ಪ್ರಿಯಾಂಕ ಚೋಪ್ರಾ ಯಾರಿಗೊಲಿಯುತ್ತಾರೆ ?
ದೋಸ್ತಾನ ಚಿತ್ರ ಜಾನ್ ಅಬ್ರಹಾಂ, ಅಭಿಷೇಕ್ ಬಚ್ಚನ್ ಮತ್ತು ಪ್ರಿಯಾಂಕ ಚೋಪ್ರಾ ಅವರನ್ನೊಳಗೊಂಡ ತ್ರಿಕೋನ ಪ್ರೇಮಕತೆಯನ್ನು ಹೊಂದಿದೆ. ಚಿತ್ರದ ಕ್ಲೈಮಾಕ್ಸ್ ಬಗ್ಗೆ ಸಾಕಷ್ಟು ವಿವಾದಗಳು, ಚರ್ಚೆಗಳು ಇವೆ. ಕೆಲವರ ಪ್ರಕಾರ ಪ್ರಿಯಾಂಕ ಕೊನೆಯಲ್ಲಿ ಅಭಿಗೆ ದೊರಯುತ್ತಾರೆ, ಇನ್ನು ಕೆಲವರು ಹೇಳುವಂತೆ ನಿರ್ಮಾಪಕ ಕರಣ್ ಜೋಹರ್‌ಗೆ ಈ ಅಂತ್ಯ ಹಿಡಿಸಿಲ್ಲ ಮತ್ತು ಅವರ ಅಣತಿಯಂತೆ ಬದಲಾದ ಕ್ಲೈಮಾಕ್ಸ್ ಪ್ರಕಾರ ಪ್ರಿಯಾಂಕ ಜಾನ್‌ಗೆ ದೊರೆಯುತ್ತಾರೆ. ಹಾಗಾದರೆ ಪ್ರಿಯಾಂಕ ಯಾರಿಗೊಲಿಯುತ್ತಾರೆ ?ಚಿತ್ರದಲ್ಲಿ ಯಾವುದೋ ಕಾರಣಕ್ಕೆ ಅಭಿಷೇಕ್ ಮತ್ತು ಜಾನ್ ತಾವು ಸಲಿಂಗಕಾಮಿಗಳಾಗಿರುವುದಾಗಿ ಹೇಳಿಕೊಳ್ಳುತ್ತಾರೆ. ಚಿತ್ರದಲ್ಲಿ ಪ್ರಿಯಾಂಕ ಫ್ಯಾಶನ್ ಪತ್ರಿಕೆಯಲ್ಲಿ ಉದ್ಯೋಗಸ್ಥೆಯಾಗಿರುತ್ತಾರೆ. ನಮ್ಮ ಬಳಿ ಈ ಚಿತ್ರಕ್ಕೆ ಇನ್ನೂ ಒಂದು ಕ್ಲೈಮಾಕ್ಸ್ ಕತೆಯಿದೆ. ಅಂತ್ಯದಲ್ಲಿ ಪ್ರಿಯಾಂಕ ಜಾನ್‌ಗೂ ಸಿಗುವುದಿಲ್ಲ, ಅಭಿಷೇಕ್‌ಗೂ ಸಿಗುವುದಿಲ್ಲ. ಮರೆಯದಿರಿ ಈ ಚಿತ್ರದಲ್ಲಿ ಬಾಬಿ ಡಿಯೋಲ್‌ಗೂ ಒಂದು ಪಾತ್ರವಿದೆ ಮತ್ತು ಅವರು ಪ್ರಿಯಾಂಕರನ್ನು ಗೆಲ್ಲುತ್ತಾರೆ. ಬಾಬಿ ಚಿತ್ರದ ಪೋಸ್ಟರ್‌ಗಳಲ್ಲಾಗಲಿ ಪ್ರಮೊಗಳಲ್ಲಾಗಲಿ ಕಾಣಿಸಿಕೊಳ್ಳುವುದಿಲ್ಲ. ನಿರ್ದೇಶಕರು ಕ್ಲೈಮಾಕ್ಸ್ ಅನ್ನು ಕುತೂಹಲದಲ್ಲಿಡಲು ಈ ಉಪಾಯ ಉಪಯೋಗಿಸಿರಬಹುದು. ಆದರೆ ಇದು ಎಷ್ಟು ನಿಜ ಎಂದು ಚಿತ್ರ ಬಿಡುಗಡೆಯಾದ ಮೇಲಷ್ಟೇ ತಿಳಿಯಬೇಕಿದೆ.