Article Bollywood Gossips %e0%b2%aa%e0%b3%8d%e0%b2%b0%e0%b3%80%e0%b2%a4%e0%b2%bf %e0%b2%8f%e0%b2%95%e0%b3%86 %e0%b2%ad%e0%b3%82%e0%b2%ae%e0%b2%bf %e0%b2%ae%e0%b3%87%e0%b2%b2%e0%b2%bf%e0%b2%a6%e0%b3%86 %e0%b2%ac%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d %e0%b2%89%e0%b2%a4%e0%b3%8d%e0%b2%a4%e0%b2%b0 109021400064_1.htm

Daily Horoscope

Select Your Language

Notifications

webdunia
webdunia
webdunia
webdunia

ಪ್ರೀತಿ ಏಕೆ ಭೂಮಿ ಮೇಲಿದೆ?: ಬಾಲಿವುಡ್ ಉತ್ತರ

ಪ್ರೀತಿ
IFM
ಈ ವರ್ಷದ ವ್ಯಾಲೆಂಟೈನ್ಸ್ ಡೇಗೆ ಪ್ರತಿ ವರ್ಷ ಎದುರಾಗಿತ್ತಿದ್ದಕ್ಕಿಂತ ಹೆಚ್ಚಿನ ವಿರೋಧ ವ್ಯಕ್ತವಾಗಿದೆ. ಅಷ್ಟೇ ಸುದ್ದಿಯೂ ಆಗಿದೆ. ಅಲ್ಲಿ ಚೆಡ್ಡಿ, ಸೀರೆಗಳು ಮೆರೆದಾಡಿವೆ. ಪ್ರೇಮಿಗಳಿಗೆ ಮದುವೆ ಮಾಡಿಸಲು ಹೊರಟ ಪ್ರಮೋದ್ ಮುತಾಲಿಕರಿಗೆ ಚೆಡ್ಡಿಯನ್ನು ಮಹಿಳಾಮಣಿಗಳು ಉಡುಗೊರೆಯಾಗಿ ಕೊಟ್ಟಿದ್ದರೆ, ಅತ್ತ ಚೆಡ್ಡಿ ಕಳುಹಿಸಿದವರಿಗೆ ಸೀರೆ, ಕುಂಕುಮ, ಬಳೆಗಳನ್ನು ಮುತಾಲಿಕ್ ಕಳುಹಿಸಿದ್ದಾರೆ.

ಆದರೂ ವ್ಯಾಲೆಂಟೈನ್ಸ್ ಡೇಗೆ ಯಾವುದೇ ಅಡ್ಡಿಯಿಲ್ಲ. ಪ್ರೀತಿ ಎನ್ನುವುದು ಮನಸುಗಳ ಮಾತಿನ ಪೆಟ್ಟಿಗೆ. ಅದನ್ನು ಒಡೆಯುವವರು ಯಾರು. ತಡೆಯುವವರು ಯಾರು. ಪ್ರೀತಿಗೆ ಪ್ರೀತಿಯೇ ಸಾಟಿ. ಅದನ್ನು ಪ್ರೀತಿಯಿಂದಲೇ ಗೆಲ್ಲಬೇಕು ಹೊರತು ಚಾಟಿಯಿಂದಲ್ಲ. ಹೀಗಿರುವಾಗ ನಮ್ಮ ಬಾಲಿವುಡ್ ತಾರೆಗಳು ವ್ಯಾಲೆಂಟೈನ್ಸ್ ಡೇ ಬಗ್ಗೆ ಏನಭಿಪ್ರಾಯ ಹೊಂದಿದ್ದಾರೆ ಎನ್ನುವುದು ಕುತೂಹಲ ಅಲ್ಲವೇ? ಅವರಿಗೂ ಕನಸುಗಳಿರುತ್ತವೆ. ತನ್ನ ಪ್ರೀತಿಯ ಹುಡುಗು/ಹುಡುಗಿಯ ಜತೆ ಆ ದಿನ ಪೂರ್ತಿ ಕಳೆಯಬೇಕು ಎಂಬ ಆಸೆಗಳಿರುತ್ತವೆ. ಕೆಲವರು ಪ್ರೀತಿಯಲ್ಲಿ ಬಿದ್ದವರು, ಮತ್ತೆ ಕೆಲವರು ತೆವಲುತ್ತಿರುವವರು. ಉಳಿದವರು ಇನ್ನೂ ಅನುಭವಿಸುತ್ತಿರುವವರು. ಈ ಬಗ್ಗೆ ಕೆಲವರನ್ನು ಮಾತನಾಡಿಸಿ ಅಭಿಪ್ರಾಯ ನೀಡಲಾಗಿದೆ.. ಓದಿಕೊಳ್ಳಿ.

ಕಂಗನಾ ರಣಾವತ್: ವ್ಯಾಲೆಂಟೈನ್ಸ್‌‍ ಡೇ ಅಂದರೆ ನನ್ನನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ನನ್ನಿಂದ ಪರಿಶುದ್ಧ, ನಿಸ್ವಾರ್ಥ ಪ್ರೀತಿ ಎಂದರ್ಥ. ಇದಕ್ಕಾಗಿ ನನ್ನ ಉಡುಗೊರೆ ಗುಲಾಬಿಗಳು ಮತ್ತು ಕ್ಯಾಂಡಲ್‌ಗಳು.

ಪ್ರೀತಿ ಝಿಂಟಾ: ನನ್ನ ಕೆಲಸಗಳ ಮಧ್ಯೆ ಹೊಂದಾಣಿಕೆ ಮಾಡಿಕೊಂಡು ನಾನು ಲಭ್ಯಳಿದ್ದೇನೆ. ಹಾಗಾಗಿ ನನ್ನನ್ನು ಪ್ರೀತಿಸುವವರಿಗಾಗಿ ನನ್ನಲ್ಲಿ ಸಮಯವಿದೆ. ಇದಕ್ಕಿಂತ ಹೆಚ್ಚಿನದು ನನಗೆ ವ್ಯಾಲೆಂಟೈನ್ಸ್‌‍ ಡೇಯಿಂದ ಇನ್ನೇನು ಬೇಕಿದೆ?
webdunia
IFM
ಸಮೀರ್ ದತ್ತಾನಿ (ಧ್ಯಾನ್): ವ್ಯಾಲೆಂಟೈನ್ಸ್‌‍ ಡೇ ದಿನವೇ ಕ್ಯಾಮರಾ ಜತೆಗಿನ ನನ್ನ ಸಂಬಂಧ ಆರಂಭವಾಗಿತ್ತು. ನಾನು ಮೊದಲು ಅಭಿನಯಿಸಿದ್ದು 'ವ್ಯಾಲೆಂಟೈನ್ಸ್‌‍ ಡೇ' ಎಂಬ ಮ್ಯೂಸಿಕ್ ವಿಡಿಯೋಕ್ಕಾಗಿ. ಆಗಿನಿಂದ ನನಗೆ ವ್ಯಾಲೆಂಟೈನ್ಸ್‌‍ ಡೇ ಅಂದರೆ ವಿಶೇಷ.

ಮನೀಷಾ ಕೊಯಿರಾಲಾ: ನಾನು ವ್ಯಾಲೆಂಟೈನ್ಸ್‌‍ ಡೇಯನ್ನು ಕುಟುಂಬ ಮತ್ತು ಆಪ್ತರ ಜತೆ ಕಳೆಯುತ್ತೇನೆ. ಪ್ರತಿ ಸಂಬಂಧಗಳಲ್ಲೂ ಪ್ರೀತಿಯ ಅನುಭವವನ್ನು ಪಡೆಯಿರಿ ಎಂಬ ಸಂದೇಶ ನಾನು ಕೊಡಬಲ್ಲೆ.

ಊರ್ಮಿಳಾ ಮಾಂತೋಡ್ಕರ್: ವ್ಯಾಲೆಂಟೈನ್ಸ್‌‍ ಡೇ ದಿನ ನನ್ನ ಆಪ್ತರು ಮತ್ತು ಕುಟುಂಬಕ್ಕೆ ನನ್ನ ಪ್ರೀತಿಯನ್ನು ಅರ್ಥ ಮಾಡಿಸುತ್ತೇನೆ. ಬೆರಗುಗೊಳಿಸುವ ಬಿನ್ನಾಣದೊಂದಿಗೆ ನಾನು ಕಾಣುವುದೇ ಒಂದು ಉಡುಗೊರೆ.

ಶಿಲ್ಪಾ ಶೆಟ್ಟಿ: ನನಗೆ ಈಗಾಗಲೇ ವ್ಯಾಲೆಂಟೈನ್ಸ್‌‍ ಡೇ ಉಡುಗೊರೆ ಸಿಕ್ಕಿದೆ. ಅದು ಐಪಿಎಲ್. ಆ ಉಡುಗೊರೆ ಕೊಟ್ಟ ವ್ಯಕ್ತಿಯನ್ನು ನಾನು ಪಡೆದಿದ್ದೇನೆ. ಇದಕ್ಕಿಂತ ಹೆಚ್ಚಿನದಿನ್ನೇನು ಬೇಕು ನನಗೆ?

ಬಿಪಾಶಾ ಬಸು: ನಾನು ಪ್ರೀತಿಸುವ ಎಲ್ಲಾ ಜನರಿಗಾಗಿ ವ್ಯಾಲೆಂಟೈನ್ಸ್‌‍ ಡೇ ನನಗೆ ವಿಶೇಷ. ನಾನು ಅವರನ್ನು ಎಷ್ಟು ಪ್ರೀತಿಸುತ್ತಿದ್ದೇನೆ ಎಂದು ತೋರಿಸುತ್ತೇನೆ. ವ್ಯಾಲೆಂಟೈನ್ಸ್‌‍ ಡೇಗೆ ನನ್ನ ಉಡುಗೊರೆ ನೂರಾರು ಗುಲಾಬಿಗಳು. ಜಾನ್ ನನಗದನ್ನು ತರುತ್ತಾನೆಂದು ನನಗ್ಗೊತ್ತು.

ರೈಮಾ ಸೇನ್: ನಾನು ಏಕಾಂಗಿ. ಹಾಗಾಗಿ ನಾನು ವ್ಯಾಲೆಂಟೈನ್ಸ್‌‍ ಡೇಯಂದು ಕುಟುಂಬಕ್ಕೆ ಕೊಡಬಹುದಾದ ಏಕೈಕ ಉಡುಗೊರೆ ನನ್ನ ಸಮಯ ಮಾತ್ರ.

ಮುಗ್ಧಾ ಘೋಡ್ಸೆ: ವ್ಯಾಲೆಂಟೈನ್ಸ್‌‍ ಡೇ ಅಂದರೆ ನನಗೆ ಮತ್ತೊಂದು ದಿನ ಮಾತ್ರ. ನಾನಂದು ನನ್ನ ಗೆಳೆಯನ ಮದುವೆಗಾಗಿ ಗೋವಾಕ್ಕೆ ತೆರಳಲಿದ್ದೇನೆ.

ಮಲೈಕಾ ಅರೋರಾ: ನನ್ನ ಪ್ರಕಾರ ವ್ಯಾಲೆಂಟೈನ್ಸ್‌‍ ಡೇ ಅಂದರೆ ಸ್ವಘೋಷಿತ ನೈತಿಕ ಮೌಲ್ಯಗಳ ರಕ್ಷಕರ ಭಯವಿಲ್ಲದೆ ಜನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹೊಂದಿರುವ ಸ್ವಾತಂತ್ರ್ಯ.

ಮಿನಿಷಾ ಲಾಂಬ: ನೀವು ಪ್ರೀತಿಸಲ್ಪಡುವಾಗ ಇಡೀ ವರ್ಷವೇ ನಿಮ್ಮ ಸುತ್ತ ವ್ಯಾಲೆಂಟೈನ್ಸ್‌‍ ಡೇ ಆಗಿರುತ್ತದೆ. ನಾನು ಪ್ರೀತಿಯಲ್ಲಿದ್ದೇನಾ? ಒಬ್ಬ ಮಹಿಳೆಯ ಹೃದಯದ ಬಗ್ಗೆ ಯಾರಿಗೇನು ಗೊತ್ತು? ಸ್ವತಃ ಮಹಿಳೆಗೇ ತಿಳಿದಿಲ್ಲ.
webdunia
IFM
ತುಷಾರ್ ಕಪೂರ್: ವ್ಯಾಲೆಂಟೈನ್ಸ್‌‍ ಡೇ ದಿನ ನಾನಿನ್ನೂ ಒಬ್ಬನೇ ಎಂಬುದನ್ನು ನೆನಪಿಸುತ್ತದೆ. ಹಾಗಾಗಿ ವ್ಯಾಲೆಂಟೈನ್ಸ್‌‍ ಡೇ ನನಗೆ ಪ್ರೀತಿಯ ದಿನ ಹೇಗಾಗುತ್ತದೆ.

ಅಮೃತಾ ಅರೋರಾ: ವ್ಯಾಲೆಂಟೈನ್ಸ್‌‍ ಡೇ ಅಂದರೆ ನನಗೆ ಸಂಬಂಧವೇ ಇಲ್ಲ. ಪ್ರೀತಿ ಯಾವತ್ತೂ ಆಚರಿಸಲ್ಪಡಬೇಕು. ಅದು ನಿರಂತರ. ಒಂದು ದಿನಕ್ಕೆ ಸೀಮಿತವಲ್ಲ.

ಅದ್ನಾನ್ ಸಾಮಿ: ನನ್ನ ಹೆಂಡತಿ ನನಗೆ ಎಂತಹಾ ವ್ಯಾಲೆಂಟೈನ್ಸ್ ಡೇ ಉಡುಗೊರೆ ನೀಡಿದ್ದಾಳೆ.. ನೋಡಿ.

ತನುಶ್ರೀ ದತ್ತಾ: ವ್ಯಾಲೆಂಟೈನ್ಸ್ ಡೇಯಂದು ಏಕಾಂಗಿಯಾಗಿರುವುದು ಅದ್ಭುತ ಅನುಭವ. ಆ ದಿನ ನಿಮಗೆ ಹೊಂದಿಕೆಯಾಗುವವರನ್ನು ಆಯ್ಕೆ ಮಾಡಿಕೊಳ್ಳಬಹುದು.

ಜಿಯಾ ಖಾನ್: ಇಲ್ಲಿ ಬೇಕಾದಷ್ಟು ಕೆಲಸಗಳಿವೆ. ಪ್ರೀತಿ ಮಾಡಲು ಪುರುಸೊತ್ತಿಲ್ಲ. ವ್ಯಾಲೆಂಟೈನ್ಸ್ ಡೇಯಂದು ನಾನು ನನ್ನ ಮನೆಯವರಿಂದ ದೂರ ಇರುತ್ತೇನೆ. ನನ್ನ ನಿಜವಾದ ಪ್ರೀತಿ ಅಲ್ಲಿದೆ.

Share this Story:

Follow Webdunia kannada