Article Bollywood Gossips %e0%b2%ad%e0%b2%af%e0%b3%8b%e0%b2%a4%e0%b3%8d%e0%b2%aa%e0%b2%be%e0%b2%a6%e0%b2%a8%e0%b3%86 %e0%b2%86%e0%b2%a7%e0%b2%b0%e0%b2%bf%e0%b2%b8%e0%b2%bf %e0%b2%85%e0%b2%ae%e0%b3%80%e0%b2%b0%e0%b3%8d %e0%b2%9a%e0%b2%bf%e0%b2%a4%e0%b3%8d%e0%b2%b0 107112100013_1.htm

Daily Horoscope

Select Your Language

Notifications

webdunia
webdunia
webdunia
webdunia

ಭಯೋತ್ಪಾದನೆ ಆಧರಿಸಿ " ಅಮೀರ್ " ಚಿತ್ರ

ಭಯೋತ್ಪಾದನೆ
IFM
ಜಗತ್ತಿನಾದ್ಯಂತ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು 2006ರ ಮುಂಬಯಿ ರೈಲು ಬಾಂಬ್ ಸ್ಫೋಟದ ಕುರಿತು ಜಾಗತಿಕವಾಗಿ ಹೆಚ್ಚುತ್ತಿರುವ ಕಳವಳವನ್ನು ಆಧರಿಸಿ,ಸಾಮಾನ್ಯ ಜನರ ದೃಷ್ಟಿಯಲ್ಲಿ ಭಯೋತ್ಪಾದನೆಯನ್ನು ಸೆರೆಹಿಡಿಯುವ ಪ್ರಯತ್ನವಾಗಿ, ನೂತನ ಚಿತ್ರವೊಂದು ನಿರ್ಮಾಣವಾಗಲಿದೆ.

ಸಿನಿಮಾ ಉದ್ಯಮಕ್ಕೆ ಹೊಸಬರಾಗಿರುವ ನಿರ್ದೇಶಕ ರಾಜ್‌ಕುಮಾರ್ ಗುಪ್ತಾ, ಸಾಫ್ಟವೇರ್ ಇಂಜಿನಿಯರೊಬ್ಬರು ಮುಂಬೈಗೆ ಮರಳುವ ಸಂದರ್ಭದಲ್ಲಿ ತನಗರಿವಿಲ್ಲದಂತೆಯೇ ಭಯೋತ್ಪಾದನೆಯ ಜಾಲಕ್ಕೆ ಸಿಲುಕಿ ಹೇಗೆ ಕೊಲ್ಲಲ್ಪಡುತ್ತಾನೆ ಎಂಬುದನ್ನು ವಿವರಿಸುವ " ಅಮೀರ್ " ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.

ರಂಗ ನಟ ಹಾಗೂ ಟೆಲಿವಿಶನ್ ಸ್ಟಾರ್ ರಾಜೀವ್ ಖಾಂಡೇವಾಲಾ ಈ ಚಿತ್ರದಲ್ಲಿ ನಾಯಕತ್ವದ ಪಾತ್ರದಲ್ಲಿ ನಟಿಸುತ್ತಿದ್ದು, ಇದು ಬಾಲಿವುಡ್‌ನಲ್ಲೇ ರಾಜೀವ್ ಅವರ ಚೊಚ್ಚಲ ಪಾತ್ರವಾಗಿದೆ. ಇವರೊಂದಿಗೆ ಇತರ ಪ್ರಸಿದ್ದ ರಂಗನಟರಾದ ಜಿಲ್ಮಿಲಿ, ಜಾಗ್ರೆ ರಾವ್ ಮುಂತಾದವರೂ ಕೂಡ ಅಭಿನಯಿಸಲಿದ್ದಾರೆ.

ಇದು ಮುಂಬೈಗೆ ಸಂಬಂಧಪಟ್ಟ ಚಿತ್ರವಾದ ಕಾರಣ ಹೆಚ್ಚಿನ ಭಾಗವು ಮುಂಬೈನಲ್ಲೇ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿನ ಎರಡು ದೃಶ್ಯಗಳು ಮಾತ್ರ ನ್ಯೂಯಾರ್ಕ್ ಮತ್ತು ಲಂಡನ್‌ನಲ್ಲಿ ಚಿತ್ರೀಕರಣಗೊಳ್ಳಲಿದೆ. ನ್ಯೂಯಾರ್ಕ್‌ನಿಂದ ಮುಂಬೈಗೆ ಆಗಮಿಸುತ್ತಿದ್ದ ವೃತ್ತಿನಿರತ ಮುಸ್ಲಿಂ ಯುವಕನೊಬ್ಬ, ವಿಮಾನನಿಲ್ದಾಣದಲ್ಲಿ ತನ್ನ ಬಂಧುಬಳಗದವರಿಂದ ಸ್ವಾಗತಗೊಳ್ಳುವ ಬದಲು, ಬಾರತದ ಹಣಕಾಸು ಕೇಂದ್ರವೊಂದನ್ನು ಧ್ವಂಸಮಾಡುವ ಜಟಿಲ ಭಯೋತ್ಪಾದನಾ ಸಂಚೊಂದಕ್ಕೆ ತನಗರಿವಿಲ್ಲದಂತೆಯೇ ಸಿಲುಕುವ ಕಥೆಯನ್ನು "ಅಮೀರ್" ತಿಳಿಸುತ್ತದೆ.

ಪುಣೆಯ ಭಾರತೀಯ ಸಿನಿಮಾ ಮತ್ತು ಟೆಲಿವಿಜನ್ ಸಂಸ್ಥೆಯಿಂದ ಪದವಿ ಪಡೆದ ಗುಪ್ತಾ, ಅನುರಾಗ್ ಕಶ್ಯಪ್ ಅವರ ಬ್ಲಾಕ್ ಫ್ರೈಡೇ ಮತ್ತು ನೋಸ್ಮೋಕಿಂಗ್‌ನಲ್ಲಿ ಸಹಕರಿಸಿದ್ದರು. ಅಲ್ಲದೆ ಹಿಂದಿ ಸಿನಿಮಾದಲ್ಲಿ ಸಹ ನಿರ್ದೇಶಕ ಮತ್ತು ಸಾಹಿತ್ಯಲೇಖಕನಾಗಿ ಕೆಲಸಮಾಡಿದ್ದರು.

Share this Story:

Follow Webdunia kannada