ಪ್ರೇಮಿಗಳ ದಿನ ಕನ್ನಡ ಚಂದ್ರ ತಮಿಳಿನಲ್ಲಿ ಮಿಂಚಿಂಗ್ !
, ಮಂಗಳವಾರ, 4 ಫೆಬ್ರವರಿ 2014 (11:30 IST)
ಫೆಬ್ರವರಿ ತಿಂಗಳಲ್ಲಿ ವ್ಯಾಲೆಂಟೈನ್ಸ್ ದೇ. ಇದರ ತಯಾರಿ ಬಗ್ಗೆ ಹೇಳುತ್ತಾ ಹೋದರೆ ಲಿಸ್ಟ್ ದೊಡ್ಡದಾಗುತ್ತದೆ. ಆದರು ಹೇಳುವ ಸಂಗತಿಗಳು ಸಹ ಬೇಕಾದಷ್ಟಿದೆ ಎಂದೇ ಹೇಳ ಬಹುದಾಗಿದೆ. ಸಿನಿಮಾದವರು ಸಹ ಇದಕ್ಕೆ ಹೊರತಲ್ಲ. ಕನ್ನಡ ಚಿತ್ರರಂಗದ ವಿಶೇಷ ನಿರ್ದೇಶಕಿ ರೂಪಾ ಅಯ್ಯರ್. ಆಕೆ ಕೇವಲ ಚಿತ್ರಗಳನ್ನು ಮಾತ್ರವಲ್ಲ ಸಮಾಜಮುಖಿ ಕೆಲಸಗಳಲ್ಲೂ ಹೆಚ್ಚಿನ ಗಮನ ನೀಡಿ ತನ್ನದೇ ಆದ ಸ್ಥಾನ ಹೊಂದಿದ್ದಾಳೆ ಈ ಚೆಲುವೆ. ಈಗ ಈ ಕ್ರಿಯೇಟಿವ್ ನಟಿ ತಮ್ಮ ಅತ್ಯಂತ ಪ್ರೀತಿಯ ಪ್ರಾಜೆಕ್ಟ್ ಚಂದ್ರ ಸಿನಿಮಾವನ್ನು ತಮಿಳಿನಲ್ಲಿ ಬಿಡುಗಡೆ ಮಾಡುವತ್ತ ಗಮನ ಹರಿಸಿದ್ದಾರೆ. ನೆನಪಿರಲಿ ಪ್ರೇಂ ಮತ್ತು ಶ್ರೇಯ ಶರಣ್ ಮುಖ್ಯ ಭೂಮಿಕೆಯಲ್ಲಿ ಇರುವ ಈ ಚಿತ್ರದ ತಮಿಳು ಅವತರಣಿಕೆ ವ್ಯಾಲೆಂಟೈನ್ಸ್ ದಿನ ಬಿಡುಗಡೆ ಆಗುತ್ತಿದೆ. ಇದು ವಿಶ್ವ ವ್ಯಾಪ್ತಿಯಾಗಿ ರಿಲೀಸ್ ಆಗುತ್ತಿರುವುದ ಅತ್ಯಂತ ಖುಷಿಯ ಸಂಗತಿ. ಕನ್ನಡದಲ್ಲಿ ಥಿಯೇಟರ್ ಗಳು ಇಲ್ಲದೆ ಪರದಾಡಿದ ಚಿತ್ರವೂ ತಮಿಳನಲ್ಲಿ ಗೆಲುವು ಕಾಣುವ ಸಾಧ್ಯತೆ ಹೆಚ್ಚು. ಡಬ್ಬಿಂಗ್ ವಿಷಯದಲ್ಲಿ ಕನ್ನಡ ಹೆಮ್ಮೆಯ ಕವಿ-ಲೇಖಕ ಚಂದ್ರ ಶೇಖರ ಕಂಬಾರ ಅವರಿಗೆ ಡಬ್ಬಿಂಗ್ ವಿಷಯದಲ್ಲಿ ಬಾಯಿಗೆ ಬಂದ್ಗೆ ಮಾತಾಡಿದ ನಟ ಪ್ರೇಂಕುಮಾರ್ ಅವರ ಚಿತ್ರ ಈಗ ತಮಿಳಿನಲ್ಲಿ ಅವತರಣಿಕೆಯಲ್ಲಿ ಬಿಡುಗಡೆ ಆಗುತ್ತಿದೆ ಅನ್ನುವುದು ಸಂತೋಷ ಸಂಗತಿ.
ಅಭಿ ರಾಮಿ ಮೆಗಾ ಮಾಲಿನಲ್ಲಿ ವಿಶ್ವಾದ್ಯಂತ ಬಿಡುಗಡೆಯ ಭಾಗ್ಯ ಕಾಣುತ್ತಿದೆ. ರೂಪ ಈ ಚಿತ್ರಕ್ಕೆ ಸಂಬಂಧ ಪಟ್ಟಂತೆ ಅನೇಕ ಹೊಸತನಗಳನ್ನು ಸೃಷ್ಟಿಸಿದ್ದಾರೆ ಎಂದೇ ಹೇಳ ಬಹುದಾಗಿದೆ. ಇದೊಂದು ರಾಯಲ್ ಲವ್ ಯುದ್ಧದ ಕಥಾ ಹಂದರ ಇರುವ ಚಿತ್ರವಾಗಿದೆ. ಪ್ರೀತಿಗೆ ಯಾವುದೇ ರೀತಿಯ ಅಂತಸ್ತುಗಳಿಲ್ಲ ಎನ್ನುವುದು ಈ ಕಥೆಯು ತಿಳಿಸುತ್ತದೆ. ನಿಜವಾದ ಪ್ರೇಮಕ್ಕೆ ಸಾವಿಲ್ಲ ಎಂಬುದೇ ಇದರ ಮುಖ್ಯ ಸಂಗತಿ ಎನ್ನುವುದು ಮುಖ್ಯವಾಗುತ್ತದೆ. ರೂಪ ಅಯ್ಯರ್ ಅವರು ತಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಒರೆ ಹಚ್ಚಿ ತೆಗೆದಿರುವ ಚಿತ್ರ ಇದಾಗಿದೆ ಎಂದೇ ಹೇಳ ಬಹುದಾಗಿದೆ. ಕನ್ನಡ ಪ್ರೇಕ್ಷಕರನ್ನು ರಂಜಿಸಿದ ಚಂದ್ರ ಈಗ ತಮಿಳು ವೀಕ್ಷಕರನ್ನು ರಂಜಿಸಲು ಹೊರಟಿದೆ.. ಅವರಿಗೆ ಆಲ್ ದ ಬೆಸ್ಟ್ ಹೇಳೋಣ .