ಬಾಜಿರಾವು ಮಸ್ತಾನಿ ಚಿತ್ರದಲ್ಲಿ ರಣ ವೀರ್ ಜೊತೆ ಯಾರು ಹೀರೋಯಿನ್ ?
, ಶನಿವಾರ, 8 ಮಾರ್ಚ್ 2014 (10:14 IST)
ಬಾಜಿರಾವ್ ಮಸ್ತಾನಿ ಚಿತ್ರವನ್ನು ಸಿನಿಮಾ ಮಾಡ ಬೇಕು ಎನ್ನುವುದು ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಬಹು ವರ್ಷಗಳ ಕನಸು. ಆದಸ್ರೆ ಅದ್ಯಾಕೋ ಅದಕ್ಕೆ ಕಾಲವೇ ಕೂಡಿ ಬಂದಿರಲಿಲ್ಲ. ಆ ಚಿತ್ರಕ್ಕಾಗಿ ಸಾಕಷ್ಟು ಕೆಲಸ ಮಾಡಿದರು ಯಾವುದು ಅಂತಿಮವಾಗದೆ ಅಲ್ಲೇ ಉಳಿದು ಬಿಟ್ಟಿತ್ತು. 1720
ನಾಲ್ಕನೇ ಮರಾಠ ಛತ್ರಪತಿ ಶಿವಾಜಿ ಮಹಾರಾಜರ ಪ್ರಧಾನಿ ಆಗಿದ್ದ ಬಾಜಿರಾವ್ ಪೇಶ್ವ ಆತನ ಪ್ರೇಯಸಿ ಮಸ್ತಾನಿ ಬದುಕಿನ ಬಗ್ಗೆ ಚಿತ್ರ ತೆಗೆಯುವ ಕನಸು ಸುಮಾರು ಹದಿನೈದು ವರ್ಷಗಳಷ್ಟು ಹಿಂದಿನದ್ದು. ಆರಂಭದಲ್ಲಿ ಈ ಚಿತ್ರಕ್ಕೆ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಅವರನ್ನು ಆಯ್ಕೆ ಮಾಡಿದ್ದರು, ಆದರೆ ಅದು ಸೆಟ್ಟೇರಲೆ ಇಲ್ಲ.
ಈಗ ಮತ್ತೆ ಆ ಪ್ರಾಜೆಕ್ಟ್ ಗೆ ಜೀವ ಬಂದಿದೆ. ಈ ಚಿತ್ರದಲ್ಲಿ ನಟಿಸಲು ರಣವೀರ್ ಸಿಂಗ್ ಕಡೆಯಿಂದ ಓಕೆ ಆಗಿದೆಯಂತೆ. ಈ ಚಿತ್ರಕ್ಕಾಗಿ ರಣವೀರ್ ಕೇಶರಹಿತರಾಗಿರಲು ಸಿದ್ಧ ಆಗಿದ್ದಾರಂತೆ. ಇದನ್ನು ರಣವೀರ್ ಮ್ಯಾನೇಜರ್ ಸ್ಪಷ್ಟ ಪಡಿಸಿದ್ದಾರೆ. ಆರಂಭದಲ್ಲಿ ಶಾರುಖ್ ಖಾನ್ , ಅಜಯ್ ದೇವಗನ್ ಇಲ್ಲವೇ ಹೃತಿಕ್ ರೋಶನ್ ಅವರ ಕೈಲಿ ಈ ಪಾತ್ರ ಮಾಡಿಸುವ ಉದ್ದೇಶ ಹೊಂದಿದ್ದ ಭನ್ಸಾಲಿ ಸಾಹೇಬರು ಅಂತಿಮವಾಗಿ ರಾಮ್ಲೀಅದ ಅಭಿನಯದಿಂದ ಮನಸೆಳೆದ ರಣವೀರ್ ಅವರಿಗೆ ಅವಕಾಶ ನೀಡಿದ್ದಾರೆ. ಮಸ್ತಾನಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಎಲ್ಲವು ನಿರೀಕ್ಷಿಸಿದನ್ತೆ ನಡೆದರೆ ಈ ಚಿತ್ರು ಸದ್ಯದಲ್ಲೇ ಸೆಟ್ಟೇರುತ್ತದೆ.