Article Bollywood Gossips %e0%b2%ac%e0%b2%bf%e0%b2%97%e0%b3%8d %e0%b2%ac%e0%b2%bf %e0%b2%af %e0%b2%b9%e0%b3%8a%e0%b2%b8 %e0%b2%b0%e0%b3%82%e0%b2%aa %e0%b2%9c%e0%b2%bf%e0%b2%ae%e0%b3%8d %e0%b2%95%e0%b2%be%e0%b2%b0%e0%b3%8d%e0%b2%ac%e0%b3%86%e0%b2%9f%e0%b3%8d 109022800040_1.htm

Daily Horoscope

Select Your Language

Notifications

webdunia
webdunia
webdunia
webdunia

`ಬಿಗ್ ಬಿ'ಯ ಹೊಸ ರೂಪ ಜಿಮ್ ಕಾರ್ಬೆಟ್!

ಬಿಗ್ ಬಿ
ಸೂಪರ್ ಸ್ಟಾರ್, ಬಿಗ್ ಬಿ ಅಮಿತಾಬ್ ಬಚ್ಚನ್ ಹೊಸತೊಂದು ರೂಪದಲ್ಲಿ ಪ್ರೇಕ್ಷಕರೆದುರು ಬರಲಿದ್ದಾರೆ. ಸುಂದರ್‌ಬನ್ಸ್ ಅರಣ್ಯದಲ್ಲಿ ನರಭಕ್ಷಕ ಚಿರತೆಗಳನ್ನು ಬೇಟೆಯಾಡಿದ ಜಿಮ್ ಕಾರ್ಬೆಟ್ ರೂಪದಲ್ಲಿ.

IFM
ಜಿಮ್ ಕಾರ್ಬೆಟ್ ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದ ಹಳ್ಳಿಹಳ್ಳಿಯಲ್ಲಿಯೂ ಜಿಮ್ ಕಾರ್ಬೆಟ್ ಎಂಬ ಮನುಷ್ನ ಸಾಹಸಗಾಥೆ ಈಗಲೂ ದಂತಕಥೆಯಾಗಿ ಜನಜನಿತ. ಆದರೆ, ಬ್ರಿಟೀಷ್ ಇಂಡಿಯನ್ ಆರ್ಮಿಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಜಿಮ್ ಕಾರ್ಬೆಟ್ ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ. ಆದರೆ ಉತ್ತರ ಭಾರತದ ಕುಮೌಂ ಅರಣ್ಯ ಪ್ರದೇಶದಲ್ಲಿ ಹಾಗೂ ಸುಂದರ್ಬನ್ಸ್‌ ಸುತ್ತಮುತ್ತಲ ಹಳ್ಳಿಗಳಲ್ಲಿ ಜನ ಮನೆಯಿಂದ ಅಂಗಳಕ್ಕಿಳಿಯಲು ಹೆದರುವಷ್ಟು ನರಭಕ್ಷಕ ಚಿರತೆಗಳ ಉಪಟಳವಿತ್ತು. ಆ ಸಮಯದಲ್ಲಿ ಹಗಲು ರಾತ್ರಿ ಅರಣ್ಯದಲ್ಲಿ ಕಾದು ಕುಳಿತು ಆ ಚಾಣಾಕ್ಷ ಚಿರತೆಗಳನ್ನು ಹೊಡೆದುರುಳಿಸಿ ನಾಗರಿಕರನ್ನು ಕಾಪಾಡಿದ ಕಥೆ ವಿರೋಚಿತವಾದುದು. ಭಾರತೀಯ ಶಾಲಾ ಪಠ್ಯದಲ್ಲೂ ಈ ಕಥೆ ಈಗಲೂ ಸ್ಥಾನ ಪಡೆದಿದೆ. ಅಂತಹ ಜಿಮ್ ಕಾರ್ಬೆಟ್ ಈಗ ಬಾಲಿವುಡ್ ಅಂಗಳಕ್ಕೆ ಅಮಿತಾಬ್ ರೂಪದಲ್ಲಿ ಬರಲಿದ್ದಾನೆ.

ಅಂದಹಾಗೆ ಈ ಜಿಮ್ ಕಾರ್ಬೆಟ್ ಥ್ರಿಲ್ಲರ್ ಕಥಾನಕವನ್ನು ಪ್ರಿಯದರ್ಶನ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ `ಗ್‌ರ್ರ್‌' ಅಂತ ಹೆಸರಿಡಲಾಗಿದೆಯಂತೆ. ಕೇವಲ ಜಾಹಿರಾತುಗಳಲ್ಲಿ ಮಾತ್ರ ಅಮಿತಾಬ್‌ಗೆ ನಿರ್ದೇಶನದ ಸಾಥ್ ನೀಡಿದ್ದ ಪ್ರಿಯದರ್ಶನ್ ಈಗ ತನ್ನ ಸಿನಿಮಾದಲ್ಲಿ ಅಮಿತಾಬ್‌ಗೆ ಸ್ಥಾನ ನೀಡಿದ್ದಾರೆ.

ಈ ಚಿತ್ರದಲ್ಲಿ ಜಿಮ್ ಕಾರ್ಬೆಟ್ ಪಾತ್ರ ಎಷ್ಟು ಪ್ರಮುಖವೋ ಅಷ್ಟೇ ಚಿರತೆಯ ಪಾತ್ರವೂ ಪ್ರಮುಖ. ಹಾಗಾಗಿ ಈ ಬಾರಿ ಚಿತ್ರಕ್ಕೆ ನಿಜವಾದ ಚಿರತೆಯನ್ನು ಬಳಸಲಾಗುವುದಿಲ್ಲ. ರೊಬೋಟಿಕ್ ಆನಿಮೇಟೆಡ್ ಚಿರತೆಗಳು ಇಲ್ಲಿ ಜಿಮ್ ಕಾರ್ಬೆಟ್‌ಗೆ ಎದುರಾಳಿಯಾಗಲಿದೆಯಂತೆ. ನಿರ್ದೇಶಕ ಪ್ರಿಯದರ್ಶನ್ ಪ್ರಕಾರ, "ಜಿಮ್ ಪಾತ್ರಕ್ಕೆ ಅಮಿತಾಬ್ ಬಿಟ್ಟರೆ ಬಾಲಿವುಡ್‌ನಲ್ಲಿ ಇನ್ನಾರು ಸಿಗುತ್ತಾರೆ?" ಒಟ್ಟಿನಲ್ಲಿ ಇತ್ತೀಚೆಗೆ ತಮಾಷೆಯ ಹಾಗೂ ಬೇರೆಯದೇ ಪಾತ್ರದಲ್ಲಿ ನಟಿಸುತ್ತಿದ್ದ ಥ್ರಿಲ್ಲರ್ ಕಥಾನಕವೊಂದರಲ್ಲಿ ಗಂಭೀರ ಪಾತ್ರದ ಮೂಲಕ ಬರುತ್ತಿರುವುದು ಅಮಿತಾಬ್ ಅಭಿಮಾನಿಗಳಿಗ ಕುತೂಹಲ ಹುಟ್ಟಿಸಿದೆ.

Share this Story:

Follow Webdunia kannada