Select Your Language

Notifications

webdunia
webdunia
webdunia
webdunia

ಬ್ಲಾಕ್ ಬ್ಯೂಟಿ ಪ್ರಿಯಾಮಣಿ ಗರ್ಭಿಣಿ?

ಬ್ಲಾಕ್ ಬ್ಯೂಟಿ
, ಬುಧವಾರ, 19 ಮಾರ್ಚ್ 2014 (13:46 IST)
PR
ಕಾಲಿವುಡ್ ನಲ್ಲಿ ಕೆಲವು ರಹಸ್ಯ ವಾರ್ತೆಗಳು ಪ್ರಿಯಾಮಣಿ ಬಗ್ಗೆ ಹರಡುತ್ತಿದೆ. ಬೆಂಗಳೂರಿನ ಈ ಹೆಣ್ಣುಮಗಳು ಯಾರಿಗೂ ಹೇಳದೆ ಮದುವೆ ಆಗಿದ್ದಾಳೆ. ಅವಳೀಗ ಗರ್ಭವತಿ ಎನ್ನುವ ಸುದ್ದಿ ಎಲ್ಲೆಲ್ಲು. ಇದನ್ನು ಕೇಳಿದ ಅದರಲ್ಲೂ ಆಕೆಯ ಸಿನಿಮಾಗಳಿಗೆಂದು ದುಡ್ಡು ಸುರಿದಿರುವ ನಿರ್ಮಾಪಕರು ಆತಂಕಕ್ಕೆ ಒಳಗಾಗಿದ್ದಾರೆ.

ಪರುತ್ತಿ ವೀರನ್ ಚಿತ್ರದ ಮುಖಾಂತರ ತಮಿಳು ಚಿತ್ರರಂಗದಲ್ಲಿ ತನಗೊಂದು ಸ್ಥಾನ ಪಡೆದ ಈ ಚೆಲುವೆಗೆ ಸ್ಥಳೀಯ ಉತ್ತಮ ನಟಿ ಎನ್ನುವ ಅವಾರ್ಡ್ ದೊರಕಿತ್ತು. ಆದರೆ ಗ್ಲಾಮರ್ ಗೆ ಹೆಚ್ಚಿನ ಗಮನ ನೀಡಿ ಅವಕಾಶಗಳಿಂದ ವಂಚಿತಳಾದ ಈ ಚೆಲುವೆ ಅದಾದ ಬಳಿಕ ಈಗ ಕನ್ನಡ ಮತ್ತು ಮಲೆಯಾಳಂ ಸಿನಿಮಾಗಳಲಿ ನಟಿಸುತ್ತಿದ್ದಾಳೆ.

webdunia
PR
ಆದರೆ ಇಂತಹ ಇಲ್ಲಸಲ್ಲದ ವರ್ತೆಗಳಿಂದ ಬೇಸರ ಹೊಂದಿರುವ ಈ ಚೆಲುವೆ ಸದ್ಯಕ್ಕೆ ತಾನು ಕನ್ನಡ ಮತ್ತು ಮಲೆಯಾಳಂ ಚಿತ್ರಗಾಲ್ಲಿ ಬ್ಯುಸಿ ಆಗಿರುವುದರಿಂದ ತಮಿಳಿನತ್ತ ಗಮನ ನೀಡಲು ಸಾಧ್ಯ ಆಗಿಲ್ಲ. ತನ್ನ ಬಗ್ಗೆ ಆಗದವರು ಹೀಗೆಲ್ಲ ಸುದ್ದಿ ಹರಡಿಸುತ್ತಿದ್ದಾರೆ ಎಂದು ಹೇಳಿದ್ದಾಳೆ.

ಅಲ್ಲದೆ ತಮಿಳು ಚಿತ್ರಗಳಲ್ಲಿ ನಟಿಸಲು ಅವಕಾಶಗಳು ಬರುತ್ತಿದ್ದರು ಕಥೆಯು ಇಷ್ಟ ಆಗದ ಕಾರಣ ತಾನು ಅಂತಹ ಚಿತ್ರಗಳಲ್ಲಿ ನಟಿಸಲು ಒಪ್ಪಿಲ್ಲ ಎಂದು ಹೇಳಿದ್ದಾಳೆ ಈ ಚೆಲುವೆ. ಇತ್ತೀಚಿಗೆ ವಿದ್ಯಾ ಬಾಲನ್, ಐಶ್ವರ್ಯ ರೈ ಬಗ್ಗೆಯೂ ಇಂತಹ ರೂಮರ್ ಗಳು ಬಂದಿತ್ತು. ಈಗ ಪ್ರಿಯಾಮಣಿ ಆ ಲಿಸ್ಟ್ ಗೆ ಸೇರ್ಪಡೆ ಆಗಿದ್ದಾಳೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada