Article Bollywood Gossips %e0%b2%ac%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d%e2%80%8c%e0%b2%a8 %e0%b2%85%e0%b2%97%e0%b3%8d%e0%b2%b0 %e0%b2%b8%e0%b2%82%e0%b2%aa%e0%b2%be%e0%b2%a6%e0%b2%95 %e0%b2%b0%e0%b3%81 108102900018_1.htm

Daily Horoscope

Select Your Language

Notifications

webdunia
webdunia
webdunia
webdunia

ಬಾಲಿವುಡ್‌ನ ಅಗ್ರ 'ಸಂಪಾದಕ'ರು

ಅಕ್ಷಯ್
IFM
ಬಾಲಿವುಡ್‌ ಕಿಂಗ್‌ಗಳ ಸಂಪಾದನೆ ಲಕ್ಷಗಳ ಲೆಕ್ಕದಲ್ಲಿಲ್ಲ. ಅದೇನಿದ್ದರೂ ಕೋಟಿ ಕೋಟಿಗಳ ಸಂತೆ. ದೀಪಾವಳಿಯು ಧನಲಕ್ಷ್ಮಿ ಮನೆಮನೆಗೆ ಆಗಮಿಸುವ ದಿನವೂ ಹೌದಾಗಿದ್ದರಿಂದ ಇವರ ಸಂಪಾದನೆ-ಸಂಭಾವನೆ ಕುರಿತು ನೆನಪಿಸಲು ಸುಸಮಯ. ಬನ್ನಿ... ಒಂದು ಸುತ್ತು ಹಾಕಿ ಬರೋಣ..

ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಪಾದನೆ ಮಾಡುವ ವಿಚಾರಕ್ಕೆ ಬಂದಾಗ ಅಕ್ಷಯ್ ಕುಮಾರ್ ಪಟ್ಟಿಯ ಮುಂಚೂಣಿಯಲ್ಲಿದ್ದಾರೆ. ಶಾರೂಖ್ ಖಾನ್ ಕೂಡಾ ಅಕ್ಷಯ್ ಎದುರು ಸಂಪಾದನೆ ವಿಚಾರದಲ್ಲಿ ಕೊಂಚ ಹಿಂದೆಯೇ. ಅಕ್ಷಯ್‌ನ ನಮಸ್ತೇ ಲಂಡನ್, ಹೇ ಬೇಬಿ, ಭೂಲ್ ಭೂಲಯ್ಯಾ, ವೆಲ್‌ಕಮ್ ಮತ್ತು ಸಿಂಗ್ ಈಸ್ ಕಿಂಗ್ ಕಂಡ ಅದ್ಭುತ ಯಶಸ್ಸು ಆತನನ್ನು ಟಾಪ್ ಮೋಸ್ಟ್ ಸ್ಟಾರ್‌ ಆಗಿಸಿದೆ. ಹಾಗಾಗಿ ಬಾಲಿವುಡ್‌ನಲ್ಲಿ ಈಗ ಅತಿ ಬೇಡಿಕೆಯ ನಟ ಅಕ್ಷಯ್ ಕುಮಾರ್.

ಶಾರೂಕ್ ಕಿರುತೆರೆಯ ಕಾರ್ಯಕ್ರಮ 'ಕ್ಯಾ ಆಪ್ ಪಾಂಚ್ವಿ ಪಾಸ್ ಸೆ ತೇಜ್ ಹೈ'ಗೆ ಪಡೆದುಕೊಳ್ಳುವ ಸಂಭಾವನೆಗಿಂತ ಅಕ್ಷಯ್ ಕುಮಾರ್ 'ಫಿಯರ್ ಫ್ಯಾಕ್ಟರ್'ಗೆ ತೆಗೆದುಕೊಳ್ಳುವ ಸಂಭಾವನೆ ಹೆಚ್ಚು. ಫಿಯರ್ ಫ್ಯಾಕ್ಟರ್‌ನಲ್ಲಿ ಅಕ್ಷಯ್ ಪ್ರತಿ ಕಂತಿಗೆ 1.5 ಕೋಟಿ ಕಬಳಿಸುತ್ತಿದ್ದಾನೆ. ಈ ಹಿಂದೆ ಶಾರೂಖ್‌ಗೆ ಹೆಚ್ಚಾಗಿದ್ದ ಅಂತಾರಾಷ್ಟ್ರೀಯ ಅಭಿಮಾನಿಗಳನ್ನು ಅಕ್ಷಯ್ ಕೂಡಾ ಗಿಟ್ಟಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿಯೂ ಅಕ್ಷಯ್ ಟಾಪ್ ಸ್ಟಾರ್ ಆಗಿದ್ದಾರೆ.

ಪ್ರೇಕ್ಷಕರ ಅಪೇಕ್ಷೆಗೆ, ಪ್ರೀತಿಗೆ ಸ್ಪಂದಿಸುವಲ್ಲಿ ಶಾರೂಖ್ ಯಾವತ್ತೂ ಎಡವಿಲ್ಲ. ದಶಕಗಳಿಂದ ಬಾಲಿವುಡ್ ಕಿಂಗ್ ಆಗಿರುವ ಈತನ ಇಮೇಜ್‌ನ್ನು ಯಾರಿಗೂ ಕೊಳ್ಳೆ ಹೊಡೆಯಲು ಸಾಧ್ಯವಾಗಿಲ್ಲ. ಸದ್ಯದ ಮಟ್ಟಿಗೆ ಅದು ಯಾರಿಂದಲೂ ಆಗದ ಕೆಲಸ. ಯಶ್‌ ರಾಜ್‌ರ 'ರಬ್ ನೇ ಬನಾ ದೀ ಜೋಡಿ' ಮತ್ತು ಕರಣ್ 'ಮೈ ನೇಮ್ ಈಸ್ ಖಾನ್'ಗೆ ಹೆಚ್ಚು ಸಂಭಾವನೆ ಪಡೆದಿಲ್ಲ ಎಂಬ ವರದಿಗಳೂ ಬಂದಿವೆ. ಆದರೂ ಶಾರೂಖ್ ಸಂಭಾವನೆ ಕಡಿಮೆಯೇನಿಲ್ಲ. ಹೋಮ್ ಪ್ರೊಡಕ್ಷನ್ 'ಓಂ ಶಾಂತಿ ಓಂ'ಗಾಗಿ ಖಾನ್ ತನಗೆ ವಿಧಿಸಿಕೊಂಡ ಸಂಭಾವನೆ 5 ಕೋಟಿಯಂತೆ. ಬಿಡಿ, ನಮ್ ಶಾರೂಖ್ ಯಾವತ್ತಿದ್ದರೂ ಶಾರೂಖ್ಖೇ..

ಇನ್ನು ಆಮೀರ್ ಖಾನ್ ವಿಚಾರಕ್ಕೆ ಬಂದಾಗ ಕೊಂಚ ಸೀರಿಯಸ್ಸಾಗಿ ಇರಬೇಕಾದ ಅನಿವಾರ್ಯತೆಯಿದೆ. ಯಾವತ್ತೂ ಉತ್ತಮ ಪಾತ್ರಗಳತ್ತ ಅಥವಾ ಉತ್ತಮ ಕಥೆಗಳನ್ನೇ ಚಿತ್ರವಾಗಿಸುವ ಈತನ ಜಾಣ್ಮೆಗೆ ಬೆಲೆಯೂ ಅಷ್ಟೇ ಇದೆ. ನಿರ್ಮಾಪಕರು ಕೂಡ ಹಿಂಜರಿಯದೆ ಅದಕ್ಕಿಂತ ಹೆಚ್ಚಿನ ಆಮಿಷ ಒಡ್ಡುತ್ತಾರೆ. ಸೂಪರ್‌ಹಿಟ್ 'ಫನಾ'ಗೆ ಆಮೀರ್ ಪಡೆದದ್ದು ಎಷ್ಟು ಗೊತ್ತೇ? ಕೇವಲ 8 ಕೋಟಿ ರೂಪಾಯಿ!

'ತಾರೆ ಜಮೀನ್ ಪರ್' ಹಿಟ್ ಆದ ನಂತರ ಸ್ಟುಡಿಯೋ 18 ನಿರ್ಮಾಣ ಸಂಸ್ಥೆ ಆಮೀರ್‌ಗೆ 20 ಕೋಟಿ ಆಫರ್ ನೀಡಿದೆಯಂತೆ. ಅದನ್ನು ನಯವಾಗಿ ನಿರಾಕರಿಸಿರುವ ಆಮೀರ್ ಮೊದಲು ಚಿತ್ರಕಥೆ ಕೊಡಿ. ಆಮೇಲೆ ಸಂಭಾವನೆ ವಿಚಾರ ಎಂದಿದ್ದಾನೆ ಎನ್ನುತ್ತದೆ ಬಾಲಿವುಡ್ ಮೂಲಗಳು.

ಒಂದು ಕಾಲದ ಸುರಸುಂದರಾಂಗ, ಹುಡುಗಿಯ ಮನಸ್ಸು ಕದ್ದ ಎಂಟೆದೆ ಬಂಟ, ಈಗಿನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಕೂಡ ಸಂಭಾವನೆ ವಿಚಾರದಲ್ಲಿ ಟಾಪ್ ಬಾಯ್. ಹೃದಯವನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ... ಆತ 'ದಸ್ ಕಾ ದಮ್' ಟೀವಿ ಸರಣಿ ಕಾರ್ಯಕ್ರಮಕ್ಕೆ ಒಟ್ಟು ತೆಗೆದುಕೊಳ್ಳುತ್ತಿರುವ ಸಂಭಾವನೆ 89 ಕೋಟಿ ರೂಪಾಯಿಗಳು! ಆದರೂ ಆತ ಸಿನಿಮಾದಲ್ಲಿ ಪಡೆಯುವ ಸಂಭಾವನೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ. ಟಾಪ್ 5ರಲ್ಲಿ ಖಂಡಿತಾ ಸಲ್ಮಾನ್ ಹೆಸರಿರುವುದು ನಿಜವಾಗಿರಬಹುದು.

ಹೃತಿಕ್ ಕೂಡ ಒಂದು ರೀತಿಯಲ್ಲಿ ಆಮೀರ್ ಖಾನ್ ತರಾನೇ ಆಗಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚೂಸಿಯಾಗಿದ್ದು, ಉತ್ತಮ ಕಥೆ, ವಿಭಿನ್ನತೆಗೆ ಒತ್ತು ಕೊಡುತ್ತಾ ಸಂಭಾವನೆಯನ್ನೂ ಗಟ್ಟಿಯಾಗೇ ಪಡೆಯುತ್ತಾರೆ. ಮೂಲಗಳ ಪ್ರಕಾರ 'ಜೋಧಾ ಅಕ್ಬರ್'ಗೆ ಹೃತಿಕ್ ಪಡೆದದ್ದು 42 ಕೋಟಿಯಂತೆ!

ಕೆಲ ವರ್ಷಗಳ ಹಿಂದೆ ಆಡ್‌ಲ್ಯಾಬ್ಸ್‌ನವರಿಗೆ 15 ಕೋಟಿ ರೂಪಾಯಿಯ ಆಫರ್ ಹೃತಿಕ್ ಇಟ್ಟಿದ್ದನಂತೆ. ಆದರೆ ಈಗ ಅಷ್ಟಕ್ಕೆಲ್ಲ ಒಪ್ಪುವ ರೀತಿಯಲ್ಲಿ ಆತನಿಲ್ಲ. ಇತ್ತೀಚಿನ ದಿನಗಳ ಆತನ ಚಿತ್ರಗಳು ಕೂಡಾ ಹೋಮ್ ಪ್ರೊಡಕ್ಷನ್‌ನದ್ದೇ ಆಗಿವೆ. ಮುಂಬರಲಿರುವ ಕ್ರಿಶ್, ಕ್ರೇಝಿ 4, ಕೈಟ್ಸ್ ಎಲ್ಲವೂ ರಾಕೇಶ್ ರೋಷನ್ ಚಿತ್ರಗಳು. ಹಾಗಾಗಿ ಸಂಭಾವನೆ ಲೆಕ್ಕಾಚಾರ ಕೊಂಚ ಕಷ್ಟ. ಆದರೂ ಗಗನಚುಂಬಿಯಾಗಿರುವುದು ನಿಜ.

ಮೂವರು ಹೆಂಡಿರ ಮುದ್ದಿನ ಗಂಡನಾಗುಳಿದಿಲ್ಲ ಸಂಜಯ್ ದತ್. ಇತ್ತೀಚಿನ ವರ್ಷಗಳಲ್ಲಿ ವೈಯಕ್ತಿಕವಾಗಿ ಸಾಕಷ್ಟು ಏಳುಬೀಳುಗಳನ್ನು ಕಂಡರೂ ಸಿನಿಮಾ ರಂಗದಲ್ಲಿ ಉತ್ತಮ ಸಾಧನೆ ಗೈದಿದ್ದಾರೆ. ಈತನ ಸಂಭಾವನೆಯೂ ಕಡಿಮೆಯೇನಿಲ್ಲ. ಗೆಳೆಯರ ಚಿತ್ರಕ್ಕೇ ದತ್ ಪಡೆಯುವ ಸಂಭಾವನೆ 8 ಕೋಟಿಯಂತೆ. ಇನ್ನು ಉಳಿದವರ ಗತಿಯೇನು... ಇದಕ್ಕೆಲ್ಲ ಕಾರಣ ಆತನ ಇತ್ತೀಚಿನ ಮುನ್ನಾಭಾಯಿ ಸರಣಿ ಚಿತ್ರಗಳು. ಬಾಲಿವುಡ್ ಮಂದಿ ದತ್ ಮೇಲೆ ಭರವಸೆಯಿಟ್ಟು ಕೋಟಿ ಕೋಟಿ ಸುರಿಯುತ್ತಿದ್ದಾರೆ- ಮತ್ತೆ ಜೈಲಿಗೆ ಹೋಗದಿರಲಿ ಎಂಬ ಆಶಯದೊಂದಿಗೆ.


Share this Story:

Follow Webdunia kannada