ಬಿಗ್ಬಾಸ್ ಮನೆಯಲ್ಲಿ ಮೊದಲ ದಿನವೇ ಕಿರಿಕ್
Publish Date: Thu, 19 Sep 2013 (11:44 IST)
Updated Date: Thu, 19 Sep 2013 (11:43 IST)
ಬಿಗ್ಬಾಸ್ ಸೀಸನ್ 7 ಕಲಸರ್್ ವಾಹಿನಿಯಲ್ಲಿ ಕೊನೆಗೂ ಆರಂಭವಾಗಿದೆ. ಸಲ್ಮಾನ್ ಖಾನ್ ನಿರೂಪಣೆಯ ಈ ಕಾರ್ಯಕ್ರಮದ ಮೊದಲ ಕಂತು ಪ್ರೇಕ್ಷಕರನ್ನು ರಂಜಿಸುವಲ್ಲಿ ಹಾಗೂ ಕುತೂಹಲದಿಂದ ವೀಕ್ಷಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕಾಮ್ಯಾ ಪಂಜಾಬಿ, ಗೌಹರ್ ಖಾನ್, ಹವೇಲ್ ಕೀಚ್, ಸಂಗ್ರಾಮ್ ಸಿಂಗ್, ಅಅಮ್ರಾನ್, ಅಪೂರ್ವ-ಶಿಲ್ಪಾ ಅಗ್ನಿಹೋತ್ರಿ, ಎಲಿ ಆವ್ರಾಮ್, ವಿಜೆ ಆಂಡಿ, ಪ್ರತ್ಯೂಷಾ ಬ್ಯಾನರ್ಜಿ, ರಜತ್ ರವೈಲ್, ಅನಿತಾ, ತನಿಶಾ, ಕುಶಲ್ ಹೀಗೆ ಪ್ರತಿಯೊಬ್ಬರೂ ಪ್ರೇಕ್ಷಕರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಸ್ವರ್ಗ ಹಾಗೂ ನರಕ ವಾಸಿಗಳ ಸದ್ದುಗದ್ದಲ ಹೆಚ್ಚಾಗಿದ್ದು, ವೋಟ್ಔಟ್ನಲ್ಲಿ ನರಕವಾಸಿಗಳಿಗೇ ಹೆಚ್ಚಿನ ಮತ ಬಿದ್ದಿವೆ. ನರಕದಲ್ಲಿ ಭಾರತೀಯ ಶೈಲಿಯ ಟಾಯ್ಲೆಟ್ ಕಂಡು ಹಜೇಲ್ ಶಾಕ್ ಆದರೆ, ಪ್ರತ್ಯುಷಾ ನಲ್ಲಿ ಇದ್ದರೂ ನೀರಿಲ್ಲ, ಬಂದರೂ ಅದು ತಣ್ಣೀರು ಎಂದು ತಗಾದೆ ತೆಗೆದರು. ಮೊದಲ ದಿನ ವಾರ್ಡನ್ ವಾಯ್ಸ್ ಎಲ್ಲರನ್ನೂ ಎಬ್ಬಿಸಿದ್ದ ಶಿಲ್ಪಾ, ಗೌಹಾರ್, ಅನಿತಾಗೆ ಅಡುಗೆ ಮನೆ ಜವಾಬ್ದಾರಿ ವಹಿಸಲಾಗಿದೆ. ಬಿಗ್ಬಾಸ್ ಮನೆಗೆ ಹೊಕ್ಕ ಪ್ರತಿಯೊಬ್ಬರೂ ಮಲಗುವ ವ್ಯವಸ್ಥೆ ಹೇಗಿದೆ ಎಂದು ಮೊದಲು ನೋಡಿದ್ದು ವಿಶೇಷವಾಗಿತ್ತು. ಸ್ವರ್ಗದಲ್ಲಿರುವ ಪತ್ನಿ ಶಿಲ್ಪಾ, ನರಕದಲ್ಲಿರುವ ಪತಿ ಅಪೂರ್ವಗೆ ಕಿಸ್ ಮಾಡಿದ್ದು ಮತ್ತೊಂದು ವಿಶೇಷವಾಗಿತ್ತು. ನರಕ ಹಾಗೂ ಸ್ವರ್ಗವಾಸಿಗಳ ಮಧ್ಯೆ ಕಂಬಿ ಇಡಲಾಗಿದ್ದು, ಅವರ ಲಿಮಿಟ್ ಎಂದೂ ಕ್ರಾಸ್ ಮಾಡುವಂತಿಲ್ಲ. ಸದ್ಯ ನರಕವಾಸಿಗಳಿಗೆ ಕೆಲಸ ಹೆಚ್ಚಿದ್ದು, ಅಲ್ಲಲ್ಲಿ ಸೋರುವ ನೀರು ಹಿಡಿಯಬೇಕು, ಕ್ಲೀನ್ ಮಾಡಿ ಸಮಯಕ್ಕೆ ಸರಿಯಾಗಿ ನೀರು ತುಂಬಿಡಬೇಕು, ಊಟಕ್ಕಾಗಿ ಕಾಯಬೇಕು, ಮಲಗುವ ಕೋಣೆ ಸ್ವಚ್ಛಗೊಳಿಸಿ ನೆಲದ ಮೇಲೆ ಹಾಸಿಗೆ ಹಾಸಿ ಮಲಗಬೇಕು. ಒಟ್ಟಿನಲ್ಲಿ ಮೊದಲ ದಿನವೇ ಕಾರ್ಯಕ್ರಮ ರಂಜನೀಯವಾಗಿತ್ತು.