ಬಿಗ್ಬಾಸ್ ಸೀಸನ್-7ಗೆ ಕ್ಷಣಗಣನೆ ಆರಂಭ
Publish Date: Tue, 23 Jul 2013 (15:37 IST)
Updated Date: Tue, 23 Jul 2013 (15:35 IST)
ಬಿಗ್ಬಾಸ್ ಏಳನೇ ಸೀಸನ್ ಇನ್ನೇನು ಆರಂಭವಾಗಲಿದೆ. ಈ ಬಾರಿ ಯಾರೆಲ್ಲಾ ಮನೆಯಲ್ಲಿರುತ್ತಾರೆ, ಮನೆಯ ಸೆಟ್ಟಿಂಗ್ನಲ್ಲಿ ಏನೇನು ಬದಲಾವಣೆಗಳಾಗಲಿವೆ ಎಂಬ ಬಗ್ಗೆ ಈಗಲೇ ಕುತೂಹಲ ಕೆರಳಿದೆಯಂತೆ.ಸೆಪ್ಟೆಂಬರ್ನಿಂದ ಹೊಸ ಸೀಸನ್ ಆರಂಭವಾಗಲಿದ್ದು ಕಲರ್ಸ ವಾಹಿನಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡಲಿರುವ ಬಿಗ್ಬಾಸ್ ಸೀಸನ್ 7ಗೆ ಎಲ್ಲಾ ರೀತಿಯ ತಯಾರಿಗಳು ನಡೆಯುತ್ತಿವೆ. ಈ ಬಾರಿಯೂ 47ರ ಹರೆಯದ ಸಲ್ಮಾನ್ ಖಾನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಆದರೆ ಅವರದ್ದು ಇಲ್ಲಿ ದ್ವಿಪಾತ್ರ ನಿರೂಪಣೆಯಂತೆ. ಕಿರುತೆರೆಯಲ್ಲೇ ಮೊದಲ ಬಾರಿಗೆ ಎನ್ನಬಹುದಾದ ರಿಯಾಲಿಟಿಶೋ ಒಂದರ ನಿರೂಪಣೆಯಲ್ಲಿ ಪ್ರಯೋಗಾತ್ಮಕವಾಗಿ ದ್ವಿಪಾತ್ರಗಳನ್ನು ತರಲಾಗಿದೆ. ಅವರ 1997ರ ಹಿಟ್ ಚಿತ್ರ ಜುಡ್ವಾ ರೀತಿಯಲ್ಲೇ ಇಲ್ಲೂ ದ್ವಿಪಾತ್ರಾಭಿನಯ ಇರಲಿದೆಯಂತೆ.ಅವರು ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಈ ಬಾರಿ ಕಾರ್ಯಕ್ರಮವನ್ನು ಭಿನ್ನವಾಗಿ ತೋರಿಸಲಿದ್ದೇವೆ ಎಂದಿದೆ ವಾಹಿನಿ ಮೂಲಗಳು. ಬಿಗ್ಬಾಸ್ ಸೀಸನ್ 4ರಿಂದಲೂ ಸಲ್ಲು ಕಾರ್ಯಕ್ರಮ ನಿರೂಪಿಸುತ್ತಿದ್ದು ತಮಾಷೆ, ನಗು, ಹಠ, ಸೀರಿಯಸ್, ಹುಡುಕಾಟ ಎಲ್ಲವನ್ನು ಒಂದೇ ತಕ್ಕಡಿಯಲ್ಲಿ ತೂಗುವುದರಲ್ಲಿ ಸಫಲರಾಗಿದ್ದಾರೆ.