ಬಾಬಿ ಡಿಯೋಲ್ ಮುಂದಿನ ಚಿತ್ರ ಅಪ್ಪನೊಂದಿಗೆ
Publish Date: Wed, 29 May 2013 (19:26 IST)
Updated Date: Wed, 29 May 2013 (19:26 IST)
ಯಮ್ಲಾ ಪಮ್ಲಾ ದಿವಾನಾ 2 ಚಿತ್ರದ ಪ್ರಚಾರಕ್ಕಾಗಿ ಬಾಬಿ ಡಿಯೋಲ್ ಬೆಂಗಳೂರಿಗೆ ಬಂದಿದ್ದರು. ಅಣ್ಣ ಸನ್ನಿ ಡಿಯೋಲ್ ಅವರನ್ನು ಪಕ್ಕದಲ್ಲೇ ಕುಳ್ಳಿರಿಸಿ ಮಾಧ್ಯಮದವರೊಂದಿಗೆ ಮಾತಿಗಿಳಿದರು.ಚಿತ್ರದಲ್ಲಿ ನನ್ನದು ಬನಾರಸ್‌ನಿಂದ ಬಂದ ಗಜೋದರನ ಪಾತ್ರ. ಆ ಪಾತ್ರಕ್ಕೆ ಸಲ್ಮಾನ್ ಖಾನ್ ಎಂದರೆ ಬಹಳ ಇಷ್ಟ. ಚಿತ್ರದ ತುಂಬಾ ಕಚಗುಳಿ ಇಡುವ ಸಂಭಾಷಣೆಗಳಿವೆ. ಚಿಂಪಾಜಿಯೂ ನಿಮ್ಮನ್ನು ನಕ್ಕು ನಗಿಸಲಿದೆ ಎಂದು ಭರವಸೆ ನೀಡಿದರು.ನಿಜ ಜೀವನದಲ್ಲೂ ಸಲ್ಮಾನ್ ಎಂದರೆ ಡಿಯೋಲ್‌ಗೆ ಭಾರೀ ಪ್ರಿತಿಯಂತೆ. ಅವರ ವಿಧೇಯ ವ್ಯಕ್ತಿತ್ವದ ಮೇಲೆ ಅಪಾರ ಗೌರವವಂತೆ. ಬಾಲ್ಯದಿಂದಲೂ ಅವರನ್ನು ನೋಡಿಕೊಂಡು ಬರುತ್ತಿದ್ದೇನೆ. ಅವರೊಂದಿಗೆ ಕೆಲಸ ಮಾಡಿದ ಅನುಭವವೂ ಸಾಕಷ್ಟಿದೆ ಎಂಬ ಹೆಮ್ಮೆ ಬಾಬಿಯದ್ದು.
ಕುಟುಂಬದೊಂದಿಗೆ ನಟಿಸಿದ್ದು ಬಹಳ ಖುಷಿ ನೀಡಿದೆಯಂತೆ. ಮುಂದೆ ಅಪ್ಪನೊಂದಿಗೆ ಚಿತ್ರ ಮಾಡಲಿದ್ದೇನೆ. ಅದು ಸ್ವಂತ ನಿರ್ಮಾಣದ್ದು. ಅಪ್ಪ ಹಾಗೂ ಮಗನ ನಡುವಿನ ಭಾವನಾತ್ಮಕ ಸಂಬಂಧ ಹೇಳುವ ಚಿತ್ರವದು. ಹಾಗಾಗಿ ಹೆಚ್ಚು ನೀರಿಕೆ ಇಟ್ಟುಕೊಂಡಿದ್ದೇನೆ ಎಂದು ಹೇಳಿ ಮುಗಳ್ನಕ್ಕರು. ಅಪ್ಪನನ್ನೇ ರೋಲ್ ಮಾಡೆಲ್ ಆಗಿ ಇಟ್ಟುಕೊಂಡಿರುವ ಬಾಬಿ ಡಿಯೋಲ್ ಪಾಲಿಸುವುದು ಅಪ್ಪ ನೀಡಿದ ಫಿಟ್‌ನೆಸ್ ಮಂತ್ರಗಳನ್ನೇ ಅಂತೆ!ಐಪಿಎಲ್ ಪಂದ್ಯಗಳನ್ನು ಇಂದು ನೋಡಲು ಬರುವ ಮಂದಿ ಅವರು ಹೊಡೆದ ಸ್ಕೋರ್‌ಗಳನ್ನು ನೆನಪಿಟ್ಟುಕೊಳ್ಳುವುದಿಲ್ಲ. ಬದಲಾಗಿ ಪೆವಿಲಿಯನ್‌ನಲ್ಲಿ ಎಷ್ಟು ಮಂದಿ ಸಿನೆಮಾ ನಟರಿದ್ದಾರೆ. ಅವರೇನು ಮಾಡುತ್ತಿದ್ದಾರೆ ಎಂಬ ಕುತೂಹಲವನ್ನೇ ಇಟ್ಟುಕೊಂಡಿರುತ್ತಾರೆ. ನಟರೊಮ್ಮೆ ಅಭಿಮಾನಿಗಳತ್ತ ಕೈಬೀಸಿದರೆ ಹುಚ್ಚೆದ್ದು ಕುಣಿಯುತ್ತಾರೆ. ಹೀಗಾಗಿ ಕ್ರಿಕೆಟ್ ಸೆಲೆಬ್ರೆಟಿಗಳ ಆಟವಾಗಿದೆ ಹಾಗೂ ಮನರಂಜನೆಗೆ ಮಾತ್ರ ಸೀಮಿತವಾಗಿದೆ ಎಂಬುದು ಬಾಬಿ ಕೊಡುವ ವ್ಯಾಖ್ಯಾನ.ಒಂದು ಸಿನೆಮಾದ ಸೋಲು ಗೆಲುವು ನಿಂತಿರುವುದು ಅದರ ಸಂಗೀತದಲ್ಲಿ ಎಂದು ನಂಬಿರುವ ಬಾಬಿ, ಚಿತ್ರೀಕರಣದ ಕೆಲಸ ಇಲ್ಲವಾದಲ್ಲಿ ಹಾಡುಗಳನ್ನು ಕೇಳುತ್ತಿರುತ್ತಾರಂತೆ. ಈ ಸಿನೆಮಾದ ಒಂದು ಹಾಡಿಗೆ ಅಪ್ಪನು ಹೆಜ್ಜೆ ಹಾಕಿದ್ದಾರಂತೆ. ತಂಪಾದ ಹವಾಮಾನ ಕಾರಣಕ್ಕೆ ಬೆಂಗಳೂರು ಇಷ್ಟವಾಗುತ್ತದೆ. ಕಾಮಿಡಿ ಆಕ್ಷನ್, ರೋಮ್ಯಾನ್ಸ್ ಸಮಪ್ರಮಾಣದಲ್ಲಿರುವ ಈ ಚಿತ್ರವನ್ನು ಮನೆಮಂದಿಯೆಲ್ಲಾ ಕುಳಿತು ನೋಡಬಹುದು ಎಂದು ಹೇಳಿ ಮಾತು ಮುಗಿಸಿದರು.ಧರ್ಮೇಂದ್ರ್, ನೇಹಾ ಶರ್ಮಾ, ಕ್ರಿಸ್ಟಿನಾ ಅಖಿವಾ( ಹೊಸ ಪರಿಚಯ) ತಾರಾಗಣದಲ್ಲಿದ್ದಾರೆ. ಸಂಗೀತ್ ಸಿವನ್ ನಿರ್ದೇಶಿಸಿರುವ ಈ ಚಿತ್ರ ಜೂನ್ ಮೊದಲ ವಾರದಲ್ಲಿ (ಜೂ 7) ತೆರೆಕಾಣಲಿದೆ.