Publish Date: Wed, 06 Aug 2008 (15:53 IST)
Updated Date: Wed, 06 Aug 2008 (15:53 IST)
ನಮಗೆ ಕಿಂಗ್ ಖಾನ್ ಬಗ್ಗೆ ಗೊತ್ತೇ ಇದೆ. ದುಡಿಮೆಯ ವಿಷಯಕ್ಕೆ ಬಂದಾಗ ಶಾರುಖ್ ತುಂಬಾ ಶ್ರಮ ವಹಿಸುತ್ತಾರೆ ಅದರಲ್ಲೂ ಅವರ ಮಕ್ಕಳ ಬಗ್ಗೆ ಕಾಳಜಿ ವಹಿಸಿದಷ್ಟೇ ಕಾಳಜಿಯನ್ನು ತಮ್ಮ ಹೋಮ್ ಪ್ರೊಡಕ್ಷನ್‌ಗಳ ಚಿತ್ರಗಳ ಬಗ್ಗೆ ವಹಿಸುತ್ತಾರೆ, ಇತ್ತೀಚಿನ ದಿನಗಳಲ್ಲಿ ಪ್ರಚಾರದಲ್ಲಿರುವ 'ಬಿಲ್ಲೊ ಬಾರ್ಬರ್' ಕೂಡ ಇದಕ್ಕೆ ಹೊರತಲ್ಲ ಮತ್ತು ಈ ಬಾರಿಯೂ ಮೈಲಿಗಲ್ಲೊಂದನ್ನು ಸ್ಥಾಪಿಸುವ ಧ್ಯೇಯ ಖಂಡಿತವಾಗಿಯೂ ಶಾರುಖ್‌ರಿಗೆ ಇದೆ.
'ಬಿಲ್ಲೊ ಬಾರ್ಬರ್'ನ ವಿಶೇಷ ಗೀತೆಯೊಂದರಲ್ಲಿ ಶಾರುಖ್-ದೀಪಿಕಾ ಜೋಡಿ ಮತ್ತೆ ಒಂದಾಗಿ ತೆರೆಯ ಮೇಲೆ ಹೆಜ್ಜೆ ಹಾಕಲಿದೆ, ಈ ಗೀತೆಗೆ ನೃತ್ಯ ಸಂಯೋಜನೆ (ಕೊರಿಯೋಗ್ರಫಿ) ಮಾಡುತ್ತಿರುವುದು, ಶಾರುಖ್ ಪರಮಾಪ್ತ ಗೆಳತಿ ಫರಾ ಖಾನ್.
ಓಂ ಶಾಂತಿ ಓಂನಲ್ಲಿ ಯಶಸ್ಸು ಕಂಡ ಫರಾಖಾನ್, ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ಜೋಡಿ 'ಬಿಲ್ಲೊ ಬಾರ್ಬರ್'ನಲ್ಲಿಯೂ ಮೋಡಿ ಮಾಡಲಿ ಎಂಬುದು ನಿರ್ದೇಶಕ ಪ್ರಿಯದರ್ಶನ್ ಬಯಕೆ.
ಪ್ರಸ್ತುತ ಹಿರಿತೆರೆಯಲ್ಲಿ ಮಿಂಚುತ್ತಿರುವ ದೀಪಿಕಾ, ತನ್ನನ್ನು ಬಾಲಿವುಡ್‌ನಲ್ಲಿ ಮೇಲಕ್ಕೆ ತಂದ ಮೆಂಟರ್ ಶಾರುಖ್‌ಗೆ ಇಷ್ಟಾದರೂ ಕಿರು ಕಾಣಿಕೆ ಸಲ್ಲಿಸಬೇಡವೆ..?