Publish Date: Mon, 13 Jul 2009 (12:27 IST)
Updated Date: Mon, 13 Jul 2009 (12:21 IST)
ಕನ್ನಡ ಸಹಿತ ದಕ್ಷಿಣ ಭಾರತೀಯ ಭಾಷೆಗಳ ಖ್ಯಾತ ಅಭಿನೇತ್ರಿ ಮೀನಾ ಅವರು ಬೆಂಗಳೂರಿನ ಐಟಿ ಉದ್ಯೋಗಿ ವಿದ್ಯಾಸಾಗರ್ ಅವರನ್ನು ಭಾನುವಾರ ತಿರುಮಲ ಬೆಟ್ಟದಲ್ಲಿ ವಿವಾಹವಾದರು.
ವಿವಾಹ ಸಮಾರಂಭದ ಬಳಿಕ ನವಜೋಡಿಯು ಶ್ರೀ ವೆಂಕಟೇಶ್ವರನ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಚೆನ್ನೈಗೆ ತೆರಳಿದರು ಎಂದು ಆಕೆಯ ಕುಟುಂಬ ಮೂಲಗಳು ತಿಳಿಸಿವೆ.
ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿರಿಸಿರುವ 33ರ ಹರೆಯದ ಮೀನಾ ಅವರು ರಜನಿಕಾಂತ್, ಕಮಲ ಹಾಸನ್, ಮಮ್ಮೂಟ್ಟಿ, ಮೋಹನಲಾಲ್, ರವಿಚಂದ್ರನ್, ವಿಷ್ಣುವರ್ಧನ್ ಸಹಿತ ದಕ್ಷಿಣ ಭಾರತದ ಪ್ರಮುಖ ನಟರೊಂದಿಗೆ ನಟಿಸಿದ್ದರು.
ಮೂಲತಃ ಚೆನ್ನೈಯವರಾಗಿರುವ ಮೀನಾ, ಮುತ್ತು, ವೀರ, ಯಜಮಾನ, ಅವ್ವೈ ಷಣ್ಮುಖಿ ಮುಂತಾದ ಚಿತ್ರಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.