Article Bollywood Gossips %e0%b2%ac%e0%b3%87%e0%b2%b6%e0%b2%b0%e0%b2%ae%e0%b3%8d %e0%b2%9a%e0%b2%bf%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf %e0%b2%b0%e0%b2%a3%e0%b2%ac%e0%b3%80%e0%b2%b0%e0%b3%8d %e0%b2%95%e0%b3%81%e0%b2%9f%e0%b3%81%e0%b2%82%e0%b2%ac%e0%b2%b5%e0%b2%bf%e0%b2%a1%e0%b3%80 %e0%b2%a8%e0%b2%9f%e0%b2%a8%e0%b3%86 113092400001_1.htm

Daily Horoscope

Select Your Language

Notifications

webdunia
webdunia
webdunia
webdunia

ಬೇಶರಮ್ ಚಿತ್ರದಲ್ಲಿ ರಣಬೀರ್ ಕುಟುಂಬವಿಡೀ ನಟನೆ

ಬೇಶರಮ್
PR
ಬೇಶರಮ್ ಚಿತ್ರದಲ್ಲಿ ಮೊದಲ ಬಾರಿಗೆ ಇಡೀ ಕುಟುಂಬವೊಂದು ಸಿನೆಮಾದಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ರಿಷಿ ಕಪೂರ್, ಪತ್ನಿ ನೀತೂ ಸಿಂಗ್ ಹಾಗೂ ಮಗ ರಣಬೀರ್ ಕಪೂರ್ ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ನೀತು ಸಿಂಗ್ ತನ್ನ ಮಗ ರಣಬೀರ್ ಜೊತೆ ಸೇರಿ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಮಗನ ವೈವಿಧ್ಯಮಯ ಪಾತ್ರಗಳನ್ನು ನೀತು ಮುಕ್ತವಾಗಿ ಹೊಗಳುತ್ತಿದ್ದಾರೆ. ನನ್ನ ಮಗನ ಕೆಲಸ ನೋಡಿದರೆ ಸಂತಸವಾಗುತ್ತದೆ. ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವುದನ್ನು ನೋಡಲು ಹೆಮ್ಮೆ ಎನಿಸುತ್ತದೆ ಎಂದು ನೀತು ಸಿಂಗ್ ಕೌನ್ ಬನೇಗಾ ಕರೋಡ್ಪತಿ-7 ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ರಾಕ್ಸ್ಟಾರ್, ಬರ್ಫಿ ಚಿತ್ರಗಳ ಬಳಿಕ ಇದೀಗ ಬೇಶರಮ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಂತಹ ಪಾತ್ರಗಳು ಅಭಿನಯ ಕೌಶಲವನ್ನು ಸಾಣೆಹಿಡಿದಂತೆ. ರಣಬೀರ್ ಭವಿಷ್ಯಕ್ಕೆ ಒಳಿತನ್ನೇ ಮಾಡುತ್ತದೆ ಎಂಬ ಭರವಸೆಯೂ ನನಗಿದೆ. ವೇಕ್ ಅಪ್ ಸಿದ್, ಯೇ ಜವಾನಿ ಹೈ ದಿವಾನಿ, ಬಫರ್ಿ ಚಿತ್ರಗಳು ನನಗೂ ಖುಷಿ ನೀಡಿದವು ಎಂದಿದ್ದಾರೆ ನೀತೂ ಸಿಂಗ್. ಕೌನ್ ಬನೇಗಾ ಕರೋಡ್ಪತಿಯಂತಹ ಕಾರ್ಯಕ್ರಮ ನಿರ್ವಹಿಸುವ ಆಸೆ ನನಗಿದೆ ಎಂದಿರುವ ರಣಬೀರ್ ಬಾಲಿವುಡ್ನಲ್ಲಿ ಪಯಣಿಸಬೇಕಾದ ಹಾದಿ ಇನ್ನೂ ಸಾಕಷ್ಟು ದೂರವಿದೆ. ಅವಕಾಶ ಸಿಕ್ಕಲ್ಲಿ ಅಮಿತ್ಜಿ ಅವರಂತೆ ಕೆಬಿಸಿ ಕಾರ್ಯಕ್ರಮ ನಿರ್ವಹಿಸಲು ಇಷ್ಟಪಡುವೆ ಎಂದಿದ್ದಾರೆ. ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ಬಾಸ್ ಸಹ ಅವರಿಗಿಷ್ಟದ ಕಾರ್ಯಕ್ರಮವಂತೆ. ಅಭಿನವ್ ಕಶ್ಯಪ್ ಅವರ ನಿರ್ದೇಶನದ ಬೇಶರಮ್ ಚಿತ್ರ ನನಗೆ ಅನನ್ಯ ಅನುಭವ ನೀಡಿದೆ ಎಂದು ಹೇಳಲು ಅವರು ಮರೆಯಲಿಲ್ಲ.

Share this Story:

Follow Webdunia kannada