Publish Date: Fri, 29 Jun 2007 (12:51 IST)
Updated Date: Fri, 29 Jun 2007 (12:49 IST)
ಬಾಲಿವುಡ್ ಖ್ಯಾತ ನಿರ್ದೇಶಕ ಅನುಭವ ಸಿನ್ಹಾ ಅವರ ಕ್ಯಾಶ್ ಚಿತ್ರಕ್ಕಾಗಿ ಐಟಂ ಸಾಂಗ್‌ಗಾಗಿ ನೃತ್ಯ ಮಾಡಲು ಬ್ರೆಜಿಲ್ ಬಾಂಬ್ ಬ್ರೂನಾ ಆಗಮಿಸಿದ್ದು ಬಾಲಿವುಡ್ ರಂಗದಲ್ಲಿ ಮಾದಕ ಬಿರುಗಾಳಿ ಬೀಸುತ್ತಿದ್ದಾಳೆ ಎಂದು ಬಾಲಿವುಡ್ ರಂಗದ ಅಭಿಪ್ರಾಯವಾಗಿದೆ.
ಐಟಂ ಗರ್ಲ್ ಯಾನಾ ಗುಪ್ತಾ ಹಾಗೂ ರಾಖಿ ಸಾವಂತರನ್ನು ಹಿಂದಕ್ಕೆ ತಳ್ಳಿ ಮಿಂಚಲಿದ್ದಾಳೆ ಎಂದು ನಿರ್ದೇಶಕ ಅನುಭವ ಸಿನ್ಹಾ ಹೇಳಿದ್ದಾರೆ. ಬ್ರೂನಾ ಉತ್ತಮ ನೃತ್ಯಗಾರ್ತಿ,ಮಾದಕ ಸುಂದರಿಯಾಗಿದ್ದು ಬ್ರೆಜಿಲ್ ದೇಶದಾದ್ಯಂತ ತನ್ನ ನೃತ್ಯ ಕಾರ್ಯಕ್ರಮಗಳಿಂದ ಖ್ಯಾತಿ ಪಡೆದಿದ್ದಾಳೆ.
ಬಾಲಿವುಡ್ ಚಿತ್ರರಂಗದಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಲು "ಕ್ಯಾಶ್" ಚಿತ್ರದ ಮೂಲಕ ಪ್ರವೇಶಿಸಿದ್ದಾರೆ ಎಂದು ಸಿನ್ಹಾ ಹೇಳಿದರು. ವಿಡೀಯೋ ಅಲ್ಬಂ ನೃತ್ಯಕ್ಕಾಗಿ ಜೇಮ್ಸ್ ಬಾಂಡ್ ಚಿತ್ರವಾದ "ಕ್ಯಾಸಿನೋ ರಾಯಲೇ" ಚಿತ್ರದ ಐಟಂ ಗರ್ಲ್ ಕಟೇರಿನಾ ಮುರೀನೋ ಅವರನ್ನು ಅಯ್ಕೆ ಮಾಡಲಾಗಿತ್ತು.
.ಆದರೆ ಅವರ ಪ್ರತಿಭೆಯನ್ನು ಗುರುತಿಸಿದ ನಂತರ ಚಿತ್ರದ ನಾಯಕಿಯಾಗಿ ಅವರನ್ನು ಆಯ್ಕೆ ಮಾಡಿ ಇಟಲಿಯಲ್ಲಿ ಸಂಪೂರ್ಣವಾಗಿ ಚಿತ್ರೀಕರಿಸಲಾಯಿತು ಎಂದು ಹೇಳಿದ್ದಾರೆ.