Article Bollywood Gossips %e0%b2%ac%e0%b2%b8%e0%b3%81%e0%b2%b0%e0%b2%bf %e0%b2%b5%e0%b2%bf%e0%b2%a6%e0%b3%8d%e0%b2%af%e0%b2%be %e0%b2%ac%e0%b2%be%e0%b2%b2%e0%b2%a8%e0%b3%8d %e0%b2%95%e0%b2%b9%e0%b2%be%e0%b2%a8%e0%b2%bf %e0%b2%8f%e0%b2%a8%e0%b3%82 %e0%b2%97%e0%b3%86%e0%b3%82%e0%b2%a4%e0%b3%8d%e0%b2%a4%e0%b3%87 112011200041_1.htm

Daily Horoscope

Select Your Language

Notifications

webdunia
webdunia
webdunia
webdunia

ಬಸುರಿ ವಿದ್ಯಾ ಬಾಲನ್ 'ಕಹಾನಿ' ಏನೂ ಗೊತ್ತೇ?

ವಿದ್ಯಾ ಬಾಲನ್
PR


'ಡರ್ಟಿ ಪಿಕ್ಚರ್‌'ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಬಾಲಿವುಡ್ ನಟಿ ವಿದ್ಯಾ ಬಾಲನ್ ಇದೀಗ ಹೊಸ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದರೆ ಈ ಬಾರಿ ಮಾತ್ರ ಬೆಚ್ಚನೆಯ ಬದಲು ತನ್ನ ಗಂಡನ ಹುಡುಕಾಟದಲ್ಲಿ ತೊಡಗಿರುವ ಬಸುರಿ ಮಹಿಯೊಬ್ಬಳ 'ಕಹಾನಿ' ಹೇಳಲು ಬಂದಿದ್ದಾರೆ.

ಡರ್ಟಿ ಪಿಕ್ಚರ್ ಮುಖಾಂತರ 'ಸೆಕ್ಸಿ ಇಮೇಜ್' ಗಿಟ್ಟಿಸಿಕೊಂಡಿದ್ದ 33ರ ವಿದ್ಯಾ ಬಾಲನ್ ನಟನೆಯನ್ನು 'ಕಹಾನಿ' ಚಿತ್ರದಲ್ಲಿ ಅಭಿಮಾನಿಗಳು ಯಾವ ರೀತಿ ಸ್ವೀಕರಿಸಲಿದ್ದಾರೆ ಎಂಬುದು ಬಾಲಿವುಡ್‌ನ ಪ್ರಮುಖ ಚರ್ಚಾ ವಿಷಯವಾಗಿದೆ.

ಆದರೆ ಗರ್ಭಿಣಿ ಪಾತ್ರ ನನ್ನ ಫೆವರಿಟ್ ಎಂದಿರುವ ವಿದ್ಯಾ ಬಾಲನ್, ಸಹಜ ನಟನೆಯನ್ನೇ ಮಾಡಿದ್ದೇನೆ ಎಂದಿದ್ದಾರೆ. 'ಕಹಾನಿ' ಚಿತ್ರವು ಮಾರ್ಚ್ 9ರಂದು ತೆರೆಗೆ ಅಪ್ಪಳಿಸಿದ್ದು, ನಿರ್ದೇಶಕ ಹಾಗೂ ಸಹ ನಿರ್ಮಾಪಕ ಸುಜೋಯ್ ಘೋಷ್ ಅತೀವ ನಿರೀಕ್ಷೆಯನ್ನು ಹೊಂದಿದ್ದಾರೆ.

ಬಸುರಿ ಪಾತ್ರ ಎಂಬುವುದು ಕೇಕ್ ಮೇಲೆ ನಡೆದಂತೆ ಎಂದಿರುವ ವಿದ್ಯಾಬಾಲನ್ ನಟನೆ ವೇಳೆ ಯಾವುದೇ ತೊಂದರೆ ಎದುರಾಗಿಲ್ಲ. ಸಹಜವಾಗಿಯೇ ನಟಿಸಿದ್ದೇನೆ ಎಂದಿದ್ದಾರೆ.


ಕೃಪೆ: ವಯಕಾಮ್ 18 ಮೂವಿಸ್

Share this Story:

Follow Webdunia kannada