Article Bollywood Gossips %e0%b2%ac%e0%b2%ac%e0%b2%b2%e0%b3%8d%e2%80%8c%e0%b2%97%e0%b2%ae%e0%b3%8d %e0%b2%b9%e0%b3%81%e0%b2%a1%e0%b3%81%e0%b2%97%e0%b2%bf %e0%b2%b8%e0%b3%8b%e0%b2%b9%e0%b2%be %e0%b2%85%e0%b2%b2%e0%b2%bf %e0%b2%96%e0%b2%be%e0%b2%a8%e0%b3%8d 108021600046_1.htm

Daily Horoscope

Select Your Language

Notifications

webdunia
webdunia
webdunia
webdunia

ಬಬಲ್‌ಗಮ್ ಹುಡುಗಿ ಸೋಹಾ ಅಲಿ ಖಾನ್

ಬಬಲ್‌ಗಮ್
ಚಾಕಲೇಟ್ ಹೀರೋಗಳೆಂದು ಕರೆಸಿಕೊಳ್ಳುವವರಿಗೆ ಇನ್ನು ನಿರಾಶೆಯ ಮಾತಿಲ್ಲ. ಹೀರೋಯಿನ್‌ಗಳಿಗೂ ಇಂಥದ್ದೊಂದು ಹೆಸರು 'ಅಂಟಿ'ಕೊಳ್ಳುತ್ತಿದೆ. ಅಂದ್ರೆ, ಬಬಲ್‌ಗಮ್ ಹುಡುಗಿ ಇನ್ನೇನು ಬರಲಿದ್ದಾಳೆ.

ಇದ್ಯಾರು ಬಬಲ್‌‌ಗಮ್ ಹುಡುಗಿ, ಅಂಟಿಕೊಂಡರೆ ಬಿಡಲು ಕಷ್ಟ ಎಂದು ಭಯ ಪಡಬೇಕಾಗಿಲ್ಲ, ಇಲ್ಲಿ 'ಬಬಲ್‌ಗಮ್' ಹೊಸದಾಗಿ ಬರಲಿರುವ ಚಿತ್ರದ ಹೆಸರು. ಅದರ ನಾಯಕಿ ಬಬಲ್‌ಗಮ್ ಹುಡುಗಿ...! ಹೇಗಿದೆ ಲೆಕ್ಕಾಚಾರ?

ಅರೆ, ಬಬಲ್ ಗಮ್‌‌‌ ಆಗಿಯೂ ಅಂಟಿಕೊಳ್ಳದ ನಾಯಕಿ ಯಾರು ಎಂಬ ಕುತೂಹಲವಾ? ಬೇರಾರು ಅಲ್ಲ ಸೋಹಾ ಆಲಿಖಾನ್. ಹಾಗಾಗಿ ನಮ್ಮ ಮೈಗೆ ಅಂಟುವುದಿಲ್ಲ ಎನ್ನುವ ಧೈರ್ಯ ಬಂತು. ಅಂಟಿಕೊಳ್ಳುವುದಿಲ್ಲ ಅಂದರೆ ಅದು ಬಬಲ್‌‌‌‌‌‌‌‌ಗಮ್ ಹೇಗಾಗುತ್ತದೆ. ಅದಕ್ಕೆಂದೇ ಇರ್ಫಾನ್ ಖಾನ್ ಎನ್ನುವ ಬೇಗನೆ ಮೈಗಂಟಿಸಿಕೊಳ್ಳದ ಚುರುಕು ನಟನ ಜತೆಗೆ ಸೋಹಾ ಆಲಿಖಾನ್‌ ಅಂಟಲಿದ್ದಾರೆ.

ಚಿತ್ರವನ್ನು ಅನಿಲ್ ಸೀನಿಯರ್ ಶರ್ಮಾ ಎಂಬವರು ನಿರ್ದೇಶಿಸುತ್ತಿದ್ದು, ಇದು ಅವರ ಚೊಚ್ಚಲ ಪ್ರವೇಶವಾಗಿದೆ. ಮಹಾನಗರದ ದಂಪತಿಯ ಕತೆಯನ್ನು ಆಧರಿಸಿ ಈ ಚಿತ್ರ ತಯಾರಾಗುತ್ತದೆ ಎಂದು ನಿರ್ದೇಶಕ ಅನಿಲ್ ಹೇಳಿದ್ದಾರೆ. ನಟ ನಟಿಯ ಹುಡುಕಾಟದಲ್ಲಿರುವಾಗ ಸೋಹಾ ಮತ್ತು ಇರ್ಫಾನ್ ಸೂಕ್ತ ಎಂದು ಅನಿಸಿತ್ತು ಎಂದ ಅವರು, ಸಿನೆಮಾ ಬಿಡುಗಡೆಯಾದ ಮೇಲೆ ನೋಡಿ ಹೇಗಿರುತ್ತೆ ನನ್ನ ಸಿನೆಮಾ ಅಂತ ಬಿರುಸಾಗಿದ್ದಾರೆ.

'ಬಬಲ್‌‌ಗಮ್' ಜನರನ್ನು ಅಂಟಿಕೊಳ್ಳುತ್ತದೋ, ಅಥವಾ ಬಾಯಲ್ಲಿ ಇದ್ದ ಬಬಲ್‌‌ಗಮ್‌ನ್ನೂ ಊದಿ ಬಿಡುವಂತಿರುತ್ತದೋ... ಕಾದು ನೋಡಬೇಕು.

Share this Story:

Follow Webdunia kannada