Article Bollywood Gossips %e0%b2%ac%e0%b3%8d%e0%b2%b0%e0%b3%82%e0%b2%b8%e0%b3%8d%e0%b2%b2%e0%b3%80 %e0%b2%9c%e0%b3%8a%e0%b2%a4%e0%b3%86 %e0%b2%ab%e0%b3%88%e0%b2%9f%e0%b3%8d %e0%b2%ae%e0%b2%be%e0%b2%a1%e0%b2%bf%e0%b2%a6%e0%b3%8d%e0%b2%a6%e0%b3%86 113062100008_1.htm

Daily Horoscope

Select Your Language

Notifications

webdunia
webdunia
webdunia
webdunia

ಬ್ರೂಸ್ಲೀ ಜೊತೆ ಫೈಟ್ ಮಾಡಿದ್ದೆ

ಕರಾಟೆ
PR
PR
ಕರಾಟೆ ಕಿಂಗ್, ಸ್ಟಂಟ್ ಸಿನೆಮಾಗಳ ದಂತಕತೆ ಬ್ರೂಸ್ಲೀ ಜೊತೆ ಫೈಟ್ ಮಾಡುವ ಅದೃಷ್ಟ ತನ್ನದಾಗಿತ್ತು ಎಂದು ನಟ ಜಾಕಿಜಾನ್ ಹೇಳಿಕೊಂಡಿದ್ದಾರೆ. ಬ್ರೂಸ್ ಲೀ ಎಂಟರ್ ದಿ ಡ್ರಾಗನ್ ಚಿತ್ರ ಮಾಡುವಾಗ ಜಾಕಿಜಾನ್ ಇನ್ನೂ ಚಿಕ್ಕವರಾಗಿದ್ದರಂತೆ. ಆಗಷ್ಟೇ ಮಾರ್ಷಲ್ ಆರ್ಟ್ಸ ಕಲೆ ಕರಗತ ಮಾಡಿಕೊಂಡು ಚಿತ್ರಗಳಲ್ಲಿ ನಟಿಸುವ ಕನಸು ಕಾಣುತ್ತಿದ್ದರಂತೆ. ಅವಕಾಶಕ್ಕಾಗಿ ಕಾಯುತ್ತಿದ್ದ ಜಾಕಿ ಬ್ರೂಸ್ಲೀ ಕಣ್ಣಿಗೆ ಬಿದ್ದೇ ಬಿಟ್ಟರು. ಸರಿ ಇನ್ನೇಕೆ ತಡ ಎಂದು ಜಾಕಿ ಫೈಟ್ ದೃಶ್ಯದಲ್ಲಿ ಅಭಿನಯಿಸಲು ಸಜ್ಜಾದರಂತೆ.

ಬ್ರೂಸ್ಲೀ ಜೊತೆ ಸ್ಟಂಟ್ ಮಾಡುವ ಖುಷಿಯಲ್ಲಿ ಮನೆಯಿಂದ ಬೇಗನೆ ಹೊರಟು ಚಿತ್ರೀಕರಣ ಜಾಗಕ್ಕೆ ಬಂದಿದ್ದರಂತೆ. ಇನ್ನೇನು ಒಂದು ದೃಶ್ಯ ಮುಗಿದು ಇನ್ನೊಂದು ಆರಂಭವಾಗಬೇಕು ಎನ್ನುವಷ್ಟರಲ್ಲಿ ಹೊಡೆದಾಟದ ವೇಳೆ ಬ್ರೂಸ್ ಲೀ ಜಾಕಿ ತಲೆಗೆ ಒದ್ದಾಗ ಅವರು ತಲೆ ತಿರುಗಿ ನಕ್ಷತ್ರ ಎಣಿಕೆ ಮಾಡುವಂತಾಯಿತಂತೆ. ಸಿಕ್ಕ ಅದೃಷ್ಟವೂ ಈ ರೀತಿ ಕೈಚೆಲ್ಲಿ ಹೋಯಿತಲ್ಲಾ ಎಂದು ಜಾಕಿಗೆ ಬಹಳ ಬೇಸರವಾಗಿತ್ತಂತೆ.

ಆದರೂ ಆ ನೆನಪು ಸವಿಸವಿಯಾಗಿದೆ ಎನ್ನುವ ಜಾಕಿ ಬ್ರೂಸ್ಲೀಯಿಂದ ಉಪಚರಿಸಿಕೊಳ್ಳುವ ಅವಕಾಶ ನನ್ನದಾಯಿತು ಎಂದು ಹೇಳಿ ನಸುನಗುತ್ತಾರೆ.

Share this Story:

Follow Webdunia kannada