Publish Date: Sat, 16 Jun 2007 (16:49 IST)
Updated Date: Sat, 16 Jun 2007 (16:45 IST)
ತಮಿಳು ಚಿತ್ರರಂಗದ ಬಾದಷಾ ರಜನಿಕಾಂತ್ ಮತ್ತು ಹಿಂದಿ ಚಿತ್ರರಂಗದ ಶೆಹನ್ ಷಾ ಅಮಿತಾಬ್ ಬಚ್ಚನ್ ಪರಸ್ಪರ ಅಭಿನಂದಿಸಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಅವರ ಶಿವಾಜಿ ಚಿತ್ರ ಶುಕ್ರವಾರ ಬಿಡುಗಡೆಯಾದ ಸಂದರ್ಭದಲ್ಲಿ ಮಾತನಾಡಿದ ಅಮಿತಾಬ್ ಬಚ್ಚನ್ ಅವರು ಭಾರತ ಅಂದರೆ ಎನು ಅನ್ನುವುದಕ್ಕೆ ಬಹುಶಃ ರಜನಿ ಮಾತ್ರ ಉದಾಹರಣೆಯಾಗಬಲ್ಲರು.
ಸಾದಾ ಒಬ್ಬ ಬಸ್ ಕಂಡಕ್ಟರ್ ಆಗಿದ್ದ ರಜನಿ ಇಂತಹ ಎತ್ತರಕ್ಕೆ ಎರಿದ್ದು ಆಗಾಧ ಸಾಧನೆ ಅಲ್ಲದೆ ಮತ್ತೇನು ಆಗಲಿಕ್ಕೆ ಸಾಧ್ಯವಿಲ್ಲ. ರಜನಿ ಒರ್ವ ಸಾದಾ ಸೀದಾ ಮನುಷ್ಯ ಅಂತಹ ವ್ಯಕ್ತಿಯ ಜನ ಮಾನಸದಲ್ಲಿ ಇರುವ ಪ್ರೀತಿಯ ಬಗ್ಗೆ ಆಶ್ಚರ್ಯವಾಗುತ್ತದೆ. ರಜನಿ ಚಿತ್ರ ಜೀವನ ಅಕ್ಷರಶಃ ಶೂನ್ಯದಿಂದ ಆರಂಭ ಎಂದು ಬಿಗ್ ಬಿ ಹೇಳಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಇಂದಿಗೂ ಅದೇ ಛಾಪು ಮೂಡಿಸಿರುವ ರಜನಿಕಾಂತ್ ಕೂಡ ನಾನು ಅಮಿತಾಬ್ ಮುಂದೆ ಏನು ಅಲ್ಲ ಅವರು ಚಕ್ರವರ್ತಿ ಅವರ ಮುಂದೆ ನಾನು ಎನಿದ್ದರೂ ರಾಜ ಎಂದು ಹೇಳಿದ್ದಾರೆ.