ಬಾಝಿಗರ್-2 ನಿರ್ಮಾಣ ಸಿದ್ಧತೆ
Publish Date: Tue, 12 Jun 2007 (17:20 IST)
Updated Date: Tue, 12 Jun 2007 (17:19 IST)
ಬಾಲಿವುಡ್‌ನ ಮೂರು ಯಶಸ್ವಿ ಚಿತ್ರಗಳ ಎರಡನೇ ಭಾಗ ಹೊರಬರಲಿದೆ. ಆ ಮುಹೂರ್ತಕ್ಕಾಗಿ ಚಿತ್ರರಸಿಕರು ಕಾದು ಕುಳಿತಿದ್ದಾರೆ.ಬಾಝಿಗರ್, ಬಾದಶಹ, ಖಿಲಾಡಿ ಮುಂತಾದ ಮೂರು ಚಿತ್ರಗಳ ಎರಡನೇ ಭಾಗ ನಿರ್ಮಾಣಕ್ಕಾಗಿ ಸಿದ್ಧತೆ ಆರಂಭವಾಗಿದೆ. ವೀನಸ್ ಪ್ರೊಡಕ್ಷನ್ಸ್ ಆಶ್ರಯದಲ್ಲಿ ದಶಕದ ಹಿಂದೆ ನಿರ್ಮಾಣವಾದ ಬಾಝಿಗರ್‌ನ ಎರಡನೇ ಭಾಗ ಬರಲಿದೆ.ನಿರ್ದೇಶಕರಾದ ಅಬ್ಬಾಸ್ ಹಾಗೂ ಮಸ್ತಾನ್ ಅವರು ಈ ಚಿತ್ರಗಳ ರೂವಾರಿಗಳಾಗಿದ್ದು, ಹೊಸ ಪ್ರಸ್ತುತ ದ್ವಿತೀಯ ಅಂಕದ ಯೋಜನೆಗೆ ವೀನಸ್ ಮಾಲಕ ರತನ್ ಜೈನ್ ಕಾರಣಕರ್ತರಾಗಿದ್ದಾರೆ.ಎರಡನೇ ಭಾಗಗಳಿಗೆ ಮೊದಲನೇ ಭಾಗಗಳ ನಾಯಕರಾದ ಅಕ್ಷಯ್ ಕುಮಾರ್ ಹಾಗೂ ಶಾರೂಖ್ ಖಾನ್ ಇವರನ್ನೇ ಬಳಸಬೇಕೆಂಬುದು ವೀನಸ್ ಸಂಸ್ಥೆಯ ಆಗ್ರಹ. ವಿಷಯ ತಿಳಿದ ಅಕ್ಷಯ್ ಅಂತೂ ವೃತ್ತಿ ಬದುಕಿನಲ್ಲಿ ಬ್ರೇಕ್ ನೀಡಿದ ಖಿಲಾಡಿ-2ರಲ್ಲಿ ಅಭಿನಯಿಸಲು ಉತ್ಸುಕರಾಗಿದ್ದಾರೆ.ಮುಕ್ತಾ ಆರ್ಟ್ಸ್‌ನ ಸುಭಾಷ್ ಘಾಯ್, ವೀನಸ್‌ನ ರತನ್ ಜೈನ್ ಈಗ ಈ ಕುರಿತು ಚಿಂತನೆಯಲ್ಲಿದ್ದಾರೆ. ಅಗತ್ಯ ಚಿತ್ರಕಥೆಗಳಿಗಾಗಿ ಹುಡುಕಾಟ ಆರಂಭವಾಗಿದೆ.