Article Bollywood Gossips %e0%b2%ac%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d %e0%b2%a8%e0%b2%9f%e0%b2%bf %e0%b2%ae%e0%b2%a8%e0%b3%8b%e0%b2%b0%e0%b2%ae%e0%b2%be %e0%b2%a8%e0%b2%bf%e0%b2%a7%e0%b2%a8 108021600044_1.htm

Daily Horoscope

Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿ ಮನೋರಮಾ ನಿಧನ

ಬಾಲಿವುಡ್
ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ದೀಪಾ ಮೆಹ್ತಾ ಅವರ 'ವಾಟರ್' ಸಿನೆಮಾದಲ್ಲಿ ವಿಧವೆಯರ ಆಶ್ರಮದ ಮುಖ್ಯಸ್ಥೆ ಪಾತ್ರದಲ್ಲಿ ನಟಿಸಿದ್ದ, ಗತಕಾಲದ ಸಿನೆಮಾ ನಟಿ ಮನೋರಮಾ ಅವರು ಮುಂಬೈಯಲ್ಲಿ ಶುಕ್ರವಾರ ನಿಧನರಾದರು.

ಅದ್ಭುತ ಅಭಿನಯ ನೀಡುತ್ತಿದ್ದ ಮನೋರಮಾ ಅವರು ಹೆಚ್ಚಾಗಿ ದುಷ್ಟ ಅತ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. 'ಸೀತಾ ಔರ್', 'ಗೀತಾ, ಏಕ್ ಫೂಲ್ ದೋ ಮಾಲಿ', 'ದೊ ಕಲ್ಯಾಣ್' ಸಿನೆಮಾದಲ್ಲಿನ ಅವರ ನಟನೆ ಮನೋಜ್ಞವಾಗಿ ವೀಕ್ಷಕರ ಮನದಲ್ಲಿ ಚಿರಸ್ಥಾಯಿಯಾಗುಳಿದಿದೆ.

ತನ್ನ ಸಿನೆಮಾ ವೃತ್ತಿಯನ್ನು ಲಾಹೋ‌ರ್‌ನಲ್ಲಿ ಪ್ರಾರಂಭಿಸಿದ್ದ ಮನೋರಮಾ ಅವರು ಸುಮಾರು ಆರು ದಶಕಗಳ ಕಾಲ ನಾಯಕಿಯ ಪಾತ್ರದಲ್ಲೂ ಮಿಂಚಿದ್ದರು.

ಮನೋರಮಾ ಅವರು ನಟ ಮತ್ತು ನಿರ್ಮಾಪಕ ರಾಜಾ ನಕ್ಸರ್ ಅವರನ್ನು ಮದುವೆಯಾಗಿದ್ದು, ಈ ದಂಪತಿ ಭಾರತ ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಭಾರತದಲ್ಲಿ ಬಂದು ನೆಲೆಸಿದ್ದರು. ಕೆಲವು ಕಾಲ ಸಿನೆಮಾ ಪ್ರಪಂಚವನ್ನು ಬಿಟ್ಟಿದ್ದ ಮನೋರಮಾ ವಾಟರ್ ಸಿನೆಮಾದಲ್ಲಿ ಮತ್ತೆ ಕಾಣಿಸಕೊಳ್ಳುವ ಮೂಲಕ ಸಿನೆಮಾ ಪ್ರಿಯರಿಗೆ ಅಚ್ಚರಿ ಹುಟ್ಟಸಿದ್ದರು.

Share this Story:

Follow Webdunia kannada