ಬಿಕಿನಿ ಬೇಬಿ ಆಗುತ್ತಿದ್ದಾಳೆ ಶೃತಿಹಾಸನ್..
, ಶನಿವಾರ, 18 ಜನವರಿ 2014 (13:30 IST)
ದಕ್ಷಿಣ ಭಾರತದಲ್ಲಿ ಸದ್ದು ಮಾಡುತ್ತಿರುವ ನಟಿಯರಲ್ಲಿ ಶೃತಿಹಾಸನ್ ಸಹ ಒಬ್ಬರು. ಆರಂಭದಲ್ಲಿ ಹೇಳಿಕೊಳ್ಳುವಂತಹ ಲಕ್ ಇರದ ಈ ಚೆಲುವೆಗೆ ಈಗ ರಮ್ಯ ಚೈತ್ರ ಕಾಲ. ಶೃತಿ ಬಗ್ಗೆ ದಿನಕ್ಕೊಂದು ಹೊಸ ಕಥೆ ಬರದೆ ಇದ್ದರು ಅನೇಕ ಕಾರಣಗಳಿಂದ ಆಕೆಯ ಬಗ್ಗೆ ಮಾಧ್ಯಮಗಳು ಹೇಳುತ್ತಾ ಬರುತ್ತಿವೆ. ಇತ್ತೀಚಿನ ವಿಷಯ ಅಂದರೆ ಈ ಚೆಲುವೆ ತನ್ನ ರಾಶಿ ರೂಪವನ್ನು ಬಿಕಿನಿ ಮುಖಾಂತರ ಬಿಚ್ಚಿದಳು ಸಿದ್ಧ ಆಗಿದ್ದಾಳಂತೆ. ಆಕೆಯ ಈ ರೂಪವನ್ನು ಕಾಣ ಬೇಕಾದರೆ 2015 ನೇ ಇಸವಿ ಬರಬೇಕಷ್ಟೇ. ಅಂದಂಗೆ ಇತ್ತೀಚೆಗಷ್ಟೇ ರಾಮ್ ಚರಣ್ ಅವರ ಎವಡು ಚಿತ್ರದಲ್ಲಿ ನಟಿಸಿ ಯಶಸ್ವಿ ಆದ ಈ ಚೆಲುವೆ ಈಗಾಗಲೇ ಬಿಕಿನಿ ಬೇಬಿ ಆಗ ಬೇಕಿತ್ತು. ಆದರೆ ದುಡ್ಡು ಕೊಡುವ ವಿಷಯದಲ್ಲಿ ನಿರ್ಮಾಪಕರು ಮಾತು ತಪ್ಪಿದ ಕಾರಣ ಆಕೆ ಆ ರೀತಿ ಮೈ ಪ್ರದರ್ಶಿಸಲು ನೋ ಎಂದರಂತೆ. ಆದರೆ ದಕ್ಷಿಣದಲ್ಲಿ ಬೇಡ ಅಂದವಳು ಬಾಲಿವುಡ್ ನಲ್ಲಿ ಆ ರೀತಿ ಮಾಡಲು ಸಿದ್ಧ ಆಗಿದ್ದಾಳಂತೆ . ಅಂದರೆ ಅಲ್ಲಿನ ಸೂಪರ್ ಸ್ಟಾರ್ ಚಿತ್ರದಲ್ಲಿ ಬಿಕಿನಿ ಬೇಬಿ ಆಗಲು ಸಿದ್ಧ ಆಗಿದ್ದಾಳಂತೆ ಅನ್ನೋದೇ ಸುದ್ದಿ. ಇದಕ್ಕೆ ಸಂಬಂಧಪಟ್ಟಂತೆ ಪತ್ರಿಕೆ ಒಂದರಲ್ಲಿ ತಿಳಿಸಿದ್ದಾಳೆ. ಈಗ ಈಕೆಗೆ ಅವಕಾಶಗಳ ಸುರಿಮಳೆ ಆಗುತ್ತಿದ್ದು, ಅದಕ್ಕೆ ಪೂರಕವಾಗಿ ಹಣವನ್ನು ಸಹ ದಿನೇದಿನೇ ಹೆಚ್ಚಿಸುತ್ತಾ ಹೋಗುತ್ತಿದ್ದಾಳೆ ಈ ಚೆಲುವೆ. ಇತ್ತೀಚಿಗೆ ಆಕೆ ಒಂದು ಫೋಟೋ ಶೂಟ್ ಮಾಡಿಸಿ ಕೊಂಡಿದ್ದಾಳಂತೆ, ಅದರಲ್ಲಿ ಆಕೆಯ ಚೆಲುವನ್ನು ಕಂಡ ಬಾಲಿವುಡ್ ಮಂದಿ ಎದೆ ಬಡಿತ ಹೆಚ್ಚಾಗಿದೆಯಂತೆ. ಈಗ ಐದು ಚಿತ್ರಗಳ ಸರದಾರಿಣಿ ಆಗಿರುವ ಶೃತಿ ತನ್ನ ಬಿಕಿನಿಯಿಂದ ಮತ್ತೆಷ್ಟು ಚಾನ್ಸ್ ಪಡೆಯುತ್ತಾಳೋ ನೋಡುವಾ !