ಬಾಯ್ಸ್ ಹೀರೋ ಭರತ್‍ಗೆ ಕಂಕಣಭಾಗ್ಯ
Publish Date: Fri, 13 Sep 2013 (11:01 IST)
Updated Date: Fri, 13 Sep 2013 (11:00 IST)
ತಮಿಳು ಚಿತ್ರರಂಗದ ಸ್ಟಾರ್ ನಟ ಭರತ್ ಅವರಿಗೆ ಕೊನೆಗೂ ಕಂಕಣಭಾಗ್ಯ ಕೂಡಿಬಂದಿದೆ. ಚೆನ್ನೈನಲ್ಲಿ ಬಂಧುಮಿತ್ರರ ಸಮ್ಮುಖದಲ್ಲಿ ಡಾ.ಜೆಶ್ಲೆ ಅವರನ್ನು ಮದುವೆಯಾಗಿದ್ದಾರೆ. ನಮ್ಮದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ನಮ್ಮ ಪ್ರೀತಿಗೆ ಎರಡೂ ಕಡೆಯಿಂದ ಒಪ್ಪಿಗೆ ಸಿಕ್ಕಿತ್ತು. ಆಕೆ ಇನ್ನೂ ಓದಬೇಕೆಂದಿದ್ದಾಳೆ. ಅದಕ್ಕೆ ಎರಡೂ ಕುಟುಂಬದ ಒಪ್ಪಿಗೆಯಿದೆ. ಮದುವೆ ಬಳಿಕೆ ಜೆಶ್ಲಿ ಎಂಡಿಎಸ್ ಮಾಡುತ್ತಾಳೆ ಎಂದಿದ್ದಾರೆ ಭರತ್. 2004
ರಲ್ಲಿ ಶಂಕರ್ ನಿರ್ದೇಶನದ ಸಿದ್ದಾರ್ಥ್ ನಾಯಕತ್ವದ ಬಾಯ್ಸ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟವರು ಭರತ್. ಆ ಬಳಿಕ ಅಲ್ಲಿ ಉತ್ತಮ ಹೆಸರು ಗಳಿಸಿಕೊಂಡರು. ಚೆಲ್ಲಾಮೆ, ಕಾದಲ್, ವೆಜಿಲ್, ಪಟ್ಟಿಯಾಲ್ ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚೆಗೆ ಬಾಲಿವುಡ್ಗೂ ಕಾಲಿಟ್ಟಿದ್ದ ಭರತ್ ಜಾಕ್ಪಾಟ್ ಚಿತ್ರದಲ್ಲಿ ನಟಿಸಿದ್ದರು. ಸನ್ನಿ ಲಿಯೋನ್ ಜತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡ ಭರತ್ಗೆ ನಾಸಿರುದ್ದೀನ್ ಶಾ, ಸಚಿನ್ ಜೋಶಿ ಮೊದಲಾದವರೊಂದಿಗೂ ನಟಿಸಿದ ಅನುಭವವಿದೆ. ಅವರು ನೀಲಾ ಜೊತೆ ನಟಿಸಿರುವ ಕಿಲಾಡಿ ಚಿತ್ರ ಇನ್ನೂ ತೆರೆಕಾಣಬೇಕಿದೆ. ಮಲೆಯಾಳಂ ಸ್ಟಾರ್ ಮೋಹನ್ಲಾಲ್ ಜೊತೆ ಕೂಥ್ರಾ ಚಿತ್ರದಲ್ಲಿ ಭರತ್ ನಟಿಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆಯಾಗಿರುವ ಜೆಶ್ಲಿ ಪೋಷಕರು ದುಬೈನಲ್ಲಿ ನೆಲೆಸಿದ್ದಾರೆ. ನೆಗೆಟಿವ್, ಹಳ್ಳಿ ಹುಡುಗನ ಪಾತ್ರ ಇಲ್ಲವೇ ರೋಮಿಯೋನಾಗಿಯೂ ನಟಿಸುತ್ತಿದ್ದ ಭರತ್ ಅವರ ದಾಂಪತ್ಯ ಜೀವನಕ್ಕೆ ಶುಭಾಶಯಗಳು.