Publish Date: Fri, 22 Jun 2007 (12:17 IST)
Updated Date: Fri, 22 Jun 2007 (12:17 IST)
ಹಾಲಿವುಡ್ ಚಿತ್ರಗಳ ನಾಡಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಶಿವಾಜಿ ದಿ ಬಾಸ್ ಇಂಗ್ಲೆಂಡಿನಲ್ಲಿ ಪ್ಯಾಂಟಾಸ್ಟಿಕ್ ಸ್ಟಾರ್, ಪೈರಾಟಿಸ್ ಆಫ್ ಕೆರಿಬಿಯನ್ ಮತ್ತು ಓಸಿಯನ್ಸ್-13 ಚಿತ್ರಗಳನ್ನು ಬಿಡುಗಡೆಯಾದ ಒಂದೇ ವಾರದಲ್ಲಿ ಗಳಿಕೆಯಲ್ಲಿ ಹಿಂದೆ ಹಾಕುವ ಲಕ್ಷಣ ಕಾಣುತ್ತಿದೆ ಎಂದು ವರದಿಯಾಗಿದೆ.
12 ಕೇಂದ್ರಗಳಲ್ಲಿ ಬಿಡುಗಡೆಯಾಗಿರುವ ರಜನಿಯ ಚಿತ್ರ ಈಗಾಗಲೆ 13.6 ಮಿಲಿಯನ್ ರೂಗಳನ್ನು ಗಳಿಸಿದೆ. 57 ವರ್ಷದ ತಮಿಳು ಚಿತ್ರರಂಗದ ಬೇತಾಬ್ ಬಾದಷಾ ತನ್ನ ಸರಿ ಅರ್ದ ವಯಸ್ಸಿನ ನಟಿಯೊಂದಿಗೆ ತಾಳಕ್ಕೆ ಹೆಜ್ಜೆ ಹಾಕುವುದನ್ನು ನೋಡಲು ಎಲ್ಲರೂ ಮುಗಿಬಿಳುತ್ತಿದ್ದಾರೆ.
ಯಶ್ ರಾಜ್ ಬ್ಯಾನರನ ಜೂಮ್ ಬರಾಬರ್ ಜೂಮ್ 47 ಕೇಂದ್ರಗಳಲ್ಲಿ ಬಿಡುಗಡೆಯಾಗಿ ಕೇವಲ 23 ಮಿಲಿಯನ್ ರೂಗಳ ಗಳಿಕೆ ಮಾಡಿದೆ.