ಬಾಲಿವುಡ್ ನಟ ಪ್ರಾಣ್ ಅಸ್ತಂಗತ
Publish Date: Sat, 13 Jul 2013 (08:41 IST)
Updated Date: Sat, 13 Jul 2013 (08:40 IST)
ನವದೆಹಲಿ: ಬಾಲಿವುಡ್ ಜಗತ್ತಿನ ಅತ್ಯಂತ ಗೌರವಾನ್ವಿತ ನಟ ಪ್ರಾಣ್ ಶುಕ್ರವಾರ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದರು. ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ಸೇರಿಸಲಾಗಿದ್ದ ಅವರಿಗೆ 93 ವರ್ಷ ವಯಸ್ಸಾಗಿತ್ತು. ಸುದೀರ್ಘ ಕಾಲದ ಅನಾರೋಗ್ಯದ ನಂತರ ಅವರು ಮೃತರಾಗಿದ್ದಾರೆ ಎಂದು ಅವರ ಪುತ್ರಿ ಪಿಂಕಿ ಹೇಳಿದ್ದಾರೆ. ಪ್ರಾಣ್ ಅವರ ಅಂತ್ಯಕ್ರಿಯೆ ಜುಲೈ 13ರಂದು ಶ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ನಡೆಯಲಿದೆ.ಪ್ರಾಣ್ ಬಾಲಿವುಡ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಮೇನಲ್ಲಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿತ್ತು. ಅನಾರೋಗ್ಯದ ಕಾರಣ ಬಹುಮಾನ ವಿತರಣೆ ಸಮಾರಂಭಕ್ಕೆ ಹಾಜರಾಗಿ ಪ್ರಶಸ್ತಿ ಸ್ವೀಕರಿಸುವುದಕ್ಕೆ ದೆಹಲಿಗೆ ಪ್ರಯಾಣಿಸಲು ಅವರಿಗೆ ಸಾಧ್ಯವಾಗಲಿಲ್ಲ. ಮರುದಿನ ಅವರ ಮುಂಬೈ ನಿವಾಸದಲ್ಲಿ ಪ್ರಶಸ್ತಿಯನ್ನು ನೀಡಲಾಯಿತು.ಜಂಜೀರ್ ಮತ್ತು ಅಮರ್ ಅಕ್ಬರ್ ಆಂಥೋನಿ ಮುಂತಾದ ಚಿತ್ರಗಳಲ್ಲಿ ಪಾತ್ರವಹಿಸಿದ ಪ್ರಾಣ್, ಪಂಬಾಬಿ ಚಿತ್ರಗಳಲ್ಲಿ ನಾಯಕನ ಪಾತ್ರದಲ್ಲಿ ವೃತ್ತಿಜೀವನ ಆರಂಭಿಸಿದರು. ದಿಲೀಪ್ ಕುಮಾರ್ ಅವರ ರಾಮ್ ಔರ್ ಶ್ಯಾಮ್‌ನಲ್ಲಿ ಅವರ ಖಳನಾಯಕನ ಪಾತ್ರ ಬಾಲಿವುಡ್ ಮೇಲೆ ಅದ್ಭುತ ಪರಿಣಾಮ ಉಂಟುಮಾಡಿತು. ಪಡಿಯಚ್ಚು ಪಾತ್ರಗಳನ್ನು ಮುರಿದು ಕಥೆ, ನಾಟಕದ ಪಾತ್ರಗಳನ್ನು ವಹಿಸಿದರು. 70ರ ದಶಕದಲ್ಲಿ ಪ್ರಾಣ್ ಅವರಿಲ್ಲದ ಯಾವುದೇ ಪ್ರಮುಖ ಪಾತ್ರವಿರಲಿಲ್ಲ. ನಾಯಕನಿಗಿಂತ ಕೆಲವು ಬಾರಿ ಹೆಚ್ಚು ಸಂಭಾವನೆ ಅವರಿಗೆ ನೀಡಲಾಗುತ್ತಿತ್ತು. ಖಳನಾಯಕನ ಪಾತ್ರವನ್ನು ನಾಯಕನ ಪಾತ್ರವಷ್ಟೇ ಮುಖ್ಯವಾಗಿಸಿದ ಕೀರ್ತಿ ಪ್ರಾಣ್‌ಗೆ ಸಲ್ಲುತ್ತದೆ.