Article Bollywood Gossips %e0%b2%ac%e0%b2%be%e0%b2%b7 %e0%b2%ac%e0%b2%be%e0%b2%b7 %e0%b2%b8%e0%b3%82%e0%b2%b0%e0%b3%8d%e0%b2%af %e0%b2%b8%e0%b3%82%e0%b2%b0%e0%b3%8d%e0%b2%af 113112400007_1.htm

Select Your Language

Notifications

webdunia
webdunia
webdunia
webdunia

ಬಾಷ ಬಾಷ ಸೂರ್ಯ ಸೂರ್ಯ...

ಲಿಂಗು ಸ್ವಾಮಿ
PR
PR
ಕಾಲಿವುಡ್ ಚಾರ್ಮಿಂಗ್ ಸ್ಟಾರ್ ಸೂರ್ಯ ಹೊಸ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಇದನ್ನು ಮುಂಬೈ ಮಹಾನಗರದಲ್ಲಿ ಮಾಡುತ್ತಿದ್ದಾರೆ ನಿರ್ದೇಶಕ ಲಿಂಗು ಸ್ವಾಮಿ. ಈ ಚಿತ್ರವು ಸೂರ್ಯ ಅವರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಯಶಸ್ವಿ ನಿರ್ದೇಶಕ ಲಿಂಗು ಸ್ವಾಮಿ ಗರಡಿಯಲ್ಲಿ ಹೊರ ಹೊಮ್ಮುತ್ತಿರುವ ಈ ಚಿತ್ರವು ಅನೇಕ ಸಿದ್ಧತೆಗಳನ್ನು ಮಾಡಿಕೊಂಡು ಮುಂಬೈನಲ್ಲಿ ತಳ ಊರಿದೆ. ಆದರೆ ಈಗ ನಾವು ಹೇಳ ಹೊರಟಿರುವ ಸಂಗತಿ ಅದಲ್ಲ.. ಈ ಚಿತ್ರವು ಅದರ ಕಥೆಯು ಬಹುತೇಕ ಸೂಪರ್ ಸ್ಟಾರ್ ರಜನಿ ಕಾಂತ್ ನಟಿಸಿರುವ ಬಾಷ ಚಿತ್ರಕಥೆಯಂತೆ ಇದೆ ಎನ್ನುತ್ತಿದೆ ಮೂಲಗಳು.

ಅಂದಕಾಲತ್ತಿನ ಬಾಷ ಸೂಪ ರ್ ಡೂಪರ್ ಹಿಟ್ ಚಿತ್ರಗಳಲ್ಲಿ ಒಂದಾಗಿತ್ತು.ಕೆಟ್ಟವರಿಗೆ ಕೆಟ್ಟವ ಒಳ್ಳೆಯವರಿಗೆ ಒಳ್ಳೆಯವ ಬಾಷ ಅನ್ನೊ ಹೀರೋ ಡಾನ್ ಗಳಿಗೆ ಚಿತ್ರದಲ್ಲಿ ಮಣ್ಣು ಮುಕ್ಕಿಸಿದ್ದ ಕತೆ . ಸ್ಟೈಲು ಸ್ಟೈಲುಡಾ ಸೂಪ್ಪ ಸ್ಟೈಲು ಡಾ ಹಾಡು ಇನ್ನೂ ಜನ ಮರೆತಿಲ್ಲ. ಈಗ ಆ ಸಿನಿಮಾ ಕಥೆಯನ್ನೇ ಸೂರ್ಯ ಹೊಸ ಚಿತ್ರ ಹೋಲುತ್ತಿದೆ. ಚಿತ್ರದಲ್ಲಿ ಸೂರ್ಯ ಜೊತೆ ಮನೋಜ್ ಬಾಜಪೇಯಿ ನಟಿಸಿದ್ದಾರೆ

Share this Story:

Follow Webdunia kannada