Publish Date: Thu, 07 Nov 2013 (12:51 IST)Updated Date: Thu, 07 Nov 2013 (12:51 IST)
PR
ಅಪರೂಪದ ರೂಪರಾಶಿ ಅನುಷ್ಕ ಶೆಟ್ಟಿಯ ಹೊಸ ಚಿತ್ರ ರಾಣಿ ರುದ್ರಮ್ಮ ದೇವಿ . ಈ ಚಿತ್ರದಲ್ಲಿ ಆಕೆ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಇಂದು ಅನುಷ್ಕಾ ಹುಟ್ಟಿದ ದಿನ ಅದಕ್ಕಾಗಿ ಆಕೆಯ ತಾರಾ ಬದುಕಿನ ಪ್ರತಿಷ್ಟಿತ ಚಿತ್ರ ರುದ್ರಮ್ಮ ದೇವಿ ಫಸ್ಟ್ ಲುಕ್ ಇಂದು ಬಿಡುಗಡೆ ಮಾಡಲಾಗಿದೆ. ಇದನ್ನು ಗುಣಶೇಖರ್ ನಿರ್ಮಿಸುತ್ತಿದ್ದಾರೆ.
ರುದ್ರಮ್ಮ ದೇವಿ ಕಾಕತೀಯ ಸಾಮ್ರಾಜ್ಯದ ಪಟ್ಟದರಸಿ. ಮಹಮದ್ ಸುಲ್ತಾನ್ ನ್ನು ಎದುರಿಸಿದ ವೀರ ವನಿತೆ ಆಕೆ. ಆ ರಾಣಿಯ ಗೆಟಪ್ ನಲ್ಲಿ ಪೋಸ್ಟರ್ ಗಳಲ್ಲಿ ಅನುಷ್ಕ ಮಿಂಚುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ರಾಣಿ ರಾಣಿ ಥರ ಇದ್ದಾಳೆ ಆಕೆ, ಅದೇ ರೀತಿ ನಟಿಸಿಯೂ ಇದ್ದಾಳೆ ಅಂಬೋದೇ ಆ ಸಿನಿ ಮಂದಿ ಮಾತು. ಇನ್ನು ಸಿನಿಮಾದ ಬಗ್ಗೆ ಹೇಳೋದೇ ಆದ್ರೆ ಈ ಸಿನಿಮಾ ಈಗ ನಾಲ್ಕನೆ ಶೆಡ್ಯೂಲ್ ನಲ್ಲಿ ಬ್ಯುಸಿ. ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರದ ಚಿತ್ರೀಕರಣ ಸಾಗುತ್ತಿದೆ. ಇದು ಭಾರತದ ಮೊತ್ತ ಮೊದಲ ಹಿಸ್ಟಾರಿಕಲ್ ಸ್ಟೀರಿಯೋ ಸ್ಕಾಪಿಕ್ 3 ಡಿ ಚಿತ್ರವಾಗಿದೆ.
ಈ ಸಿನಿಮಾದಲ್ಲಿ ಚಾಲುಕ್ಯ ವೀರಭದ್ರ ನಾಗಿ ರಾಣ, ಗಣಪತಿ ದೇವ ಪಾತ್ರದಲ್ಲಿ ಕೃಷ್ಣಂ ರಾಜು, ಶಿವ ದೇವಯ್ಯ ಪಾತ್ರದಲ್ಲಿ ಪ್ರಕಾಶ್ ರೈ ಇದ್ದಾರೆ. ತೆಲುಗು ರಾಜ್ಯದ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯ ಬರೆದ ಕಾಕತೀಯ ವೈಭವ ಈ ಚಿತ್ರದಲ್ಲಿ ತೋರಲು ಗುಣಶೇಖರ್ ಹೆಚ್ಚು ಪ್ರಯತ್ನ ಮಾಡುತ್ತಿದ್ದಾರೆ. ರಾಣಿ ರುದ್ರಮ್ಮ ಚರಿತ್ರೆ ತಿಳಿಯದ ಯುವ ಜನಾಂಗಕ್ಕೆ ಈ ಚಿತ್ರ ಹೆಚ್ಚು ಉಪಯುಕ್ತ ಎಂಬುದು ಗುಣಶೇಖರ್ ಅಂಬೋಣ ! ಅಂದು ಬೊಮ್ಮಾಲಿ ಯಾಗಿದ್ದವಳು ಇಂದು ರುದ್ರಮ್ಮ ದೇವಿಯಾಗಿದ್ದಾಳೆ.. ರಿಚ್ ಗೆಟಪ್ ರಿಚ್ ಲುಕ್ ನಲ್ಲಿ ಎಲ್ಲರ ಗಮನ ತನ್ನ ಕಡೆ ಸೆಳೆದು ಕೊಳ್ಳುತ್ತಿದ್ದಾಳೆ ಅನುಷ್ಕ.