Article Bollywood Gossips %e0%b2%aa%e0%b3%8d%e0%b2%b2%e0%b3%87%e0%b2%ac%e0%b2%be%e0%b2%af%e0%b3%8d%e2%80%8c %e0%b2%b9%e0%b2%b0%e0%b2%a1%e0%b2%b2%e0%b2%bf%e0%b2%a6%e0%b3%86 %e0%b2%ae%e0%b2%b2%e0%b3%8d%e0%b2%b2%e0%b2%bf%e0%b2%95%e0%b2%be %e0%b2%b6%e0%b3%86%e0%b2%b0%e0%b2%be%e0%b2%b5%e0%b2%a4%e0%b3%8d %e0%b2%aa%e0%b2%b0%e0%b2%bf%e0%b2%ae%e0%b2%b3 109040200048_1.htm

Daily Horoscope

Select Your Language

Notifications

webdunia
webdunia
webdunia
webdunia

'ಪ್ಲೇಬಾಯ್‌' ಹರಡಲಿದೆ ಮಲ್ಲಿಕಾ ಶೆರಾವತ್ ಪರಿಮಳ!

ಪ್ಲೇಬಾಯ್
IFM
ಸ್ಲಂಬಾಲೆ ಫ್ರೀದಾ ಪಿಂಟೋ ಸದ್ದಿಗೆ 'ಮರ್ಡರ್' ಮಲ್ಲಿಕಾ ಸದ್ದಡಗಿತೋ ಅಂದುಕೊಂಡಿರುವಾಗಲೇ, ಈ ಶೆರಾವತ್ ಕನ್ಯೆ ಮೈಕೊಡವಿ ಎದ್ದು ನಿಂತಿದ್ದಾಳೆ. ಇದೀಗ ಮಲ್ಲಿಕಾ ತನ್ನ ಸುಗಂಧವನ್ನು ವಿಶ್ವದೆಲ್ಲೆಡೆ ಬೀರಲಿದ್ದಾಳೆ.

''ಬಂದೆ, ಕಂಡೆ (ತೋರಿಸಿದೆ?!), ಗೆದ್ದೆ'' ಎಂದು ಮೂರೇ ಶಬ್ದಗಳಲ್ಲಿ ಮಲ್ಲಿಕಾ ಗೆಲುವನ್ನು ಹಿಂದೆ ವಿವರಿಸುತ್ತಿದ್ದ ಕಾಲ ಹೆಚ್ಚೇನೂ ಹಿಂದೆಯಿರಲಿಲ್ಲ. 'ಮರ್ಡರ್' ಚಿತ್ರದಲ್ಲಿ ಪ್ರೇಕ್ಷಕ ಮಹಾಶಯರ ಹೃದಯ ಕದ್ದ ಚೋರಿ ಮಾತ್ರವಲ್ಲ, ವಿಶ್ವದಲ್ಲೇ ತನ್ನ ಸೆಕ್ಸೀ ಇಮೇಜ್‌ನಿಂದ ಹಲವ ನಿದ್ದೆ ಕದ್ದ ಧೀರೆಯೂ ಈಕೆಯೇ ಆದಳು. ಬಿಚ್ಚಮ್ಮ, ಬಿಚ್ಚುಗಾರ್ತಿ ಕೀರ್ತಿಯೂ ಅಂಟಿತು. 'ಮರ್ಡರ್' ಚಿತ್ರ ನೀಡಿದ ಯಶಸ್ಸು ಆಕೆಯ ಪಾಲಿಗೆ ದೊಡ್ಡ ಬ್ರ್ಯಾಂಡ್ ಇಮೇಜ್ ಆಗಿಹೋಯಿತು. ಈಗಿನವರೆಗೂ ಆಕೆಯನ್ನು ಗುರುತಿಸುವುದು ಆ ಚಿತ್ರದ ಇಮೇಜ್‌ನಿಂದಲೇ ಅಂದರೂ ತಪ್ಪಲ್ಲ. ಅದೇನೇ ಇರಲಿ, ಇಂತಿಪ್ಪ ಶೆರಾವತ್‌ಗೆ ಇತ್ತೀಚೆಗೆ ಯಾಕೋ ಗಿಟ್ಟುತ್ತಿಲ್ಲ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಾಗುವ ಸಮಯಲ್ಲೇ ಲಕ್ಕು ಖುಲಾಯಿಸಿದೆ.

webdunia
IFM
ಜಾಕಿ ಚಾನ್‌ನ 'ದಿ ಮಿಥ್' ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದರೂ ವಿಶ್ವದ ಗಮನವಂತೂ ಸೆಳೆದಿದ್ದಾಳೆ. ನಂತರ 'ಪ್ಯಾರ್ ಕೇ ಸೈಡ್ ಎಫೆಕ್ಟ್ಸ್' ಅನ್ನೋ ಹಿಂದಿ ಚಿತ್ರದಲ್ಲಿ ನಟಿಸಿ ತನ್ನ ಇಮೇಜ್ ಬದಲಾಯಿಸಲು ನೋಡಿ ಒಂದು ಮಟ್ಟದವರೆಗೆ ಸಫಲತೆಯನ್ನೂ ಕಂಡಳು. ನಂತರ, 'ಅಗ್ಲಿ ಔರ್ ಪಗ್ಲಿ', 'ಮಾನ್ ಗಯೇ ಮುಘಲ್ ಇ-ಅಝಮ್' ಅನ್ನೋ ಎರಡು ಚಿತ್ರಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡಳು. 'ಮಾನ್ ಗಯೇ..'ಯನ್ನು ಪ್ರೇಕ್ಷಕ ಮೂಸಲೂ ಹೋಗಲಿಲ್ಲ. 'ಅಗ್ಲಿ ಔರ್ ಪಗ್ಲಿ'ಯೂ ಪ್ರೇಕ್ಷಕನಿಗೆ ಅಗ್ಲಿಯಾಗಿಯೇ ಕಾಣಿಸಿತೇನೋ. ಎರಡಲ್ಲೂ ಕಿಮ್ಮತ್ತು ಗಿಟ್ಟಲಿಲ್ಲ. ಆದರೂ ಮಲ್ಲಿಕಾ ತನ್ನ ಕಾಲ ಮುಗಿಯೆತೆಂದು 'ಹೋಗಲಿ ಬಿಡಿ' ಅಂತ ಸುಮ್ಮನಾಗಿಲ್ಲ. ಫ್ರೀದಾ ಯಶಸ್ಸು ಕಂಡು ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟುತ್ತಿದ್ದರೂ, ತನ್ನ ಸೀಟಿಗಾಗಿ ಹೋರಾಟ ನಡೆಸುತ್ತಿದ್ದಾಳೆ.

ಈಗ ಆ ಹೋರಾಟಕ್ಕೆ ಫಲವೂ ಸಿಕ್ಕಿದೆ ಅನ್ನಿ. ಅತ್ತ ಫ್ರೀದಾ ಅಂತಾರಾಷ್ಟ್ರೀಯ ಸುಗಂಧ ದ್ರವ್ಯಗಳ ಹಾಗೂ ಮಹಿಳೆಯರ ಅಲಂಕಾರಿಕ ವಸ್ತುಗಳ ಬ್ರ್ಯಾಂಡ್ 'ಎಸ್ಟೀ ಲಾಡರ್‌‌'ನ ರೂಪದರ್ಶಿಯಾದರೆ, ಇತ್ತ ಮಲ್ಲಿಕಾ ಮತ್ತೊಂದು ಸಾಧನೆ ಮಾಡಿದ್ದಾಳೆ. ಆಕೆ 'ಪ್ಲೇಬಾಯ್‌'ನ ರೂಪದರ್ಶಿ‍! 'ಪ್ಲೇಬಾಯ್' ಅಂದ ತಕ್ಷಣ ಮ್ಯಾಗಝಿನ್‌ನ ಮುಖಪುಟದಲ್ಲಿ ಸೆಕ್ಸೀ ಇಮೇಜ್‌ನೊಂದಿಗೆ ಬರುತ್ತಾಳೆ ಅಂತ ತಪ್ಪು ತಿಳಿಯಬೇಡಿ. 'ಪ್ಲೇಬಾಯ್' ಕೂಡಾ 'ಎಸ್ಟೀ ಲಾಡರ್‌'ನಂತೆಯೇ ವಿಶ್ವವಿಖ್ಯಾತ ಅಂತಾರಾಷ್ಟ್ರೀಯ ಸುಗಂಧದ್ರವ್ಯಗಳ ಬ್ರ್ಯಾಂಡ್. ಭಾರತದಲ್ಲಿ 'ಪ್ಲೇಬಾಯ್' ತನ್ನ ಮಾರಾಟವನ್ನು ಹೆಚ್ಚು ಮಾಡಲು ಮಲ್ಲಿಕಾಳನ್ನು ಕಣಕ್ಕಿಳಿಸುತ್ತಿದೆಯಂತೆ. ಇನ್ನು ಪ್ಲೇಬಾಯ್ ಸುಗಂಧ ದ್ರವ್ಯದೊಂದಿಗೆ ಮಲ್ಲಿಕಾ ಫೋಟೋವೂ ಅಚ್ಚಾಗಲಿದೆ. ಅಂತೂ ಮಲ್ಲಿಕಾ ಪರಿಮಳ ಹರಡಲಿದೆ.
webdunia
IFM

Share this Story:

Follow Webdunia kannada