ಫರ್ಹಾನ್ ಅಕ್ತರ್ಗೆ ಸಿಕ್ಕಾಪಟ್ಟೆ ಸೆನ್ಸ್ ಆಫ್ ಹ್ಯುಮರ್ ಇದೆ -ವಿದ್ಯಾಬಾಲನ್
, ಮಂಗಳವಾರ, 25 ಫೆಬ್ರವರಿ 2014 (10:40 IST)
ನಟ, ನಿರ್ದೇಶಕ, ಬರಹಗಾರ ಹೀಗೆ ಅನೇಕ ರೀತಿಯಲ್ಲಿ ತಮ್ಮನ್ನು ಗುರುತಿಸಿ ಕೊಂಡಿರುವ ಬಹುಮುಖ ಪ್ರತಿಭೆ ಫರಾನ್ ಅಕ್ತರ್ ತನ್ನ ಜೊತೆ ಕೆಲಸ ಮಾಡುವವರನ್ನು ಕೀಟಲೆ ಮಾಡಿ ನಗಿಸುವ ಗುಣವಿದೆ.ಅದೇ ರೀತಿ ತನ್ನನ್ನು ಬಕರಾ ಮಾಡಿ ಸಿಕ್ಕಾಪಟ್ಟೆ ನಗಿಸಿದ್ದಾನೆ ಅಕ್ತರ್ ಎನ್ನುವ ಸಂಗತಿಯನ್ನು ಪದ್ಮಶ್ರೀ ಪುರಸ್ಕೃತೆ ಗ್ಲಾಮಿ ನಟಿ ವಿದ್ಯಾ ಬಾಲನ್ ತಿಳಿಸಿದ್ದಾರೆ. ಈ ಜೋಡಿ ಶಾದಿ ಕ ಸೈಡ್ ಎಫೆಕ್ಟ್ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಇದರ ಚಿತ್ರೀಕರಣದ ಸಮಯದಲ್ಲಿ ಸಾಕಷ್ಟು ಖುಷಿ ಬರುವಂತಹ ವಾತಾವರಣ ಕಲ್ಪಿಸಿದ್ದರಂತೆ ಅಕ್ತರ್. ಅಲ್ಲದೆ ಇವರಿಗೆ ಸಿಕ್ಕಾಪಟ್ಟೆ ಸೆನ್ಸ್ ಆಫ್ ಹ್ಯುಮರ್ ಇದೆ ಎನ್ನುವ ಮಾತನ್ನು ಸಹ ಹೇಳಿದ್ದಾರೆ ವಿದ್ಯಾ.