ಬಾಕ್ಸಾಫೀಸಲ್ಲಿ ವಿದ್ಯಾಬಾಲನ್ ಮದುವೆಯ ಸೈಡ್ ಎಫೆಕ್ಟ್ ಪರಿಣಾಮ ಚೆನ್ನಾಗಿದೆ
, ಗುರುವಾರ, 6 ಮಾರ್ಚ್ 2014 (09:29 IST)
ಫರ್ಹಾನ್ ಅಕ್ತರ್ ಮತ್ತು ವಿದ್ಯಾ ಬಾಲನ್ ನಟಿಸಿರುವ ಶಾದಿ ಕೆ ಸೈಡ್ ಎಫೆಕ್ಟ್ ಚಿತ್ರವೂ ಮೊದಲನೇ ದಿನದಲ್ಲಿ ಹೇಳಿ ಕೊಳ್ಳುವಂತಹ ಯಾವುದೇ ಯಶಸ್ಸು ನೀಡದೆ ಇದ್ದರು ಸಹ ವಾರಾಂತ್ಯದಲ್ಲಿ ಗಳಿಕೆಯ ಪ್ರಮಾಣದಲ್ಲಿ ಸಾಕಷ್ಟು ಏರಿಕೆ ಕಂಡು ಬಂತಂತೆ. ಈ ಚಿತ್ರವನ್ನು 50ಕೋಟಿ ರೂಪಾಯಿಗಳ ಮೊತ್ತದಲ್ಲಿ ನಿರ್ಮಿಸಲಾಗಿತ್ತು. ಇದನ್ನು ಬಾಲಾಜಿ ಮೊಷನ್ಸ್ ಪಿಕ್ಚರ್ ಮತ್ತು ಪ್ರೀತಿಶ್ ನಂದಿ ಅವರು ಒಟ್ಟಾಗಿ ಸೇರಿ ನಿರ್ಮಿಸಿದ್ದಾರೆ.