ಬಿಗ್ಬಾಸ್-7 ಆರಂಭಕ್ಕೆ ಕ್ಷಣಗಣನೆ ಆರಂಭ
Publish Date: Wed, 31 Jul 2013 (09:43 IST)
Updated Date: Wed, 31 Jul 2013 (09:42 IST)
ಕಲರ್ಸ ವಾಹಿನಿಯಲ್ಲಿ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ಬಾಸ್ ಕಾರ್ಯಕ್ರಮಕ್ಕೆ ಅಂತಿಮ ವೇದಿಕೆ ಸಿದ್ಧವಾಗಿದೆ. ಬಿಗ್ಬಾಸ್ 7 ಕಾರ್ಯಕ್ರಮದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಲು ಮತ್ತು ವಿಭಿನ್ನವಾಗಿ ನಿರೂಪಣೆ ಮಾಡಲು ಸಲ್ಮಾನ್ ತಯಾರಾಗುತ್ತಿದ್ದಾರೆ. ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಸೀಸನ್ನ ವಿಶೇಷ.ಬಹುನಿರೀಕ್ಷಿತ ಬಿಗ್ಬಾಸ್ 7ನ ಟೀಸರ್ ಹೊರಬಿದ್ದಿದೆ. ಪ್ರೊಮೊದಲ್ಲಿ ಹೇಳಿದ್ದಂತೆ ನರಕ, ಸ್ವಗ್ರ್ವದ ದರ್ಶನ ನಂತರ ಬಿಗ್ಬಾಸ್ ದರ್ಶನ ಪ್ರಾಪ್ತಿಯಾಗಲಿದೆಯಂತೆ. ಕಳೆದ ವಾರವಷ್ಟೇ ಸಲ್ಮಾನ್ ಖಾನ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸೋರಿಕೆಯಾಗಿತ್ತು. ಅವರು ಸ್ವರ್ಗ ನರಕದ ದರ್ಶನ ಮಾಡಿಸಲು ಅದಕ್ಕೆ ತಕ್ಕಂತೆ ಉಡುಪು ಧರಿಸಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದರು. ಸಲ್ಮಾನ್ ಬಿಗ್ಬಾಸ್ ನಿರೂಪಣೆ ಜವಾಬ್ದಾರಿ ಒಪ್ಪಿಕೊಂಡ ಮೇಲೆ ಇದು ನಾಲ್ಕನೇ ಸೀಸನ್ ಆಗಿದ್ದು, ಪ್ರತೀಬಾರಿ ವಿಭಿನ್ನವಾಗಿ ಕಾಣಿಸಿಕೊಂಡು ಕಾರ್ಯಕ್ರಮ ನಿರೂಪಣೆ ಮಾಡುತ್ತಿರುವುದು ಅವರ ವೈಶಿಷ್ಟ್ಯ.ಈ ಬಾರಿಯ ಬಿಗ್ಬಾಸ್ ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ಇಲ್ಲವೇ ಅಕ್ಟೋಬರ್ ಆರಂಭದಲ್ಲಿ ಪ್ರಸಾರವಾಗಲಿದೆ. ಸದ್ಯಕ್ಕೆ ಬಿಗ್ಬಾಸ್ 7 ಸ್ಪಧರ್ಿಗಳ ವಿವರ ಸಿಕ್ಕಿಲ್ಲ. ಪ್ರಸಿದ್ದ ಕ್ರಿಕೆಟ್ ತಾರೆಯೊಬ್ಬರು ಮನೆಯಲ್ಲಿರುವರು ಎಂಬ ಬಗ್ಗೆ ಗಾಸಿಪ್ ಹರಡಿವೆ. ದುಷ್ಟಪಾತ್ರದಲ್ಲೂ ಸಲ್ಮಾನ್ ಕಾಣಿಸಿಕೊಂಡು ಸ್ಪರ್ಧೇಗಳಿಗೆ ಅತಿಕಠಿಣ ಶಿಕ್ಷೆ ನೀಡಲಿದ್ದಾರೆ ಎಂಬುದು ಸದ್ಯಕ್ಕೆ ಲಭ್ಯವಿರುವ ಮಾಹಿತಿ.