Publish Date: Fri, 02 Nov 2007 (19:17 IST)
Updated Date: Fri, 02 Nov 2007 (19:16 IST)
ಓಂ ಶಾಂತಿ ಓಂ ಫೈನಲ್ ಪ್ರಿಂಟ್ ನೋಡಿರುವ ಶಾರುಕ್ ಖಾನ್ ಬೌಲ್ಡ್ ಆಗಿದ್ದಾರೆ. ಅವರು ಯಾವ ಪ್ರಮಾಣದಲ್ಲಿ ಆ ಚಿತ್ರ ನೋಡಿ ಮನಸೋತಿದ್ದಾರೆಂದರೆ ಫರಾ ಖಾನ್ ಅವರಿಗೆ ಮರ್ಸಿಡಿಸ್ ಕಾರು ಉಡುಗೊರೆಯಾಗಿ ನೀಡಿದ್ದಾರೆ.
ಬಾಲಿವುಡ್ ಬಾದ್‌ಶಾಹ ಚಿತ್ರದ ಮನರಂಜನೆಯ ಅಂಶದ ಬಗ್ಗೆ ತೀವ್ರ ಸಂತುಷ್ಟರಾಗಿದ್ದಾರೆ. ಆದ್ದರಿಂದ ಫರಾ ಅವರ ಶ್ರಮದ ಕೆಲಸಕ್ಕೆ ಮತ್ತು ಓಂ ಶಾಂತಿ ಓಂಗೆ ಸಲ್ಲಿಸಿದ ಕಾಣಿಕೆಗಾಗಿ ಅವರಿಗೆ ಮರ್ಸಿಡಿಸ್ ಕೊಡುಗೆ ನೀಡಲು ಶಾರುಕ್ ನಿರ್ಧರಿಸಿದರು.
ಶಾರುಕ್ ಮತ್ತು ನಾನು ವಾರದ ಹಿಂದೆ ಚಿತ್ರದ ಪ್ರಿಂಟ್ ವೀಕ್ಷಿಸಿದೆವು. ಅದಾದ ತಕ್ಷಣವೇ ಶಾರುಕ್ ನನಗೆ ಮರ್ಸಿಡಿಸ್ ಉಡುಗೊರೆಯಾಗಿ ನೀಡಿದರೆಂದು ಫರಾ ಹೇಳಿದ್ದಾರೆ. ಶಾರುಕ್ ಸ್ನೇಹಿತರ ಬಗ್ಗೆ ಔದಾರ್ಯದಿಂದ ಇರುವುದು ಗೊತ್ತಿದ್ದರಿಂದ ನನಗೇನೂ ಅದರಿಂದ ಆಶ್ಟರ್ಯವಾಗಲಿಲ್ಲ. ನಾನು ಶಾರುಕ್‌ನಿಂದ ಮರ್ಸಿಡಿಸ್ ನಿರೀಕ್ಷೆ ಮಾಡಿರಲಿಲ್ಲ ಎಂದು ಫರಾ ಹೇಳುತ್ತಾರೆ.