ಫೆಬ್ರವರಿ ಯಲ್ಲಿ ಬಾಲಿವುಡ್ ನಲ್ಲಿ ಸಿನಿಮಾಗಳ ಹಬ್ಬ !
, ಶನಿವಾರ, 1 ಫೆಬ್ರವರಿ 2014 (10:16 IST)
ಬಾಲಿವುಡ್ ನಲ್ಲಿ ಫೆಬ್ರವರಿಯಲ್ಲಿ ಸಿನ್ಮಾ ಪ್ರಿಯರಿಗೆ ಬಂಪರ್ ಬಹುಮಾನ ಎಂದೇ ಹೇಳ ಬಹುದಾಗಿದೆ. ಈ ಇಡಿ ತಿಂಗಳು ಅನೇಕ ಭರ್ಜರಿ ಚಿತ್ರಗಳು ರಿಲೀಸಿಗೆ ಕಾದಿದೆ. ವಾರಕ್ಕೆ ಕನಿಷ್ಠ ಎರಡರಂತೆ ಬಹಳಷ್ಟು ಚಿತ್ರಗಳು ಪ್ರೇಕ್ಷಕ ಪ್ರಭುಗಳನ್ನು ರಂಜಿಸಲಿದೆ. ಕಳೆದ ತಿಂಗಳು ಸಲ್ಮಾನ್ ಖಾನ್ ಜೈ ಹೊ ಮತ್ತು ಮಾಧುರಿ ಅವರ ಡೇಡ್ ಇಷ್ಕಿಯ ಹೊರತು ಪಡಿಸಿ ಮತ್ಯಾವುದೇ ಚಿತ್ರಗಳು ತೆರೆ ಕಾಣಲಿಲ್ಲ. ಆದರೆ ಈ ತಿಂಗಳು ಅನೇಕ ಚಿತ್ರಗಳ ಸುರಿಮಳೆ ಆಗುತ್ತಿದೆ. ಇದರಲ್ಲಿ ಪ್ರತಿವಾರವೂ ಒಂದು ಬಿಗ್ ಬಜೆಟ್ ಮೂವಿ ಬಿಡುಗಡೆ ಆಗಲಿದೆ. ಪರಿಣಿತಿ ಚೋಪ್ರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಅವರ ನಟನೆಯ ಕರಣ್ ಜೋಹರ್ ಪ್ರೊಡಕ್ಷನ್ ಚಿತ್ರವನ್ನು ವಿನೆಲ್ ಮ್ಯಾಥ್ಯು ಅವರು ನಿರ್ದೇಶಿಸುತ್ತಿರುವ ಚಿತ್ರ ಹಸಿ ತೋ ಫಸಿ ಬಿಡುಗಡೆ ಆಗುತ್ತಿದೆ. ಫೆಬ್ರವರಿ 7ಕ್ಕೆ ಬಿಡುಗಡೆ ಆಗಲಿದೆ. ಶೇಖರ್ ಸುಮನ್ ಪುತ್ರ ಅಧ್ಯಯನ ಸುಮನ್ ಅವರ ಮೂವಿ ಹಾರ್ಟ್ ಲೆಸ್ ಸಹ ಈ ತಿಂಗಳೇ ಬಿಡುಗಡೆ ಕಾಣುತ್ತಿದೆ. ಅಧ್ಯಯನ್ ಸುಮನ್ ಮತ್ತು ಅರಿಯಾನ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಶೇಖರ್ ಸುಮನ್ ನಿರ್ದೇಶನ ಈ ಚಿತ್ರಕ್ಕಿದೆ. ಓಂ ಪುರಿ ಮತ್ತು ದೀಪ್ತಿ ನವಲ್ ಚಿತ್ರದಲ್ಲಿ ನಟಿಸಿರುವುದು ಸಹ ಇದನ್ನು ವೀಕ್ಷಿಸುವ ಕುತೂಹಲ ಜನಕ್ಕೆ ಹೆಚ್ಚಾಗಿದೆ.