ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗರ್ಭಿಣಿಯಂತೆ!
ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಮಾಲೀಕತ್ವದ ತಂಡ ರಾಜಸ್ತಾನ ರಾಯಲ್ಸ್ ಗೆಲುವಿನ ಓಟಕ್ಕಿಂತ ದಂಪತಿಗಳಿಗೆ ಮತ್ತಷ್ಟು ಖುಷಿ ನೀಡುವ ಸುದ್ದಿಯೊಂದು ಬಹಿರಂಗವಾಗಿದೆ. ಕಳೆದ 2009ರ ನವೆಂಬರ್ 22 ರಂದು ಮದುವೆಯಾದ ದಂಪತಿಗಳು, ಕುಟುಂಬದ ನೂತನ ಸದಸ್ಯನಿಗೆ ಸ್ವಾಗತ ಕೋರಲು ಸಿದ್ಧವಾಗಿದ್ದಾರೆ. ರಾಜ್‌ಕುಂದ್ರಾ ಅವರಿಗೆ ಮೊದಲ ಪತ್ನಿ ಕವಿತಾಳಿಂದ ಡೆಲಿನಾ ಎನ್ನುವ ಮಗಳಿದ್ದಾಳೆ. ಆದರೆ, ಶಿಲ್ಪಾಗೆ ಇದು ಚೊಚ್ಚಲ ಸಂಭ್ರಮ. ಮಗುವಿನ ತಾಯಿಯಾಗುವುದು ನನಗೆ ತುಂಬಾ ಇಷ್ಟದ ಸಂಗತಿ ಎಂದು ಹಲವು ಬಾರಿ ಹೇಳಿದ್ದಾರೆ.ವರದಿಗಳ ಪ್ರಕಾರ, ಶಿಲ್ಪಾಗೆ ತಾಯ್ತನದ ಸುಖ ಅನುಭವಿಸುವುದು ಬಹುದಿನದ ಕನಸಾಗಿತ್ತು. ನಾನು ತಾಯಿಯಾಗಲು ಆತುರಳಾಗಿದ್ದೇನೆ. ನನಗೆ ಮಕ್ಕಳೆಂದರೆ ತುಂಬಾ ಇಷ್ಟ. ಮನೆಯಲ್ಲಿ ರೇಡಿಮೇಡ್ ನರ್ಸರಿ ಇದೆ.ನನಗೆ ಕನಿಷ್ಠ ಎರಡು ಮಕ್ಕಳು ಬೇಕು ಎಂದು ನುಲಿದಿದ್ದಾರೆ.ರಾಜ್ ಕುಂದ್ರಾನ ಸಹೋದರಿ ಮಗು ಮನೆಯಲ್ಲಿರುವುದರಿಂದ ಮನೆಯಲ್ಲಿ ಮಕ್ಕಳ ಬೆಡ್‌ರೂಮ್ ಇದೆ. ನನ್ನ ಮಕ್ಕಳು ಮನೆಯಲ್ಲಿ ನಗು ನಗುತಾ ಓಡಾಡಬೇಕು ಎನ್ನುವುದು ನನ್ನ ಬಯಕೆ ಎಂದು ಹೇಳಿದ್ದಾರೆ. ಶಿಲ್ಪಾಳ ಕನಸು ನನಸಾಗುವ ದಿನಗಳು ಹತ್ತಿರ ಬಂದಿವೆ. ಶಿಲ್ಪಾ ನರ್ಸಿಂಗ್‌ಹೋಮ್‌ನಲ್ಲಿ ವೈದ್ಯರನ್ನು ಕಂಡು ಚರ್ಚಿಸಿರುವ ಬಗ್ಗೆ ವರದಿಗಳು ಲಭ್ಯವಾಗಿವೆ. ಮಗು ಆಗಮನದ ಸುದ್ದಿ ಕೇಳಿ ದಂಪತಿಗಳು ತುಂಬಾ ಹರ್ಷಚಿತ್ತರಾಗಿದ್ದಾರೆ. ಶಿಲ್ಪಾ ಕುಟುಂಬದ ಸದಸ್ಯರು ಹಾಗೂ ಆತ್ಮಿಯ ಗೆಳೆಯರ ಪ್ರಕಾರ, ಶಿಲ್ಪಾ ಮಗುವಿಗೆ ಮೂರು ತಿಂಗಳಾದ ನಂತರ ಸಾರ್ವಜನಿಕವಾಗಿ ಬಹಿರಂಗಪಡಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.ಲಂಡನ್‌ನಲ್ಲಿ ನಡೆದ ಬಿಗ್ ಬ್ರದರ್ ಶೋನಲ್ಲಿ ವಿಶ್ವದಾದ್ಯಂತ ಚರ್ಚಾವಸ್ತುವಾಗಿ ವಿಜೇತಳಾದ ನಂತರ ಶಿಲ್ಪಾ, 2009ರ ನವೆಂಬರ್ ತಿಂಗಳ ಅವಧಿಯಲ್ಲಿ ರಾಜ್ ಅವರನ್ನು ವಿವಾಹವಾಗಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ರಾಜಸ್ತಾನ ರಾಯಲ್ಸ್ ತಂಡದ ಶೇರುಗಳನ್ನು ಖರೀದಿಸಿ, ತಮ್ಮ ಕ್ರೀಡಾಸ್ಪೂರ್ತಿಯನ್ನು ಮೆರೆಯುತ್ತಿದ್ದಾರೆ.ಹಲವು ಬಾರಿ ಕರೆ ಮಾಡಿದರೂ ಸಂದೇಶಗಳನ್ನು ಕಳುಹಿಸಿದರೂ ಶಿಲ್ಪಾ ಮತ್ತು ರಾಜ್ ಕುಂದ್ರಾ ಪ್ರತಿಕ್ರಿಯೆ ನೀಡಲು ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.