Article Bollywood Gossips %e0%b2%ac%e0%b3%87%e0%b2%9f%e0%b2%bf %e0%b2%ac%e0%b2%bf %e0%b2%b9%e0%b3%86%e0%b2%b8%e0%b2%b0%e0%b3%81 %e0%b2%85%e0%b2%ad%e0%b2%bf%e0%b2%b2%e0%b2%be%e0%b2%b7%e0%b2%be %e0%b2%85%e0%b2%b2%e0%b3%8d%e0%b2%b2 %e0%b2%ac%e0%b2%bf%e0%b2%97%e0%b3%8d %e0%b2%ac%e0%b2%bf 112022300013_1.htm

Daily Horoscope

Select Your Language

Notifications

webdunia
webdunia
webdunia
webdunia

ಬೇಟಿ ಬಿ ಹೆಸರು 'ಅಭಿಲಾಷಾ' ಅಲ್ಲ; ಬಿಗ್ ಬಿ

ಬೇಟಿ ಬಿ
PR


ದೇಶದ ಅತ್ಯಂತ ಹೆಚ್ಚು ಪ್ರಚಾರದಲ್ಲಿರುವ ಸೆಲೆಬ್ರಿಟಿ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ಚರ್ಯ ರೈ ಬಚ್ಚನ್ ದಂಪತಿಗೆ ಇತ್ತೀಚೆಗಷ್ಟೇ ಹೆಣ್ಣು ಮಗು ಜನನವಾಗಿರುವುದು ನಮಗೆಲ್ಲರಿಗೂ ತಿಳಿದ ವಿಚಾರ!

ಆದರೆ ಪುತ್ರಿಯ ನಾಮಕರಣ ಸಂಬಂಧಿಸಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿವೆ. ಈ ನಡುವೆ ಲೇಖಕಿ ಶೋಭಾ ಡೇ, ಬಿಗ್ ಬಿ ಮೊಮ್ಮಗಳಾದ ಬೇಟಿ ಬಿಗೆ 'ಅಬಿಲಾಷಾ' ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ವಿಟರ್ ಪೇಜ್‌ನಲ್ಲಿ ಟ್ವೀಟ್ ಮಾಡಿದ್ದರು.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತಾಬ್ ಬಚ್ಚನ್, ತಮ್ಮ ಮೊಮ್ಮಗಳ ಹೆಸರು 'ಅಭಿಲಾಷಾ' ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಹೆಸರನ್ನು ಬಹಿರಂಗ ಪಡಿಸುವುದಾಗಿ ತಿಳಿಸಿರುವುದು ಅಭಿಮಾನಿಗಳಲ್ಲಿ ಕುತೂಹಲ ವೃದ್ಧಿಗೆ ಕಾರಣವಾಗಿದೆ.

ಈ ಹಿಂದೆಯೇ ಭೇಟಿ ಬಿಗೆ 'ಅ' ಅಕ್ಷರದಿಂದ ಆರಂಭವಾಗುವ ಹೆಸರನ್ನು ಸೂಚಿಸುವಂತೆ ಹಾಗೂ ಉತ್ತಮ ಹೆಸರು ಸೂಚಿಸಿದವರಿಗೆ ಬಹುಮಾನ ನೀಡುವುದಾಗಿ ಬಚ್ಚನ್ ಕುಟುಂಬ ಘೋಷಿಸಿತ್ತು. ಈ ನಡುವೆ 'ಅಲಿಯಾ' ಎಂಬ ಹೆಸರಿಗೂ ನೊ ಎಂದಿದ್ದಾರೆ.

ಒಟ್ಟಾರೆಯಾಗಿ ಸದ್ಯದಲ್ಲೇ ಅಭಿ-ಐಶ್ ಪುತ್ರಿಯ ಹೆಸರು ಬಹಿರಂಗವಾಗಲಿದ್ದು, ಇದನ್ನು ಸ್ವತ: ಅಮಿತಾಬ್ ಬಚ್ಚನ್ ಅವರೇ ಬಹಿರಂಗಪಡಿಸುವ ಸಾಧ್ಯತೆಗಳಿವೆ.

Share this Story:

Follow Webdunia kannada