Publish Date: Tue, 31 Jul 2007 (10:41 IST)
Updated Date: Tue, 31 Jul 2007 (10:40 IST)
ಬಾಲಿವುಡ್‌ನ ಗ್ಲಾಮರ್ ಗರ್ಲ್ ಬಿಪಾಶಾಗೆ ಈಗ ಹೆಚ್ಚಿನ ಜವಾಬ್ದಾರಿ. ಆಕೆಯ ಕುಟುಂಬ ಸದಸ್ಯರ ಸಂಖ್ಯೆ ಹೆಚ್ಚಿದೆ. ಆಕೆಗೊಬ್ಬಳು ಸೊಸೆ ಬಂದಿದ್ದಾಳಂತೆ.
ವಿಷಯ ಇಷ್ಟೇ , ಬಿಪಾಶಾಳ ಅಕ್ಕ ಅಮ್ಮ ಆಗಿದ್ದಾರೆ. ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ಇದು ಅಕ್ಕನಿಗೆ ಎರಡನೇ ಮಗು. ಮೊದಲಿಂದು ಗಂಡು. ಹೆಣ್ಣುಮಗು-ಸೊಸೆ- ಬಿಪಾಶಾಳ ಖುಷಿಗೆ ಕಾರಣ.
ಈ ಮೊದಲು ಅಳಿಯನಿಗೆ ಸ್ಪೈಡರ್ ಮ್ಯಾನ್, ಪವರ್ ರೇಂಜರ್ ಆಟದ ಕಿಟ್ ಖರೀದಿಸಿ ಬೋರ್ ಆಗಿದ್ದೆ. ಆದರೆ ಈಗ ಛೇಂಜ್ ಇದೆ. ಸೊಸೆಗೆ ಬಾರ್ಬಿ ಗೊಂಬೆಗಳನ್ನು ಖರೀದಿಸುತ್ತೇನೆ ಎಂದು ಸಂಭ್ರಮಿಸುತ್ತಾಳೆ ಬಿಪಾಶಾ.
ಮಕ್ಕಳಿಗಾಗಿ ಶಾಪಿಂಗ್ ನಡೆಸುವುದೇ ಒಂದು ಖುಷಿ. ಇನ್ನಂತೂ ನನಗೆ ಬಿಡುವೇ ಇಲ್ಲ. ಶೂಟಿಂಗ್ ವಿರಾಮದಲ್ಲಿ ಮನೆಯಲ್ಲಿದ್ದರಂತೆ ಈ ವರೆಗೆ ಅಕ್ಕನ ಗಂಡು ಮಗು (ಅಳಿಯ) ಬೆನ್ನು ಬೀಳುತ್ತಿದ್ದ, ಈಗ ಸೊಸೆ ( ಹೊಸಮಗು) ಬಂದಿದ್ದಾಳೆ. ಇನ್ನು ಕಾಲಹರಣವಾಗುವುದೇ ತಿಳಿಯಲಾರದು ಅನ್ನುತ್ತಾಳೆ ಬಿಪಾಶಾ.
ಆದರೆ ಬಿಪಾಶಾ ಸದ್ಯಕ್ಕಂತೂ ಕಾಲಹರಣ ಮಾಡುವ ಪ್ರಮೇಶವಿಲ್ಲ. ಕೈ ತುಂಬ ಆಫರ್‌ಗಳಿವೆ. ಈಗಂತೂ ಚಿತ್ರನಗರಿಯಲ್ಲಿ ಗೆಳೆಯ ಜಾನ್ಅಬ್ರಹಾಂ ಜೊತೆಗೆ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ.