Article Bollywood Gossips %e0%b2%aa%e0%b3%8d%e0%b2%b0%e0%b2%bf%e0%b2%af%e0%b2%be%e0%b2%82%e0%b2%95%e0%b2%be %e0%b2%b9%e0%b2%be%e0%b2%a1%e0%b3%81%e0%b2%97%e0%b2%b3 %e0%b2%86%e0%b2%b2%e0%b3%8d%e0%b2%ac%e0%b2%82 107062300028_1.htm

Daily Horoscope

Select Your Language

Notifications

webdunia
webdunia
webdunia
webdunia

ಪ್ರಿಯಾಂಕಾ ಹಾಡುಗಳ ಆಲ್ಬಂ

ಪ್ರಿಯಾಂಕಾ
ಬಾಲಿವುಡ್ ತಾರೆ ಪ್ರಿಯಾಂಕಾ ಛೋಪ್ರಾ ಈಗ ಭಾಗಶಃ ಹಾಡುಗಾರರಾಗುತ್ತಿದ್ದಾರೆ. ಆದರೆ ಪೂರ್ಣ ಪ್ರಮಾಣದ ಗಾಯಕಿಯಾಗಲು ಿನ್ನೂ ಕಾಲಸಮೀಪಿಸಿಲ್ಲ, ನಟನೆಯಲ್ಲಿ ಇನ್ನೂ ಮುಂದುವರಿಯಬೇಕಂತೆ.

ಪ್ರಿಯಾಂಕಾ ಅವರ ತಂದೆ ಡಾ.ಛೋಪ್ರಾ ಅವರು ಇದೀಗ ತಮ್ಮದೇ ಹಾಡುಗಳ ಆಲ್ಬಂ ಹೊರತರುತ್ತಿದ್ದಾರೆ. ಇದರಲ್ಲಿ ಮಗಳು ಪ್ರಿಯಾಂಕಾ ಅವರ ಕಂಠದಾನವಿರುವ ಕೆಲವು ಹಾಡುಗಳೂ ಇವೆಯಂತೆ.

ಡಾ. ಛೋಪ್ರಾ ಅವರು ವೃತ್ತಿಯಲ್ಲಿ ಓರ್ವ ಸರ್ಜನ್, ಪ್ರವೃತ್ತಿಯಲ್ಲಿ ಕಲಾವಿದರಾಗಿದ್ದು,ಈಗ ಹೊಸ ಆಲ್ಬಂ ಟಿ-ಸಿರೀಸ್ ಜೊತೆಗೂಡಿ ಹೊರತರಲಿದ್ದಾರೆ.

ಡಾಕ್ಟರ್ ಬಾಲಿವುಡ್‌ನಲ್ಲಿ ಶೈನ್ ಆಗದಿದ್ದರೂ, ಹಾಡುಗಾರಿಕೆ ನನ್ನು ಪ್ರೀತಿಯ ಪ್ರಕಾರ ಎನ್ನುತ್ತಾರೆ. ಈ ಕಾರಣದಿಂದಲೇ ಅವರ ಹೊಸ ಆಲ್ಬಂ ಇನ್ನಷ್ಚು ನಿರೀಕ್ಷೆಗೆ ಕಾರಣವಾಗಿದೆ.

ಸಂಗೀತ ಇಂಜಿನಿಯರ್ ನಿಯಾಝ್ ಅವರು ಹೇಳುವಂತೆ ಡಾ.ಛೋಪ್ರಾ ಉತ್ತಮ ಗಝಲ್ ಗಾಯಕ,ಶಾಸ್ತ್ರೀಯ ಸಂಗೀತ ಹಾಗೂ ಪಾಪ್ ಗಾಯನ, ಇನ್ನಿತರ ಗಾಯನಗಳಲ್ಲೂ ಇವರು ಸಿದ್ಧ ಹಸ್ತರು ಎಂದೆನ್ನುತ್ತಾರೆ. ಈ ಕಾರಣದಿಂದಲೇ ಪ್ರಿಯಾಂಕಾರಲ್ಲೂ ಹಾಡಿನ ಮೋಡಿ ಉಳಿದುಕೊಂಡಿದೆ.

Share this Story:

Follow Webdunia kannada