Article Bollywood Gossips %e0%b2%ac%e0%b2%bf%e0%b2%97%e0%b3%8d%e0%b2%ac%e0%b2%be%e0%b2%b8%e0%b3%8d %e0%b2%ae%e0%b2%a8%e0%b3%86%e0%b2%97%e0%b3%86 %e0%b2%b9%e0%b2%82%e0%b2%b8%e0%b2%bf%e0%b2%95%e0%b2%be %e0%b2%ae%e0%b3%8b%e0%b2%9f%e0%b3%8d%e0%b2%b5%e0%b2%be%e0%b2%a8%e0%b2%bf 113090700038_1.htm

Daily Horoscope

Select Your Language

Notifications

webdunia
webdunia
webdunia
webdunia

ಬಿಗ್ಬಾಸ್ ಮನೆಗೆ ಹಂಸಿಕಾ ಮೋಟ್ವಾನಿ?

ಬಿಗ್ಬಾಸ್
PR
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ಎಂದು ಹಾಡಿ ಕುಣಿದಿದ್ದ ಹಂಸಿಕಾ ಮೋಟ್ವಾನಿ ಈಗ ಬಿಗ್ಬಾಸ್ ಮನೆಗೆ ಕಾಲಿಡುತ್ತಿದ್ದಾರಂತೆ. ಹೀಗೊಂದು ಗಾಸಿಪ್ ಬಾಲಿವುಡ್ನಲ್ಲಿ ಹರಿದಾಡುತ್ತಿದೆ. ಸಖತ್ ಗ್ರಾಂಡ್ ಆಗಿ ಆರಂಭವಾಗುತ್ತಿರುವ ಬಿಗ್ಬಾಸ್ ಸೀಸನ್ 7ನಲ್ಲಿ ಈ ಬಾರಿ ಯಾವೆಲ್ಲಾ ಸ್ಪರ್ದಿಗಳು ಪಾಲ್ಗೊಳ್ಳುತ್ತಿದ್ದಾರೆ ಎಂಬ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಹೊರಬಿದ್ದಿಲ್ಲ. ನೀಲಿ ಚಿತ್ರಗಳ ತಾರೆ ಪ್ರಿಯಾ ರೈ ಸ್ಪರ್ದಿಸುವುದು ಬಹುತೇಕ ಕನ್ಫರ್ಮ್ ಆಗಿದ್ದರೆ ಹಂಸಿಕಾ ಸ್ಪರ್ದಿಸುತ್ತಿರುವ ಸುದ್ದಿಯೂ ಕೇಳಿಬರುತ್ತಿದೆ.

ಸದ್ಯ ತಮಿಳು, ತೆಲುಗು ಚಿತ್ರಗಳಲ್ಲಿ ಬ್ಯುಸಿ ಆಗಿರುವ ಹಂಸಿಕಾ ಬಾಲಿವುಡ್ ಅಂಗಳಕ್ಕೆ ಕಾಲಿಡುವ ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಬಿಗ್ಬಾಸ್ ಮನೆಗೆ ಎಂಟ್ರಿ ಪಡೆಯುವ ಮೂಲಕ ಬಾಲಿವುಡ್ ಮಂದಿಯ ಗಮನ ಸೆಳೆಯುವ ಪ್ರಯತ್ನ ಮಾಡಲಿದ್ದಾರೆಯೇ ಎಂಬ ಕುತೂಹಲ ಅಭಿಮಾನಿಗಳದ್ದು. ಕಲರ್ಸ್ ವಾಹಿನಿಯಲ್ಲಿ ಬಿಗ್ಬಾಸ್ ಕಾರ್ಯಕ್ರಮ ಇದೇ ಸೆಪ್ಟೆಂಬರ್ 15ರಿಂದ ಆರಂಭವಾಗಲಿದೆ. ಕಾರ್ಯಕ್ರಮವನ್ನು ಸಲ್ಮಾನ್ ಖಾನ್ ಡಬಲ್ ಆಕ್ಟಿಂಗ್ ಮೂಲಕ ನಡೆಸಿಕೊಡಲಿದ್ದಾರೆ. ಆರಂಭಕ್ಕೂ ಮುನ್ನ ಸ್ಪರ್ದೇಗಳ ಬಗ್ಗೆ ತೀವ್ರ ಕುತೂಹಲ ಹಾಗೂ ಚರ್ಚೆಗಳು ನಡೆಯುತ್ತಿವೆ.

Share this Story:

Follow Webdunia kannada