Article Bollywood Gossips %e0%b2%ac%e0%b2%bf%e0%b2%aa%e0%b2%be%e0%b2%b6%e0%b2%be %e0%b2%90%e0%b2%9f%e0%b2%82 %e0%b2%a8%e0%b3%8a %e0%b2%b8%e0%b3%8d%e0%b2%ae%e0%b3%8b%e0%b2%95%e0%b2%bf%e0%b2%82%e0%b2%97%e0%b3%8d 107072000005_1.htm

Daily Horoscope

Select Your Language

Notifications

webdunia
webdunia
webdunia
webdunia

ಬಿಪಾಶಾ ಐಟಂ-'ನೊ ಸ್ಮೋಕಿಂಗ್'

ಬಿಪಾಶಾ
ಬಾಲಿವುಡ್‌ನ ಮಾದಕ ತಾರೆ ಬಿಪಾಶಾ ಇದೀಗ ಹೊಸಸುದ್ದಿಗಳಿಗೆ ಗ್ರಾಸವಾಗುತ್ತಿದ್ದಾರೆ. ಜಾನ್‌ ಅಬ್ರಹಾಂ ತೆಕ್ಕೆಯಿಂದ ದೂರ ಸರಿಯುವ ಸೂಚನೆ ಲಭಿಸುತ್ತಿರುವಂತೆಯೇ ಆಕೆಗೆ ಹೊಸ ಗೆಳೆಯರು ಸಿಗತೊಡಗಿದ್ದಾರೆ, ಹಾಗೆಯೇ ವೃತ್ತಿಪರ ಅವಕಾಶಗಳು ಕೂಡ ಜೊತೆಯಾಗುತ್ತಿವೆ.

ಅನುರಾಗ್ ಕಶ್ಯಪ್ ಅವರ ಹೊಸ ಚಿತ್ರ 'ನೊ ಸ್ಮೋಕಿಂಗ್' ನಲ್ಲಿ ಬಿಪಾಶಾ ಹಾಗೂ ಸೈಫ್ ಆಲಿಖಾನ್ ಜೊತೆಯಾಗಲಿದ್ದಾರೆ. ಸೈಫ್ ಈ ಚಿತ್ತರದಲ್ಲಿ ನಟಿಸಲು ಕಾರಣವೆಂದರೆ ನಿರ್ಮಾಪಕ ಕುಮಾರ್ ಮಾಂಗಾಟ್ ಅವರೇ ವಿನಂತಿಸಿದರಂತೆ.

ಕುಮಾರ್ ಮಾಂಗಾಟ್ ಅವರು ಈ ಮೊದಲು 'ಓಂಕಾರ' ಚಿತ್ರದ ವೇಳೆಯೇ ಸೈಫ್‌ ಜೊತೆ ವೃತ್ತಿ ಪಾಲುದಾರಿಕೆ ಹೊಂದಿದ್ದಾರೆ. ಇಲ್ಲೂ ಇವರಿಬ್ಬರೂ ಜೊತೆಯಾಗುತ್ತಿದ್ದಾರೆ ಅನ್ನುತ್ತಿದ್ದಾರೆ ಮಾಹಿತಿದಾರರು.

ಸೈಫ್‌ ಆಲಿಖಾನ್ ಅವರಿಗೆ ಚಿತ್ರದಲ್ಲಿ ಪುಟ್ಟ ಪಾತ್ರವಿದೆ, ಆದರೆ ಅದು ತುಂಬಾ ಮಹತ್ವದ್ದು ಎಂದೆನ್ನಲಾಗಿದೆ. ಚಿತ್ರದಲ್ಲಿ ಜಾನ್ ಅಬ್ರಹಾಂ ನಾಯಕನಾಗಿದ್ದರೆ, ಬಿಪಾಶಾ ಕೇವಲ ಒಂದು ಐಟಂ ಚಿತ್ರಣ ಮಾತ್ರ ನೀಡಲಿದ್ದಾರೆ.

ನೊಸ್ಮೋಕಿಂಗ್ ತಾರಾಗಣದಲ್ಲಿ ಆಯೆಷಾ ತಾಕಿಯಾ, ರಣ್ವೀರ್ ಶೋರೆ,ಪ್ರಕಾಶ್ ರಾವಲ್ ಮುಂತಾದವರಿದ್ದಾರೆ. ಆದರೆ ಬಿಪಾಶಾ ಅವರ ಐಟಂ ದೃಶ್ಯಗಳೇ ಬಿಸಿ ಚರ್ಚೆಗೆ ವಿಷಯವಾಗುವುದಂತೂ ಖಚಿತವಾಗಿದೆ.

Share this Story:

Follow Webdunia kannada