Article Bollywood Gossips %e0%b2%ac%e0%b3%8d%e0%b2%b2%e0%b3%82 %e0%b2%85%e0%b2%82%e0%b2%ac%e0%b3%8d%e0%b2%b0%e0%b3%86%e0%b2%b2%e0%b3%8d%e0%b2%b2%e0%b2%be %e0%b2%ac%e0%b2%b3%e0%b2%bf%e0%b2%95 %e0%b2%b5%e0%b2%b0%e0%b3%8d%e0%b2%b2%e0%b3%8d%e0%b2%a1%e0%b3%8d %e0%b2%b5%e0%b2%be%e0%b2%b0%e0%b3%8d 107073000009_1.htm

Daily Horoscope

Select Your Language

Notifications

webdunia
webdunia
webdunia
webdunia

ಬ್ಲೂ ಅಂಬ್ರೆಲ್ಲಾ ಬಳಿಕ ವರ್ಲ್ಡ್ ವಾರ್!

ಬ್ಲೂ ಅಂಬ್ರೆಲ್ಲಾ ಬಳಿಕ ವರ್ಲ್ಡ್ ವಾರ್!
ವಿಶಾಲ್ ಭಾರದ್ವಾಜ್ ಅವರ ನಿರ್ದೇಶನದ ಮಾಯಾಕಥೆಯನ್ನೊಳಗೊಂಡ ಬಾಲಿವುಡ್ ಚಿತ್ರ ಬ್ಲೂ ಅಂಬ್ರೆಲ್ಲಾ ಆಗಸ್ಟ್ 10ರಂದು ತೆರೆ ಕಾಣಲಿದೆ. ಅಂತಾರಾಷ್ಟ್ರೀಯ ಮಾನ್ಯತೆ ಪಡೆಯುವ ಭರವಸೆಗಾಗಿ ಚಿತ್ರ ಮನೋಜ್ಞ ಕಥಾನಕ ದೃಶ್ಯಸಂಯೋಜನೆ ಹೊಂದಿದೆ.

ಬ್ಲೂ ಅಂಬ್ರೆಲ್ಲಾ ಎಂಬ ಮಾಯಾ ಕಥೆಯ ಸಿನೆಮನಾವನ್ನು ವೀಕ್ಷಕರ ಕೈ ಗಿರಿಸಿದ ಬಳಿಕ ವಿಶಾಲ್ ಭಾರದ್ವಾಜ್ ಇನ್ನೊಂದು ಮಹತ್ವಾಕಾಂಕ್ಷೆಯ ಚಿತ್ರೀಕರಣರಕ್ಕೆ ಕೈ ಇರಿಸಿದ್ದಾರೆ. ಅದೇನೆಂದರೆ ಎರಡನೇ ಜಾಗತಿಕ ಮಹಾಯುದ್ಧ- ವರ್ಲ್ಡ್‌ವಾರ್-2.

ಎರಡನೇ ಜಾಗತಿಕ ಯುದ್ಧ ಚಿತ್ರಣಕ್ಕೆ ವಿಪುಲ ತಾರಾಗಣ, ವಿಶಾಲ ಕ್ಯಾನ್‌ವಾಸ್, ‌ ಬೃಹತ್ ಬಜೆಟ್ ಮೊತ್ತ ಬೇಕಾಗುತ್ತದೆ. ದೃಶ್ಯ ಸಂಯೋಜನೆ ಹಾಗೂ ಹಳೆಯ ಶೈಲಿಯ ವಸ್ತ್ರ ವಿನ್ಯಾಸ ಕ್ಲಿಷ್ಟಕರ. ಆದಾಗ್ಯೂ ಹಾಲಿವುಡ್ ತಜ್ಞರೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ ಎನ್ನುತ್ತಾರೆವಿಶಾಲ್.

ವರ್ಲ್ಡ್ ವಾರ್ -2 ಚಿತ್ರೀಕರಣವು 2008ರ ಆರಂಭದಲ್ಲಿ ಪ್ರಾರಂಭಿಸುವ ಉದ್ದೇಶವಿದೆ. ಅದು ನಿಜನವಾಗಿಯೂ ಹಾಡುಗಳಿಲ್ಲದ ವಿಶಿಷ್ಟ ಸಿನೆಮಾವಾಗಲಿದೆ ಎನ್ನುತ್ತಾರೆ ಭಾರದ್ವಾಜ್.

Share this Story:

Follow Webdunia kannada