Article Bollywood Gossips %e0%b2%ac%e0%b2%bf%e0%b2%97%e0%b3%8d%e0%b2%ac%e0%b2%be%e0%b2%b8%e0%b3%8d 7 %e0%b2%b0%e0%b2%9c%e0%b2%a4%e0%b3%8d %e0%b2%ae%e0%b2%a8%e0%b3%86%e0%b2%af%e0%b2%bf%e0%b2%82%e0%b2%a6 %e0%b2%94%e0%b2%9f%e0%b3%8d 113100100005_1.htm

Daily Horoscope

Select Your Language

Notifications

webdunia
webdunia
webdunia
webdunia

ಬಿಗ್ಬಾಸ್ 7: ರಜತ್ ಮನೆಯಿಂದ ಔಟ್

ಬಿಗ್ಬಾಸ್ 7
PR
ಬಿಗ್ಬಾಸ್ ಕಾರ್ಯಕ್ರಮದ ಎರಡನೇ ವಾರದಲ್ಲಿ ನಿರೀಕ್ಷೆಯಂತೆ ಎಲಿಮಿನೇಷನ್ ನಡೆದಿದೆ. ದೈತ್ಯ ದೇಹ ಇಟ್ಟುಕೊಂಡು ಮನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಪರಿಪಾಟಲು ಪಡುತ್ತಿದ್ದ ರಜತ್ ರವೈಲ್ ಅವರನ್ನು ಮನೆಯಿಂದ ಹೊರಕ್ಕೆ ಕಳುಹಿಸಲಾಗಿದೆ.

ಎಲಿಮಿನೇಷನ್ ವೇಳೆ ನರಕವಾಸಿಗಳ ಹೆಸರು ಆಯ್ಕೆ ಮಾಡಲು ಸ್ವರ್ಗವಾಸಿಗಳಿಗೆ ಹೇಳಲಾಗಿತ್ತು. ಆದರೆ ಮನೆಯಿಂದ ಹೊರಕ್ಕೆ ಕಳಿಸುವ ಸ್ಪರ್ದೇಯ ಆಯ್ಕೆ ಅಥವಾ ಸೂಪರ್ ಪವರ್ ಅನ್ನು ಕ್ಯಾಪ್ಟನ್ ತನೀಶಾ ಕೈಗೆ ನೀಡಲಾಗಿತ್ತು. ಪ್ರತ್ಯೂಷಾ ಬ್ಯಾನರ್ಜೀ, ಕಾಮ್ಯಾ ಪಂಜಾಬಿ, ಗೌಹರ್ ಖಾನ್, ಕುಶಾಲ್ ತಂಡನ್ ಹಾಗೂ ರಜತ್ ರಾವೈಲ್ ಎಲಿಮಿನೇಷನ್ಗೆ ಆಯ್ಕೆಯಾಗಿದ್ದರು.

webdunia
PR
ಈ ಪೈಕಿ ಕಡಿಮೆ ವೋಟ್ ಪಡೆದ ರಜತ್ ಮನೆಯಿಂದ ಹೊರಬಿದ್ದಿದ್ದಾರೆ. ರಜತ್ ತನಗಾಗಿರುವ ಅನಾರೋಗ್ಯವನ್ನು ಪ್ರಾಣಾಂತಿಕ ಎಂಬಂತೆ ಬಿಂಬಿಸಿದ್ದು ಆವರನ್ನು ಮನೆಯಿಂದ ಹೊರಹಾಕಲು ಕಾರಣ ಎನ್ನಲಾಗಿದೆ. ಪ್ರತ್ಯೂಷಾಗೆ ದೊಡ್ಡ ಅಭಿಮಾನಿಗಳ ಬಳಗವಿದ್ದು ಕುಶಾಲ್ ಹಾಗೂ ಗೌಹರ್ ಮಧ್ಯದ ಪ್ರೇಮ್ಕಹಾನಿ ಬಗ್ಗೆ ಜನರಿಗೆ ಆಸಕ್ತಿ ಹೆಚ್ಚಿದೆ ಎನ್ನಲಾಗಿದೆ.

ಸಲ್ಮಾನ್ ಆತ್ಮೀಯ ಗೆಳೆಯರ ಪೈಕಿ ಒಬ್ಬನಾಗಿರುವ ರಜತ್ ಬಾಡಿಗಾರ್ಡ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಸಲ್ಮಾನ್ ಮಾರ್ಗದರ್ಶನದ ಮೇರೆಗೆ ಬಿಗ್ಬಾಸ್ ಮನೆಗೆ ಬಂದೆ ಎಂಬುದನ್ನು ಆರಂಭದಲ್ಲೇ ಅವರು ಹೇಳಿದ್ದರು. ತನ್ನ ಮಗುವನ್ನು ನೋಡಬೇಕು ಎಂದು ಹಂಬಲಿಸಿದ್ದ ರಜತ್ ದೇಹಾರೋಗ್ಯ ಕುಸಿತದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಅವರ ಪಾಲಿನ ಎಲಿಮಿನೇಷನ್ಗೆ ಕಾರಣವಾಯಿತು ಎನ್ನಲಾಗಿದೆ.

Share this Story:

Follow Webdunia kannada