Article Bollywood Gossips %e0%b2%ac%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d %e0%b2%95%e0%b2%a8%e0%b2%b8%e0%b2%bf%e0%b2%a8 %e0%b2%95%e0%b2%a8%e0%b3%8d%e0%b2%af%e0%b3%86 %e0%b2%97%e0%b3%86 60 108101600031_1.htm

Daily Horoscope

Select Your Language

Notifications

webdunia
webdunia
webdunia
webdunia

ಬಾಲಿವುಡ್ 'ಕನಸಿನ ಕನ್ಯೆ'ಗೆ 60 !

ಹೇಮಾಮಾಲಿನಿ
PIB
ಬಾಲಿವುಡ್‌‌ನ ಖ್ಯಾತ ನಟಿ,'ಕನಸಿನ ಕನ್ಯೆ'ಹೇಮಾಮಾಲಿನಿ ಅವರು ಗುರುವಾರ 60ನೇ ವರ್ಷಕ್ಕೆ ಕಾಲಿಟ್ಟಿದ್ದು,ಅವರು ಇಂದು ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

1948ರಲ್ಲಿ ಜನಿಸಿದ್ದ ಹೇಮಾಮಾಲಿನ ಬಾಲಿವುಡ್ ಬೆಳ್ಳಿತೆರೆಯ ಮೇಲೆ ಕನಸಿನ ಕನ್ಯೆ ಎಂದೇ ಹೆಸರು ಪಡೆದಿದ ಅವರು, ಖ್ಯಾತ ಭರತನಾಟ್ಯ ಪ್ರವೀಣೆ, ಬಿಜೆಪಿ ಸಂಸತ್ ಸದಸ್ಯೆ.

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಶೋಲೆ ಸಿನಿಮಾದಲ್ಲಿ ಬಸಂತಿಯಾಗಿ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದ ಹೇಮಾಮಾಲಿನಿ ಇಂದು 60ರ ಹರೆಯಕ್ಕೆ ಕಾಲಿಟ್ಟಿದ್ದಾರೆ.

ಈಗಲೂ ಭರತನಾಟ್ಯ, ಸಿನಿಮಾ ಅಂತ ಬಿಡುವಿಲ್ಲದ ನಟಿಯಾಗಿರುವ ಹೇಮಾಮಾಲಿನಿ ಅವರು,ಎಕ್ ರಾಣಿ ಐಸಿ ಭೀ ಎಂಬ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ.

ಇಂದು ಮುಂಬೈಯಲ್ಲಿ ಅಭಿಮಾನಿಗಳು ಕನಸಿನ ಕನ್ಯೆಯ 60ನೇ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ, ತಮ್ಮ ಪ್ರೀತಿಯ ಅಭಿನೇತ್ರಿಗೆ ಶುಭ ಹಾರೈಸಿದ್ದಾರೆ.

Share this Story:

Follow Webdunia kannada