್ದಾರಂತೆ. ಇವರಿಬ್ಬರನ್ನು ನೋಡಿದವರು ಈ ಗಾಸಿಪ್ ಹುಟ್ಟಿಹಾಕಿಲ್ಲ. ಬದಲಾಗಿ ಇಶಾಂತ್ ಗೆಳತಿಯೇ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇಂಗ್ಲೆಂಡ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಹಾಗೂ ವೆಸ್ಟ್ಇಂಡೀಸ್ ತ್ರಿಕೋನ ಸರಣಿ ಮುಗಿಸಿ ಬಂದಿರುವ ಇಶಾಂತ್ ಜಿಂಬಾಬ್ವೆ ಪ್ರವಾಸ ಕೈಗೊಳ್ಳುವ ಮುನ್ನ ದೆಹಲಿಯ ಥಿಯೇಟರ್, ಶಾಪಿಂಗ್ಮಾಲ್ಗಳಲ್ಲಿ ಗೆಳತಿ ಜೊತೆ ಕಾಣಿಸಿಕೊಳ್ಳುತ್ತಿದ್ದಾರಂತೆ. ಪ್ರತಿಭಾ ದಿಲ್ಲಿಯಲ್ಲಿ ಬಾಸ್ಕೆಟ್ಬಾಲ್ ಆಡುವ ವೇಳೆ ಇಶಾಂತ್ ಕೂಡಾ ಉಪಸ್ಥಿತರಿದ್ದರು. ಮೊದಲ ನೋಟದಲ್ಲೇ ಬೆಳೆದ ಸ್ನೇಹ ಇದೀಗ ಪ್ರೀತಿಗೆ ತಿರುಗಿದೆಯಂತೆ. ಮುಂದೇನಾಗಲಿದೆಯೋ ಕಾದು ನೋಡಬೇಕಷ್ಟೇ.

Share this Story:

Follow Webdunia kannada