Article Bollywood Gossips %e0%b2%ab%e0%b2%bf%e0%b2%b2%e0%b2%82%e0%b2%ab%e0%b3%87%e0%b2%b0%e0%b3%8d %e0%b2%aa%e0%b3%8d%e0%b2%b0%e0%b2%b6%e0%b2%b8%e0%b3%8d%e0%b2%a4%e0%b2%bf %e0%b2%ae%e0%b3%81%e0%b2%82%e0%b2%9a%e0%b3%82%e0%b2%a3%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf %e0%b2%b0%e0%b2%ac%e0%b3%8d %e0%b2%a8%e0%b3%87 109021800076_1.htm

Daily Horoscope

Select Your Language

Notifications

webdunia
webdunia
webdunia
webdunia

ಫಿಲಂಫೇರ್ ಪ್ರಶಸ್ತಿ: ಮುಂಚೂಣಿಯಲ್ಲಿ 'ರಬ್ ನೇ..'

ಫಿಲಂಫೇರ್
IFM
ಈ ಬಾರಿ ಫಿಲ್ಮ್‌ಫೇರ್ ಅವಾರ್ಡ್ ಯಾವ ಚಿತ್ರಕ್ಕೆ, ಯಾವ ನಾಯಕ-ನಾಯಕಿಗೆ ಸಿಗಬಹುದು ಎಂಬ ಕುತೂಹಲ ಸಹಜ. ಅದರಲ್ಲೂ 'ಸ್ಲಮ್‌ಡಾಗ್ ಮಿಲಿಯನೇರ್' ಆಸ್ಕರ್ ಸಮೀಪದಲ್ಲಿರುವಾಗ ಗಜನಿ, ಜಾನೇ ತೂ ಜಾನೇ ನಾ, ಜೋಧಾ ಅಕ್ಬರ್ ಮುಂತಾದ ಯಶಸ್ವೀ ಚಿತ್ರಗಳ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್‌ಗೆ ಈ ವರ್ಷವೂ ಪ್ರಶಸ್ತಿ ಖಚಿತ ಎನ್ನುತ್ತಿದೆ ಬಾಲಿವುಡ್ ವಲಯ. ಶ್ರೇಷ್ಠ ಚಿತ್ರಗಳ ಸಾಲಿನಲ್ಲೂ ಗಜನಿ, ಜಾನೇ ತೂ ಜಾನೇ ನಾ, ಜೋಧಾ ಅಕ್ಬರ್, ದೋಸ್ತಾನಾ, ರಬ್ ನೇ ಬನಾ ದಿ ಜೋಡಿ, ರಾಕ್ ಆನ್‌ಗಳಿವೆ. ಒಟ್ಟಾರೆ ಪಟ್ಟಿಯನ್ನು ನೋಡಿದಾಗ ರಬ್ ನೇ.. 8 ಹಾಗೂ ಗಜನಿ 6 ನಾಮಕರಣಗಳನ್ನು ವಿವಿಧ ವಿಭಾಗಗಳಿಂದ ಪಡೆದುಕೊಂಡಿದ್ದು ಮುಂಚೂಣಿಯಲ್ಲಿವೆ.

ರಬ್ ನೇ ಬನಾ ದಿ ಜೋಡಿ ಚಿತ್ರವು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ- ಆದಿತ್ಯಾ ಛೋಪ್ರಾ, ಅತ್ಯುತ್ತಮ ನಾಯಕ ನಟ -ಶಾರೂಖ್ ಖಾನ್, ಅತ್ಯುತ್ತಮ ನಾಯಕಿ - ಅನೂಷ್ಕಾ ಶರ್ಮಾ, ಪೋಷಕ ನಟ- ವಿನಯ ಪಾಥಕ್, ಅತ್ಯುತ್ತಮ ಸಾಹಿತ್ಯ - ಜೈದೀಪ್ ಸಾಹ್ನಿ, ಹಿನ್ನಲೆ ಗಾಯಕ - ಸುಖ್ವಿಂದರ್ ಸಿಂಗ್ ಹಾಗೂ ಹಿನ್ನಲೆ ಗಾಯಕಿ - ಸುನಿಧಿ ಚೌಹಾಣ್ ಹೀಗೆ ಒಟ್ಟು ಎಂಟು ವಿಭಾಗಗಳಲ್ಲಿ ನಾಮಕರಣಗೊಂಡಿದ್ದು ಪ್ರಶಸ್ತಿಗಾಗಿ ಮುಂಚೂಣಿಯಲ್ಲಿದೆ.

ಗಜನಿ ಚಿತ್ರ ಒಟ್ಟು ಆರು ವಿಭಾಗಗಳಲ್ಲಿ ನಾಮಕರಣಗೊಂಡಿದ್ದು ಎರಡನೇ ಸ್ಥಾನದಲ್ಲಿದೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ - ಎ.ಆರ್. ಮುರುಗದಾಸ್, ನಾಯಕ- ಅಮೀರ್ ಖಾನ್, ನಾಯಕಿ- ಆಸಿನ್, ಸಂಗೀತ- ಎ.ಆರ್. ರೆಹಮಾನ್, ಸಾಹಿತ್ಯ- ಪ್ರಸೂನ್ ಜೋಷಿ ವಿಭಾಗಗಳಲ್ಲಿ ಗಜನಿ ನಾಮಕರಣಗೊಂಡಿದೆ.

ಅತ್ಯುತ್ತಮ ಚಿತ್ರಕ್ಕಾಗಿ ದೋಸ್ತಾನಾ, ಗಜನಿ, ಜೋಧಾ ಅಕ್ಬರ್, ರಬ್ ನೇ ಬನಾ ದೀ ಜೋಡಿ, ಜಾನೇ ತೂ ಯಾ ಜಾನೇ ನಾ ಮತ್ತು ರಾನ್ ಆನ್ ಚಿತ್ರಗಳು ಸ್ಪರ್ಧೆಯಲ್ಲಿವೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಾಗಿ ಗಜನಿಯಿಂದ ಎ.ಆರ್. ಮರುಗದಾಸ್, ರಾಕ್ ಆನ್‌ಗಾಗಿ ಅಭಿಷೇಕ್ ಕಪೂರ್, ರಬ್ ನೇ ಬನಾ ದೀ ಜೋಡಿಗಾಗಿ ಆದಿತ್ಯಾ ಛೋಪ್ರಾ, ಜೋಧಾ ಅಕ್ಬರ್‌ಗಾಗಿ ಅಶುತೋಷ್ ಗೌರೀಕರ್, ಫ್ಯಾಷನ್‌ಗಾಗಿ ಮಧುರ್ ಭಂಡಾರ್ಕರ್ ಮತ್ತು ಎ ವೆನ್ಸ್‌ಡೇ‌ಗಾಗಿ ನೀರಜ್ ಪಾಂಡೇ ಪೈಪೋಟಿ ನಿರತರಾಗಿದ್ದಾರೆ.
webdunia
IFM
ನಾಯಕನ ಪಟ್ಟದ ಪ್ರಶಸ್ತಿ ಪಡೆಯಲು ಅಮೀರ್ ಖಾನ್- ಗಜನಿ, ಅಭಿಷೇಕ್ ಬಚ್ಚನ್ - ದೋಸ್ತಾನ, ಹೃತಿಕ್ ರೋಷನ್ - ಜೋಧಾ ಅಕ್ಬರ್, ಅಕ್ಷಯ್ ಕುಮಾರ್ - ಸಿಂಗ್ ಈಸ್ ಕಿಂಗ್, ಶಾರೂಖ್ ಖಾನ್ - ರಬ್ ನೇ ಬನಾ ದೀ ಜೋಡಿ ಮತ್ತು ನಾಸಿರುದ್ದೀನ್ ಶಾ -ಎ ವೆನ್ಸ್‌ಡೇ ಚಿತ್ರಗಳಿಂದ ಸರದಿಯಲ್ಲಿದ್ದಾರೆ.

ನಾಯಕಿಯ ಪ್ರಶಸ್ತಿಗಾಗಿ ಜೋಧಾ ಅಕ್ಬರ್ ಚಿತ್ರದಿಂದ ಐಶ್ವರ್ಯಾ ರೈ, ರಬ್ ನೇ ಬನಾ ದೀ ಜೋಡಿಯಿಂದ ಅನೂಷ್ಕಾ ಶರ್ಮಾ, ಗಜನಿಯಿಂದ ಆಸಿನ್, ಯು ಮಿ ಔರ್ ಹಮ್‌ನಿಂದ ಕಾಜೋಲ್ ಹಾಗೂ ಫ್ಯಾಷನ್‌ನಿಂದ ಪ್ರಿಯಾಂಕಾ ಛೋಪ್ರಾ ಸ್ಪರ್ಧೆಯಲ್ಲಿದ್ದಾರೆ.

ಸಂಗೀತ ನಿರ್ದೇಶಕ ಪ್ರಶಸ್ತಿಗಾಗಿ ಮ‌ೂರು ಚಿತ್ರಗಳಿಂದ ಎ.ಆರ್. ರೆಹಮಾನ್ ನಾಮಕರಣಗೊಂಡಿರುವುದು ವಿಶೇಷ. ಅವರು ಗಜನಿ, ಜಾನೇ ತೂ ಯಾ ಜಾನೇ ನಾ ಮತ್ತು ಜೋಧಾ ಅಕ್ಬರ್‌ನಿಂದ ಸರದಿಯಲ್ಲಿದ್ದರೆ, ರೇಸ್ ಚಿತ್ರಕ್ಕಾಗಿ ಪ್ರೀತಮ್, ರಾಕ್ ಆನ್‌ಗಾಗಿ ಶಂಕರ್-ಎಹ್ಸಾನ್ ಮತ್ತು ದೋಸ್ತಾನಕ್ಕಾಗಿ ವಿಶಾಲ್-ಶೇಖರ್ ಸ್ಪರ್ಧೆಯಲ್ಲಿದ್ದಾರೆ.

Share this Story:

Follow Webdunia kannada