ಲೋನಾವ್ಲಾ: ರಿಯಾಲಿಟಿ ಷೋ ಬಿಗ್ ಬಾಸ್ ಸೀಸನ್ 7ರಲ್ಲಿ ಭಾಗಿಯಾದ ನಟ ಅರ್ಮಾನ್ ಕೊಹ್ಲಿಯನ್ನು ಲೋನಾವಾಲಾ ಪೊಲೀಸರು ಬಂಧಿಸಿದ್ದಾರೆ. ಬಿಗ್ ಬಾಸ್ ಸಹಭಾಗಿ ಮತ್ತು ನಟಿ ಸೋಫಿಯಾ ಹಯಾತ್ ತನ್ನ ಮೇಲೆ ಅರ್ಮಾನ್ ಕೊಹ್ಲಿ ಹಲ್ಲೆ ಮಾಡಿದ್ದಾನೆ ಎಂದು ದೂರು ನೀಡಿದ ಬಳಿಕ ಅವನನ್ನು ಬಂಧಿಸಲಾಗಿದೆ. ಕೊಹ್ಲಿ 29 ವರ್ಷ ವಯಸ್ಸಿನ ಹಯಾತ್ ಮೇಲೆ ಶೋ ಸಂದರ್ಭದಲ್ಲಿ ಕಾರಿನ ವಿಂಡ್‌ಸ್ಕ್ರೀನ್ ಒರೆಸುವ ಮಾಪ್‌ನಿಂದ ಮುಖದ ಮೇಲೆ ಹೊಡೆದಿದ್ದ. ಬ್ರಿಟಿಷ್ -ಪಾಕಿಸ್ತಾನಿ ನಟಿ ಮತ್ತು ರೂಪದರ್ಶಿ ಈ ಕುರಿತು ತಿಳಿಸುತ್ತಾ, ಕೊಹ್ಲಿ ತನಗೆ ಹೊಡೆದ ದೃಶ್ಯಗಳನ್ನು ಬಿಗ್ ಬಾಸ್ ತೋರಿಸಿಲ್ಲ, ಏಕೆಂದರೆ ಮಕ್ಕಳು ಕೂಡ ಆ ಶೋ ವೀಕ್ಷಿಸುತ್ತಾರೆ ಎಂದು ಹೇಳಿದ್ದಾಳೆ.
ಲೋನಾವಾಲಾ ಪೊಲೀಸರು ಈ ಘಟನೆಯ ಕಚ್ಚಾ ದೃಶ್ಯಗಳನ್ನು ಸಂಗ್ರಹಿಸಿ ಕೊಹ್ಲಿ ಹಯಾತ್‌ಗೆ ಹೊಡೆದಿರುವುದು ಖಚಿತಪಟ್ಟ ಮೇಲೆ ಕಳೆದ ರಾತ್ರಿ ಬಂಧಿಸಿದರು6 ಅಡಿ ಎರಡು ಇಂಚು ಉದ್ದದ ವ್ಯಕ್ತಿ ನನಗೆ ಕೋಲಿನಿಂದ ಹೊಡೆದ.ಅವನು ತುಂಬಾ ಹಿಂಸಾತ್ಮಕ ವ್ಯಕ್ತಿ. ಅವನು ಬೇರೆ ಮಹಿಳೆ ಮೇಲೆ ಹಲ್ಲೆ ಮಾಡುವ ಎರಡನೇ ಅವಕಾಶ ನೀಡಬಾರದು. ಅವನಿಗೆ ಪಾಠ ಕಲಿಸುವುದು ನನ್ನ ಉದ್ದೇಶವಲ್ಲ, ನನಗೆ ಸರಿಎನಿಸಿದ್ದನ್ನು ನಾನು ಮಾಡಿದ್ದೇನೆ ಎಂದು ಹೇಳಿಕೆಯಲ್ಲಿ ಸೋಫಿಯಾ ತಿಳಿಸಿದ್ದಾಳೆ.