Article Bollywood Gossips %e0%b2%ac%e0%b2%82%e0%b2%a6%e0%b2%b3%e0%b3%8b %e0%b2%ac%e0%b2%82%e0%b2%a6%e0%b2%b3%e0%b3%81 %e0%b2%b5%e0%b3%87%e0%b2%a6%e0%b2%bf%e0%b2%95%e0%b2%be 108042500007_1.htm

Select Your Language

Notifications

webdunia
webdunia
webdunia
webdunia

ಬಂದಳೋ ಬಂದಳು ವೇದಿಕಾ

ಗಣೇಶ್
ಸಂಗಮ ಚಿತ್ರಕ್ಕೆ ಕೊನೆಗೂ ನಾಯಕಿ ಸಿಕ್ಕಿದ್ದಾರೆ. ಗಣೇಶ್ ನಾಯಕನಾಗಿರುವ ಎಸ್.ವಿ.ಬಾಬು ನಿರ್ಮಿಸಿ ರವಿವರ್ಮ ನಿರ್ದೇಶಿಸುವ ಈ ಚಿತ್ರಕ್ಕೆ ದೂರದ ಮುಂಬೈಯ ವೇದಿಕಾರನ್ನು ಎಸ್.ವಿ.ಬಾಬು ಕರೆತಂದಿದ್ದಾರೆ. ಸದ್ಯ ಈಕೆ ತಮಿಳಿನಲ್ಲಿ ಬ್ಯುಸಿ ನಟಿ.

ಮುಂಬೈಯಲ್ಲಿ ಹುಟ್ಟಿ ಬೆಳೆದ ಈಕೆಯನ್ನು ತಮಿಳಿನ ಮದರಾಸಿ ಚಿತ್ರಕ್ಕಾಗಿ ಕನ್ನಡಿಗ ಅರ್ಜುನ್ ಸರ್ಜಾ ಮೊದಲಿಗೆ ಕರೆತಂದರು. ನಂತರ ಈಕೆ ಕೆಲವು ಚಿತ್ರಗಳಲ್ಲಿ ಮೈ ಚಳಿ ಬಿಟ್ಟು ನಟಿಸಿದ್ದರಿಂದ ತಮಿಳಿನಲ್ಲಿ ಮತ್ತಷ್ಟು ಅವಕಾಶಗಳು ಸಿಕ್ಕಿವೆ.

ಈಗ ವೇದಿಕಾರನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಕನ್ನಡ ಚಿತ್ರರಂಗವೇ ಹೀಗೆ, ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಕನ್ನಡದಲ್ಲಿ ಪ್ರತಿಭಾನ್ವಿತ ನಟಿಯರಿದ್ದರೂ ಬೇರೆ ಭಾಷೆಗಳಿಂದ ನಟಿಯರನ್ನು ಕರೆಸುವ ಪದ್ಧತಿ ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಿಂದೆ ರಮ್ಯಾ ಈ ಕುರಿತು ತಮ್ಮ ಬೇಸರ ವ್ಯಕ್ತಪಡಿಸಿದ್ದರು.

ಸಂಗಮಕ್ಕಾಗಿ ಕರೆತಂದ ವೇದಿಕಾರಿಂದ ಯಾವ ಜಾದು ಮಾಡಿಸುತ್ತಾರೆಂದು ಕಾದು ನೋಡಬೇಕು.

Share this Story:

Follow Webdunia kannada