Select Your Language

Notifications

webdunia
webdunia
webdunia
webdunia

ಬಿಗ್ಬಾಸ್ 7ನಲ್ಲಿ ರತನ್ಗೆ ವಿಶಿಷ್ಟ ಸ್ನಾನ ಭಾಗ್ಯ

ಬಿಗ್ಬಾಸ್ 7
, ಸೋಮವಾರ, 31 ಮಾರ್ಚ್ 2014 (16:45 IST)
ಕಲರ್ಸ ವಾಹಿನಿಯಲ್ಲಿ ಬಿಗ್ಬಾಸ್ ಸೀಸನ್ 7 ಆರಂಭವಾಗಿ ಎರಡು ವಾರಗಳು ಪೂರ್ಣಗೊಂಡಿವೆ. ರಜತ್ ರವೈಲ್ ಎರಡನೇ ವಾರದಲ್ಲಿ ಎಲಿಮಿನೇಷನ್ ಆಗಿ ಮನೆ ದಾರಿ ಹಿಡಿದಿದ್ದಾರೆ. ಇತ್ತ ಕುಶಾಲ್ ಹಾಗೂ ಗೌಹರ್ ಅವರ ಮಾತುಕತೆ ವೀಕ್ಷಿಸುವುದೇ ಪ್ರೇಕ್ಷಕರಿಗೊಂದು ಮನರಂಜನೆಯ ವಸ್ತುವಾಗಿದೆ. ಕಾಮ್ಯಾ ಜೊತೆ ಸದಾ ಜಗಳವಾಡುತ್ತಿದ್ದ ನಾಟಕರಾಣಿ ಗೌಹರ್ ಕಣ್ಣೀರಿಟ್ಟಿದ್ದಾರೆ. ಈ ಮಧ್ಯೆ ಸ್ವಯಂವರ ಸುಂದರಿ ಎಂದೇ ಖ್ಯಾತಿ ಪಡೆದಿರುವ ರತನ್ಗೆ ವಿಶಿಷ್ಟ ಸ್ನಾನ ಮಾಡುವ ಅವಕಾಶವನ್ನು ಬಿಗ್ಬಾಸ್ ಒದಗಿಸಿದ್ದಾರೆ.

ನರಕವಾಸಿಗಳು ಟಾಸ್ಕ್ ಮಾಡುತ್ತಿದ್ದ ವೇಳೆ ರತನ್ ಅವರನ್ನು ಕರೆಯಿಸಿಕೊಂಡ ಬಿಗ್ಬಾಸ್ ನೀಡಿದ ಆದೇಶ ಎಲ್ಲರನ್ನೂ ಒಂದು ಕ್ಷಣ ಅಚ್ಚರಿಯಲ್ಲಿ ಕೆಡವಿತು. ಹಸು ಸಗಣಿ ತುಂಬಿದ ಬಾತ್ಟಬ್ನಲ್ಲಿ ಮಲಗುವಂತೆ ರತನ್ಗೆ ಬಿಗ್ ಬಾಸ್ ಹೇಳಿದ್ದಾರೆ. ಕಾಮ್ಯಾ ತನ್ನ ಅಸಮಾಧಾನವನ್ನು ಸಲ್ಮಾನ್ ಜೊತೆ ಹಂಚಿಕೊಂಡಿದ್ದು ಈಗ ಬಹಿರಂಗವಾಗಿದೆ. ನರಕದಿಂದ ಸ್ವರ್ಗಕ್ಕೆ ಅದಲು ಬದಲಾಗುವ ವೇಳೆ ಅಪೂರ್ವ ಹೋಗಬೇಕಿತ್ತು. ಕುಶಾಲ್ ಸಂಗ ಬಯಸಿದ ಗೌಹರ್ ಸ್ವಾರ್ಥದಿಂದ ತಾನೇ ಹೋಗಿದ್ದಾರೆ ಎಂದು ಕಾಮ್ಯಾ ಸಿಟ್ಟಾಗಿದ್ದರು. ಗೌಹರ್ ಮಾಡಿಕೊಟ್ಟ ಟೀ ಕುಡಿಯದ ಅವರು ಶಿಲ್ಪಾ ಕೊಟ್ಟರೆ ಮಾತ್ರ ಕುಡಿಯುವುದಾಗಿ ಹೇಳಿದ್ದು ಗೌಹರ್ಗೂ ಸಿಟ್ಟು ತರಿಸಿದೆ. ಅದಕ್ಕಾಗಿ ಬಾತ್ರೂಂಗೆ ಹೋಗಿ ಕಣ್ಣೀರಿಟ್ಟ ಗೌಹರ್ ಅನ್ನು ಸಮಾಧಾನಿಸಲು ಕುಶಾಲ್ ಬರಬೇಕಾಯಿತು. ಇತ್ತ ಸ್ವರ್ಗದಲ್ಲಿ ಅನಿತಾ, ತನೀಶಾ, ಅರ್ಮಾನ್ ಸೇರಿ ಕುಶಾಲ್ ಗೌಹರ್ ಪ್ರೇಮಕಥೆಯ ಬಗ್ಗೆ ಚರ್ಚಿಸಿದರು. ಇವರಿಬ್ಬರಿಂದ ಮನೆಯಲ್ಲಾಗುವ ಮುಜುಗರದ ಬಗ್ಗೆ ಚಚರ್ಿಸಿದ್ದು ವಿಶೇಷವಾಗಿತ್ತು.

Share this Story:

Follow Webdunia kannada